AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ಮಹಿಳೆ

ಕೂಡಲೆ 100ಗೆ ಫೋನ್ ಮಾಡಿದರೆ ಅವರು 112ಗೆ ಕರೆ ಮಾಡೋಕೆ ಹೇಳಿದ್ರು. ಎಲ್ಲಾ ಮಾಹಿತಿ ಪಡೆದು ಬಳಿಕ ಸಮೀಪದ ಠಾಣೆಗೆ ಕರೆ ಮಾಡಿ ಎಂದು ಫೋನ್ ನಂಬರ್ ಕೊಟ್ಟರು. ಆ ನಂಬರ್​ಗೆ ಫೋನ್ ಮಾಡಿದರೆ ಅವರು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಮತ್ತೊಂದು ನಂಬರ್ ಕೊಟ್ಟರು. ಎರಡು ಗಂಟೆಯಾದರೂ ಪೊಲೀಸ್ ನಮ್ಮ ನೆರವಿಗೆ ಬರಲಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಆರೋಪ; ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡ ಮಹಿಳೆ
ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ
TV9 Web
| Updated By: preethi shettigar|

Updated on:Mar 29, 2022 | 8:08 PM

Share

ಹಾಸನ: ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಘಟನೆ ಬಗ್ಗೆ ಮಾಹಿತಿ ನೀಡಿದರೂ 112 ನೆರವಿಗೆ ಬರಲಿಲ್ಲ ಎಂದು ಮಹಿಳೆಯೊಬ್ಬರು (Woman) ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ. ಮಾರ್ಚ್ 27 ರಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ‌ ಘಾಟ್ ಬಳಿ ಈ ಘಟನೆ ನಡೆದಿದ್ದು, ಈ ಬಗ್ಗೆ ಇಂದು ಸಾಮಾಜಿಕ ಜಾಲತಾಣದಲ್ಲಿ(Social media) ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ. ಮಹಿಳೆ ಮಕ್ಕಳಿದ್ದರೂ ಕುಡಿದ ಅಮಲಿನಲ್ಲಿದ್ದ ಪುಂಡರಿಂದ ದುರ್ವರ್ತನೆ ಹಾಗೂ ತಮ್ಮ ತಂದೆ ಮತ್ತು ಪತಿ ಮೇಲೆ ಹಲ್ಲೆ(Attack) ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕೂಡಲೆ 100ಗೆ ಫೋನ್ ಮಾಡಿದರೆ ಅವರು 112ಗೆ ಕರೆ ಮಾಡೋಕೆ ಹೇಳಿದ್ರು. ಎಲ್ಲಾ ಮಾಹಿತಿ ಪಡೆದು ಬಳಿಕ ಸಮೀಪದ ಠಾಣೆಗೆ ಕರೆ ಮಾಡಿ ಎಂದು ಫೋನ್ ನಂಬರ್ ಕೊಟ್ಟರು. ಆ ನಂಬರ್​ಗೆ ಫೋನ್ ಮಾಡಿದರೆ ಅವರು ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಮತ್ತೊಂದು ನಂಬರ್ ಕೊಟ್ಟರು. ಎರಡು ಗಂಟೆಯಾದರೂ ಪೊಲೀಸ್ ನಮ್ಮ ನೆರವಿಗೆ ಬರಲಿಲ್ಲ ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ.

ಅಕಸ್ಮಾತ್ ಯಾರಾದ್ರು ಕೊಲೆ ಮಾಡಿದ್ರು ಕೇಳೋರಿಲ್ಲವೇ. ನನ್ನ ಎರಡುವರೆ ವರ್ಷದ ಮಗು ಜೊತೆ ನಾವು ಸಾಕಷ್ಟು ಕಷ್ಟಪಟ್ಟೆವು. ಸಮಸ್ಯೆ ಇದ್ದಾಗ ಸಹಾಯ ಆಗದ ನಿಮ್ಮ ಸಹಾಯವಾಣಿ ಏಕೆ ಬೇಕು. ಕೊನೆಗೆ ಯಸಳೂರು ಪೊಲೀಸರು ಸ್ಪಂದಿಸಿದ್ರು, ನಮಗೆ ಊಟ ಕೊಡಿಸಿ ದೂರು ಸ್ಚೀಕರಿಸಿದರು. ಮಾನವೀಯತೆಯಿಂದ ನಮಗೆ ನೆರವಾದರು ಎಂದು ಸಹಾಯ ಮಾಡಿದವರ ಬಗ್ಗೆ ಮಹಿಳೆ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ತುರ್ತು ಸ್ಪಂದನೆ ಇಲ್ಲದ ಮೇಲೆ 100, 112 ವ್ಯವಸ್ಥೆ ಯಾಕೆ ಎಂದು ಕಿಡಿ ಕಾರಿದ್ದಾರೆ. ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಅಪರಿಚಿತರಿಂದ ಹಲ್ಲೆ ಎಂದು ದೂರು ದಾಖಲಾಗಿದೆ. ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದ ಬೆಂಗಳೂರು ಮೂಲದ ಕುಟುಂಬದ ಮೇಲೆ ಈ ವೇಳೆ ಮತ್ತೊಂದು ಕಾರಿನಲ್ಲಿದ್ದ ಪಾನಮತ್ತರ ಗುಂಪಿನಿಂದ ಹಲ್ಲೆ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಕಾಲೇಜು ಪರಿವೀಕ್ಷಣಾ ಇನ್ಸ್ಪೆಕ್ಟರ್ ಸ್ಥಾನ ಕೈ ತಪ್ಪಿದಕ್ಕೆ ಪ್ರಿನ್ಸಿಪಾಲ್ ಮೇಲೆಯೇ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಸಹ ಪ್ರಾಧ್ಯಾಪಕ

ಬೆಂಗಳೂರಿನ ವಿವೇಕನಗದಲ್ಲಿ ಯುವ ರೌಡಿಶೀಟರ್ ಆತ್ಮಹತ್ಯೆ, ಹಲ್ಲೆ ಪ್ರಕರಣ: ಕುರುಗೋಡು ಪಿಎಸ್ಐ- ಕಾನ್ಸಟೇಬಲ್ ಅಮಾನತು

Published On - 8:00 pm, Tue, 29 March 22