ಅಸಮಾಧಾನದ ಹೊಗೆಯಾಡುತ್ತಲೇ ಸಿಎಂ ಬೊಮ್ಮಾಯಿಗೆ ಮುಚ್ಚಿದ ಲಕೋಟೆ ಕೊಟ್ಟು ಬಂದ ಶಾಸಕ ಎಸ್.ಎ.ರಾಮದಾಸ್
ಈ ಮಧ್ಯೆ, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಮೈಸೂರು ಶಾಸಕ ಎಸ್.ಎ. ರಾಮದಾಸ್ ಮುಚ್ಚಿದ ಲಕೋಟೆ ಕೊಟ್ಟುಬಂದಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ನನ್ನ ಕೆಲಸದ ಅನುಭವಗಳು ಪಟ್ಟಿ ಇದೆ. ಸಮಯ ಇರುವಾಗ ಓದಿ ಎಂದು ಸಿಎಂಗೆ ಹೇಳಿದ್ದೇನೆ ಎಂದು ಸಿಎಂ ಬೊಮ್ಮಾಯಿ ಭೇಟಿ ಬಳಿಕ ರಾಮದಾಸ್ ಹೇಳಿದ್ದಾರೆ.
ಬೆಂಗಳೂರು: ಕುತೂಹಲಕಾರಿ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಖಂಡ ಸಚಿವ ಸ್ಥಾನ ಆಕಾಂಕ್ಷಿಗಳಾದ ಸಿಪಿ ಯೋಗೇಶ್ವರ್ ಮತ್ತು ಕೆ ರಾಮದಾಸ್ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದಲ್ಲಿ ಬೊಮ್ಮಾಯಿ ನಿವಾಸಕ್ಕೆ ಆಗಮಿಸಿದ ಯೋಗೇಶ್ವರ್ ಮತ್ತು ರಾಮದಾಸ್ ಇಬ್ಬರೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ರಾಮದಾಸ್ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಾ ಬಂದಿದ್ದರೆ ಯೋಗೇಶ್ವರ್ ದೆಹಲಿಗೆ ಪರೇಡ್ ನಡೆಸುತ್ತಲೇ ಇದ್ದಾರೆ ಎಂಬುದು ಗಮನಾರ್ಹ. ಬಸವರಾಜ ಬೊಮ್ಮಾಯಿ ಅವರೂ ಸಹ ಅಸಮಾಧಾನಿತರನ್ನ ಕರೆದು ಸಮಾಧಾನ ಪಡಿಸುವಂತಹ ಕೆಲಸ ಮಾಡ್ತಿದ್ದಾರೆ. ಆನಂದ್ ಸಿಂಗ್, ಎಂಪಿ ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಆರ್.ಶಂಕರ್ ಮನವೊಲಿಸುತ್ತಾ ಬಂದಿದ್ದಾರೆ. ಅದೇರೀತಿ ಯೋಗೇಶ್ವರ್ ಹಾಗೂ ರಾಮದಾಸ್ ರನ್ನ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ.
ಈ ಮಧ್ಯೆ, ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಮೈಸೂರು ಶಾಸಕ ಎಸ್.ಎ. ರಾಮದಾಸ್ ಮುಚ್ಚಿದ ಲಕೋಟೆ ಕೊಟ್ಟುಬಂದಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ನನ್ನ ಕೆಲಸದ ಅನುಭವಗಳು ಪಟ್ಟಿ ಇದೆ. ಸಮಯ ಇರುವಾಗ ಓದಿ ಎಂದು ಸಿಎಂಗೆ ಹೇಳಿದ್ದೇನೆ ಎಂದು ಸಿಎಂ ಬೊಮ್ಮಾಯಿ ಭೇಟಿ ಬಳಿಕ ಹೇಳಿದ ರಾಮದಾಸ್ ಅವರು ರಾಜ್ಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲವು ವಿಚಾರ ಚರ್ಚೆ ಮಾಡಿರುವುದಾಗಿ ತಿಳಿಸಿದರು.
ನಾನು ಇವತ್ತು ಸಿಎಂ ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಇತ್ತೀಚೆಗೆ ಮೈಸೂರಿಗೆ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಯಾಕೆ ಭೇಟಿ ಮಾಡಿಲ್ಲ ಎಂಬುದಕ್ಕೆ ಪತ್ರದ ಮೂಲಕ ಕಾರಣ ಕೊಡ್ತೇನೆ ಅಂದಿದ್ದೆ. ಅದರಂತೆ ಇವತ್ತು ಸಿಎಂ ಭೇಟಿ ಮಾಡಿ ಸೀಲ್ಡ್ ಕವರ್ ಕೊಟ್ಟಿದ್ದೇನೆ ಎಂದು ರಾಮದಾಸ್ ಹೇಳಿದರು.
ಮುಖ್ಯಮಂತ್ರಿಗಳನ್ನ ಈ ಹಿಂದೆ ಎರಡು ಮೂರು ಸಾರಿ ಭೇಟಿ ಮಾಡಿದ್ದೆ. ಆದರೆ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ನಾನೇನೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಿಲ್ಲ. ಯಾವುದೇ ಅಸಮಾಧಾನವೂ ಇಲ್ಲ. ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಇದು ಸೌಹಾರ್ಧಯುತ ಭೇಟಿಯಷ್ಟೇ ಅಂತಾ ಆರ್ ಟಿ ನಗರದಲ್ಲಿ ಸಿಎಂ ಭೇಟಿ ಮಾಡಿದ ಬಳಿಕ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
(mysuru mla s a ramdas hands over sealed cover to cm basavaraj bommai in bangalore)
Published On - 10:31 am, Sat, 14 August 21