ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿ ಆಗಸ್ಟ್ 15ರ ನಂತರ ತುರ್ತು ಸಭೆ: ಸಚಿವ ಆರ್ ಅಶೋಕ್
ಸಭೆಯಲ್ಲಿ ಸಾಕಷ್ಟು ಅಗತ್ಯ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರಲ್ಲಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಸ್ಲೋ ಮೆಡಿಸನ್ ನೀಡುತ್ತೇವೆ. ನೈಟ್ ಕರ್ಫ್ಯೂ ಸಮಯ (Night Curfew), ದೇವಸ್ಥಾನ, ಸಾರ್ವಜನಿಕ ಸಭೆ, ಸಮಾರಂಭಗಳಿಗೆ ನಿಯಂತ್ರಣ ವಿಧಿಸುತ್ತೇವೆ. ಆಗಸ್ಟ್ 15ರ (August 15) ನಂತರ ಕೊರೊನಾ ತುರ್ತು ಸಭೆ ನಡೆಸುತ್ತೇವೆ. ಸಭೆಯಲ್ಲಿ ಸಾಕಷ್ಟು ಅಗತ್ಯ ನಿರ್ಧಾರಗಳನ್ನ ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರಲ್ಲಿ ಕಂದಾಯ ಸಚಿವ ಆರ್.ಅಶೋಕ್ (R Ashok) ತಿಳಿಸಿದರು.
ಕರ್ನಾಟಕ ಸ್ಟ್ಯಾಂಪ್ ವಿಧೇಯಕ ತಿದ್ದುಪಡಿ ಮಾಡಿದ್ದೇವೆ. 45 ಲಕ್ಷದ ಫ್ಲ್ಯಾಟ್ ಖರೀದಿಸುವರಿಗೆ ಸ್ಟ್ಯಾಂಪ್ ಡ್ಯೂಟಿಯನ್ನು ಶೇಕಡಾ 5ರಿಂದ 3ಕ್ಕೆ ಇಳಿಕೆ ಮಾಡಲಾಗಿದೆ ಎಂದು ಸಹ ಅವರು ತಿಳಿಸಿದರು.
2024ರ ಒಲಂಪಿಕ್ಸ್ಗೆ ಕರ್ನಾಟಕದಿಂದ ಕನಿಷ್ಠ ನೂರು ಕ್ರೀಡಾಪಟುಗಳನ್ನು ಕಳಿಸಲು ಯೋಜನೆ: ಸಚಿವ ನಾರಾಯಣಗೌಡ ಬೆಂಗಳೂರು: 2024 ಒಲಂಪಿಕ್ಸ್ಗೆ (Olympics 2024) ಕರ್ನಾಟಕದಿಂದ ಕನಿಷ್ಠ ನೂರು ಜನ ಕ್ರೀಡಾಪಟುಗಳನ್ನು ಕಳುಹಿಸುವ ಯೋಜನೆ ರೂಪಿಸಿದೆ. ಈಗಾಗಲೇ ರಾಜ್ಯದ 35 ಕ್ರೀಡಾಪಟುಗಳನ್ನು ಗುರುತಿಸಲಾಗಿದೆ. ಅವರಿಗೆ ತಲಾ 5 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.
ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ದೇಶದ ಎಲ್ಲೆಡೆಯಿಂದ 7,000 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಮಂದಿನ ಮಾರ್ಚ್ 5 ರಿಂದ 12 ದಿಂದ ಖೇಲೋ ಇಂಡಿಯಾ ಗೇಮ್ಸ್ ನಡೆಯಲಿದೆ. ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದ್ಸ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಸೆಪ್ಟೆಂಬರ್ನಿಂದ ಆರಂಭವಾಗಲಿದೆ. ಅಲ್ಲಿ ವಾರ್ಷಿಕ 100 ಪೈಲಟ್ಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ತರಬೇತಿ ಶಾಲೆ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ:
Naga Panchami 2021: ಜಿಲ್ಲೆಗಳಲ್ಲಿ ನಾಗರಪಂಚಮಿ ಹಬ್ಬದ ಸಂಭ್ರಮ, ಉಲ್ಲಂಘನೆಯಾಗುತ್ತಿದೆ ಕೊರೊನಾ ನಿಯಮ
(Revenue Minister R Ashok says Emergency meeting after August 15 on CoronaVirus control)
Published On - 3:15 pm, Fri, 13 August 21