ಹೆಲಿಕಾಪ್ಟರ್ ಮೂಲಕ ವಿಜಯ್ ದೇವರಕೊಂಡ ಮಾಸ್​ ಎಂಟ್ರಿ; ಇಲ್ಲಿದೆ ವಿಡಿಯೋ

‘ಜೆಜಿಎಂ’ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ವಿಜಯ್ ಅವರು ಹೆಲಿಕಾಪ್ಟರ್ ಮೂಲಕ ಎಂಟ್ರಿ ನೀಡಿದರು.

TV9kannada Web Team

| Edited By: Rajesh Duggumane

Apr 01, 2022 | 8:38 AM

ವಿಜಯ್ ದೇವರಕೊಂಡ (Vijay Devarakonda) ಅವರಿಗೆ ಟಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ‘ಅರ್ಜುನ್​ ರೆಡ್ಡಿ’ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅದೃಷ್ಟ ಬದಲಾಗಿದೆ. ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳನ್ನು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ , ‘ಜೆಜಿಎಂ’ ಸಿನಿಮಾದಲ್ಲಿ (JGM Movie) ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ವಿಜಯ್ ಅವರು ಹೆಲಿಕಾಪ್ಟರ್ ಮೂಲಕ ಎಂಟ್ರಿ ನೀಡಿದರು. ಈ ಸಿನಿಮಾಗೆ ಪುರಿ ಜಗನ್ನಾಥ್​ ಅವರ ನಿರ್ದೇಶನ ಮಾಡಲಿದ್ದಾರೆ. ಸದ್ಯ, ವಿಜಯ್ ನಟಿಸುತ್ತಿರುವ ‘ಲೈಗರ್’ ಚಿತ್ರಕ್ಕೂ (Liger Movie) ಪುರಿ ಜಗನ್ನಾಥ್​ ಅವರದ್ದೇ ನಿರ್ದೇಶನ ಇದೆ. ಈ ಮೂಲಕ ಬ್ಯಾಕ್​ ಟು ಬ್ಯಾಕ್​ ಎರಡು ಪ್ರಾಜೆಕ್ಟ್​ಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದಂತಾಗಿದೆ. ವಿಜಯ್​ ಅವರ ಎಂಟ್ರಿ ಹೇಗಿತ್ತು ಎಂಬುದಕ್ಕೆ ಈ ವಿಡಿಯೋ ನೋಡಿ. ‘ಲೈಗರ್’ ಚಿತ್ರದ ಮೂಲಕ ವಿಜಯ್​ ದೇವರಕೊಂಡ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರದಲ್ಲಿ ಅನನ್ಯಾ ಪಾಂಡೆ ನಾಯಕಿ. ಬಾಕ್ಸಿಂಗ್ ಕಥೆಯನ್ನು ಸಿನಿಮಾ ಹೊಂದಿದೆ.

ಇದನ್ನೂ ಓದಿ: JGM: ವಿಜಯ್ ದೇವರಕೊಂಡ- ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್​; ರಿಲೀಸ್​ ಯಾವಾಗ?

JGM ಚಿತ್ರದಲ್ಲಿ ಸೈನಿಕನ ಅವತಾರ ತಾಳಿದ ವಿಜಯ್​ ದೇವರಕೊಂಡ​; ಇಲ್ಲಿವೆ ಫೋಟೋಗಳು  

Follow us on

Click on your DTH Provider to Add TV9 Kannada