Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ಸಾವಿನಲ್ಲೂ ಒಂದಾದ ಹಿರಿಯ ದಂಪತಿ; ಮತ್ತೊಂದೆಡೆ ಮದುವೆಗೆ ನಿರಾಕರಣೆ -ಕಾರಿನಲ್ಲಿ ಪ್ರೇಮಿಗಳ ಸಜೀವ ದಹನ

ಒಂದೆಡೆ ಬಾಳುನಿದ್ದಕ್ಕೂ ಅನುದಾಂಪತ್ಯ ನಡೆಸಿದ್ದ ಹಿರಿಯ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ; ಮತ್ತೊಂದೆಡೆ ಮನೆಯವರು ಮದುವೆಗೆ ನಿರಾಕರಿಸಿದರು ಎಂದು ಯುವ ಪ್ರೇಮಿಗಳು ಕಾರಿನಲ್ಲಿ ಸಜೀವ ದಹನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೆಡೆ ಸಾವಿನಲ್ಲೂ ಒಂದಾದ ಹಿರಿಯ ದಂಪತಿ; ಮತ್ತೊಂದೆಡೆ ಮದುವೆಗೆ ನಿರಾಕರಣೆ -ಕಾರಿನಲ್ಲಿ ಪ್ರೇಮಿಗಳ ಸಜೀವ ದಹನ
ಸಾವಿನಲ್ಲೂ ಒಂದಾದ ಹಿರಿಯ ದಂಪತಿ
Follow us
TV9 Web
| Updated By: sandhya thejappa

Updated on: Aug 14, 2021 | 11:50 AM

ಒಂದೆಡೆ ಬಾಳುನಿದ್ದಕ್ಕೂ ಅನುದಾಂಪತ್ಯ ನಡೆಸಿದ್ದ ಹಿರಿಯ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ; ಮತ್ತೊಂದೆಡೆ ಮನೆಯವರು ಮದುವೆಗೆ ನಿರಾಕರಿಸಿದರು ಎಂದು ಯುವ ಪ್ರೇಮಿಗಳು ಕಾರಿನಲ್ಲಿ ಸಜೀವ ದಹನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  ಹಾವೇರಿ ವರದಿ: ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮದಲ್ಲಿ ಹಿರಿಯ ದಂಪತಿ ಸಾವಿನಲ್ಲಿ ಒಂದಾಗಿದ್ದಾರೆ. ಹೊನ್ನಮ್ಮ ಹುಳ್ಯಾಳ (60) ಮತ್ತು ಶೇಖರಗೌಡ ಹುಳ್ಯಾಳ(65) ಒಂದೇ ದಿನ ಕೊನೆಯುಸಿರೆಳೆದ ಹಿರಿಯ ಜೀವಗಳು.

ಮುಂಜಾನೆ 4 ಗಂಟೆ ವೇಳೆಗೆ ಪತ್ನಿ ಹೊನ್ನಮ್ಮ ಮೃತಪಟ್ಟರೆ ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ಶೇಖರಗೌಡ ಸಹ ಸ್ವಲ್ಪ ಸಮಯದಲ್ಲಿಯೇ ಕೊನೆಯುಸಿರೆಳೆದರು. ಹೊನ್ನಮ್ಮ ಹುಳ್ಯಾಳ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಚಾಮರಾಜನಗರ ವರದಿ: ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಿನಕನಹಳ್ಳಿ ಗ್ರಾಮದ ಬಳಿ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಬಳ್ಳಿ ಗ್ರಾಮದ ಕಾಂಚನ (20) ಮತ್ತು ಶ್ರೀನಿವಾಸ್ (24) ಸಜೀವವಾಗಿ ಭಸ್ಮಗೊಂಡ ಯುವ ಪ್ರೇಮಿಗಳು. ಯುವತಿ ಮನೆಯವರು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಳಂದೂರು ತಾಲೂಕಿನ ಕಿನಕನಹಳ್ಳಿ ಸಮೀಪದ ಜಮೀನಿನ ಬಳಿ ಘಟನೆ ನಡೆದಿದೆ.

ಯುವಕನ ಮನೆಯವರು ಎರಡು ಬಾರಿ ಯುವತಿಯ ಮನೆಗೆ ಹೋಗಿ ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಆದರೆ ಯುವತಿ ಮನೆಯವರು ಮದುವೆಗೆ ನಿರಾಕರಣೆ ಮಾಡಿದ್ದರು. ಮದುವೆಗೆ ನಿರಾಕರಣೆ ಮಾಡಿದ್ದರಿಂದ ಮೂರು ತಿಂಗಳ ಹಿಂದೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಯವರು ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿದ್ದರು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದರು.

ಯುವಕ ಚೇತರಿಸಿಕೊಂಡ ಬಳಿಕ ಎರಡನೇ ಬಾರಿಗೆ ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಯುವತಿ ಮನೆಯಲ್ಲಿ ಮದುವೆ ನಿರಾಕರಣೆ ಮಾಡಿದ್ದರಿಂದ ಇಬ್ಬರ ಲವ್ ಬ್ರೇಕ್ ಅಪ್ ಆಗಿತ್ತು. ಇದಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಗುರುವಾರ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿದ್ದಳು. ಯುವಕ ವ್ಯವಸಾಯದ ಜೊತೆಗೆ ಕ್ಯಾಬ್ ಒಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಯುವತಿ ಶುಕ್ರವಾರ ಬೆಳಗ್ಗೆ ಯುವಕನ ಜೊತೆ ಹೊರಗಡೆ ಹೋಗಿದ್ದರು. ಇಡೀ ದಿನ ಯುವಕನ ಕಾರಿನಲ್ಲಿಯೇ ಸುತ್ತಾಟ ನಡೆಸಿದ್ದರು. ಶುಕ್ರವಾರ ಸಂಜೆ ಆಗುತ್ತಿದ್ದಂತೆ ಕಾರಿಗೆ ಪೆಟ್ರೋಲ್ ಸುರಿದು ತಾವುಗಳು ಕಾರಿನಲ್ಲಿಯೇ ಇದ್ದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸೋದರಿಯ ಕೊಲೆ ಮಾಡಲಾಗಿದೆ ಎಂದು ಯುವತಿಯ ಸಹೋದರ ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಣ್ಣು, ಬಿಸ್ಕತ್ತು ಇಟ್ಟು ಮಗನಂತೆ ಸಾಕಿದ ನಾಯಿಯ ತಿಥಿ ಮಾಡಿದ ಹಾವೇರಿ ದಂಪತಿ; ಟೈಸನ್​ ನೆನೆದು ಕಣ್ಣೀರು

(elderly couple died on same day in haveri young lovers commit suicide in car in chamarajanagar)

ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಮುಂಬೈನ ಮಂತ್ರಾಲಯದ 7ನೇ ಮಹಡಿಯಿಂದ ಹಾರಿದ ವ್ಯಕ್ತಿ; ವಿಡಿಯೋ ವೈರಲ್
ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ
ಇಂಥ ಡ್ಯಾನ್ಸ್ ಮಾಡೋಕೆ ನಾಚಿಕೆ ಆಗಲ್ವಾ ಎಂದವರಿಗೆ ನಿವೇದಿತಾ ಗೌಡ ಉತ್ತರ
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎಲ್ಲರೂ ಇಂಥ ಮನಸ್ಥಿತಿ ಹೊಂದಿದ್ದರೆ ತಂಟೆ-ತಗಾದೆ ಸೃಷ್ಟಿಯಾಗಲಾರವು
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಎರಡೂ ಪಕ್ಷಗಳ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿ, ಅಶೋಕ ಅಧ್ಯಕ್ಷತೆ
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಲೋಕಾಯುಕ್ತ ವರದಿ ಮತ್ತು ಶಿಫಾರಸ್ಸನ್ನು ನಾನು ಇನ್ನೂ ಓದಿಲ್ಲ: ಶಿವಕುಮಾರ್
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕನ್ನಡ ಮಾತಾಡುವವರೇ ವಿರಳ: ಹೊರಟ್ಟಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಜಿಟಿ ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಮಾಡಿದ ಸಾಧನೆ ಏನು? ಜಮೀರ್
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಬೆಂಗಳೂರು: ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್​​ ಓಪನ್​
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು
ಕಂಡಕ್ಟರ್ ನಮ್ಮ ಮಗಳ ವಿರುದ್ಧ ಅವಾಚ್ಯ ಪದ ಬಳಸಿದ್ದು ನಿಜ: ಪಾಲಕರು