ಕಾಡಂಚಿನಲ್ಲಿ ಎರಡು ಹುಲಿಗಳ ನಡುವೆ ಟೆರಿಟೋರಿಯಲ್ ಕಾದಾಟ; 5 ವರ್ಷದ ಹುಲಿ ಸಾವು
ಸುಮಾರು 5 ವರ್ಷದ ಗಂಡು ಹುಲಿ(Tiger Death) ಸಾವನಪ್ಪಿದೆ. ವಯಸ್ಕ ಎರಡು ಗಂಡು ಹುಲಿಗಳು ತನ್ನ ವಾಸ ಸ್ಥಾನದ ವ್ಯಾಪ್ತಿಯನ್ನ ಗುರುತಿಸಿ ಕೊಳ್ಳುವ ಸಲುವಾಗಿ ಈ ಫೈಟಿಂಗ್ ನಡೆದಿದೆ.
ಚಾಮರಾಜನಗರ: ಟೆರಿಟೋರಿಯಲ್ಗಾಗಿ(Territorial Fight) ಎರಡು ಹುಲಿಗಳ(Tigers) ನಡುವೆ ನಡೆದ ಫೈಟಿಂಗ್ ವೇಳೆ ಗಂಡು ಹುಲಿಯೊಂದು ಸಾವನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ವಲಯ ವ್ಯಾಪ್ತಿಯ ಕಣಿಯನಪುರ ಗ್ರಾಮದ ಕಾಡಂಚಿನ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಸುಮಾರು 5 ವರ್ಷದ ಗಂಡು ಹುಲಿ(Tiger Death) ಸಾವನಪ್ಪಿದೆ. ವಯಸ್ಕ ಎರಡು ಗಂಡು ಹುಲಿಗಳು ತನ್ನ ವಾಸ ಸ್ಥಾನದ ವ್ಯಾಪ್ತಿಯನ್ನ ಗುರುತಿಸಿ ಕೊಳ್ಳುವ ಸಲುವಾಗಿ ಈ ಫೈಟಿಂಗ್ ನಡೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ವಯಸ್ಕ ಹುಲಿಗಳು ತಮ್ಮ ಅವಾಸ ಸ್ಥಾನ ಗುರುತು ಮಾಡಿಕೊಳ್ಳುವ ಸಲುವಾಗಿ ಮತ್ತೊಂದು ಹುಲಿಯ ಮೇಲೆ ಫೈಟಿಂಗ್ ನಡೆಸುತ್ತವೆ. ಪ್ರತಿ ಹುಲಿ ವಾಸ ಮಾಡಲು ಸುಮಾರು 10 ಚದರ ಕಿಲೋಮೀಟರ್ ವ್ಯಾಪ್ತಿಯನ್ನ ತನ್ನ ಅವಾಸ ತಾಣವನ್ನಾಗಿ ಮಾಡಿ ಕೊಳ್ಳುತ್ತವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 1 ಸಾವಿರದ 36 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಈಗಾಗಲೇ ಬಂಡಿಪುರದಲ್ಲಿ ಸುಮಾರು 145ಕ್ಕೂ ಹೆಚ್ಚು ಹುಲಿಗಳು ಇವೆ ಎಂದು ಅಂದಾಜು ಮಾಡಲಾಗಿದೆ.
ಜುಲೈ 29 ರಂದು ನಡೆದ ರಾಷ್ಟ್ರೀಯ ಹುಲಿ ದಿನಾಚರಣೆ ವೇಳೆ ಬಂಡೀಪುರದಲ್ಲಿ ಹೆಚ್ಚಾಗುತ್ತಿರುವ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್ ಟಿಸಿ) ಸಂತಸ ವ್ಯಕ್ತಪಡಿಸಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನ ಗ್ರೀನ್ ವಲಯ ಎಂದು ಘೋಷಣೆ ಮಾಡಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಹೇರಳವಾಗಿ ಆನೆ, ಜಿಂಕೆ, ಕಡವೆ, ಕಾಡೆಮ್ಮೆ ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಮಾಂಸಹಾರಿ ಪ್ರಾಣಿಗಳಾದ ಹುಲಿ, ಚಿರತೆ, ಸೀಳುನಾಯಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ನೆರೆಗೆ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕೇರಳ ವೈನಾಡು ಹುಲಿ ಸಂರಕ್ಷಿತ ಪ್ರದೇಶ ಹೊಂದಿಕೊಂಡಂತೆ ಇರುವುದರಿಂದ ವನ್ಯ ಪ್ರಾಣಿಗಳಿಗೆ ವಾಸ ಮಾಡಲು ಯೋಗ್ಯವಾದ ಸ್ಥಳವಾಗಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಸದ್ಯ ಸ್ಥಳಕ್ಕೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ನಟೇಶ್ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೈದ್ಯರು ಮೃತ ಹುಲಿಯ ಪೋಸ್ಟ್ ಮಾರ್ಟಂ ನಡೆಸಿದ ಬಳಿಕ ಹುಲಿಯ ಅಂತ್ಯಕ್ರಿಯೇ ನಡೆಸಲಾಯಿತು.
ಇದನ್ನೂ ಓದಿ: Girija Siddhi: ‘ಟಿಣಿಂಗ್ ಮಿಣಿಂಗ್ ಟಿಷ್ಯಾ’ ಮೂಲಕ ಕರುನಾಡ ಮನೆದ್ದಿರುವ ಗಿರಿಜಾ ಸಿದ್ದಿ ಮತ್ತು ತಂಡದವರ ವಿಶೇಷ ಸಂದರ್ಶನ