ಕಾಲೇಜು ಪರಿವೀಕ್ಷಣಾ ಇನ್ಸ್ಪೆಕ್ಟರ್ ಸ್ಥಾನ ಕೈ ತಪ್ಪಿದಕ್ಕೆ ಪ್ರಿನ್ಸಿಪಾಲ್ ಮೇಲೆಯೇ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಸಹ ಪ್ರಾಧ್ಯಾಪಕ

ಡಾ.ಅರುಣ್ ಕುಮಾರ್ ಎಂಬುವವರ ಮೇಲೆಯೇ ಸಹ ಪ್ರಾಧ್ಯಾಪಕ ಶಾಂತವೀರ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನಿಸಿದ್ದಾರೆ. ಫಾರ್ಮಸಿ ಕಾಲೇಜು ಪರಿವೀಕ್ಷಣಾ ಇನ್ಸ್ಪೆಕ್ಟರ್ ಆಗಿ ಶಾಂತವೀರ ಅವರಿಗೆ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಇಂತಹ ಕೃತ್ಯಕ್ಕೆ ಮುಂದಾಗಿದ್ದರು.

ಕಾಲೇಜು ಪರಿವೀಕ್ಷಣಾ ಇನ್ಸ್ಪೆಕ್ಟರ್ ಸ್ಥಾನ ಕೈ ತಪ್ಪಿದಕ್ಕೆ ಪ್ರಿನ್ಸಿಪಾಲ್ ಮೇಲೆಯೇ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನಿಸಿದ ಸಹ ಪ್ರಾಧ್ಯಾಪಕ
ಪ್ರಿನ್ಸಿಪಾಲ್ ಡಾ.ಅರುಣ್ ಕುಮಾರ್, ಸಹ ಪ್ರಾಧ್ಯಾಪಕ ಶಾಂತವೀರ
Follow us
| Updated By: ಆಯೇಷಾ ಬಾನು

Updated on:Mar 29, 2022 | 8:01 PM

ಕಲಬುರಗಿ: ಫಾರ್ಮಸಿ ಕಾಲೇಜು ಪ್ರಿನ್ಸಿಪಾಲ್ ಮೇಲೆಯೇ ಆ್ಯಸಿಡ್ ಎರಚಿ ಹಲ್ಲೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮಾರ್ಚ್ 21ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ನಗರದಲ್ಲಿರುವ HKE ಸೊಸೈಟಿಯ ಫಾರ್ಮಸಿ ಕಾಲೇಜಿನಲ್ಲಿ ಇಂತಹದೊಂದು ಘಟನೆ ನಡೆದಿದೆ.

ಸಹಾಯಕ ಪ್ರಾಧ್ಯಾಪಕನೇ, ತನ್ನದೇ ಕಾಲೇಜಿನ ಪ್ರಿನ್ಸಿಪಾಲ್ ಮೇಲೆ ಆಸಿಡ್ ಎರಚಲು ಯತ್ನಿಸಿದ ಘಟನೆ ಕಲಬುರಗಿ ನಗರದಲ್ಲಿ ನಡದಿದೆ. ಕಲಬುರಗಿ ನಗರದ ಪ್ರತಿಷ್ಟಿತ ಎಚ್​ಕೆ ಶಿಕ್ಷಣ ಸಂಸ್ಥೆಯಡಿಯಲ್ಲಿರುವ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಅರುಣ್ ಕುಮಾರ್ ಅನ್ನೋರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಾ. ಅರುಣ್ ಕುಮಾರ್ ಕೆಲಸ ಮಾಡುವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಾಂತವೀರ್ ಅನ್ನೋರ ವಿರುದ್ದ ಪ್ರಾಚಾರ್ಯ ಡಾ. ಅರುಣ್ ಕುಮಾರ್ ದೂರು ನೀಡಿದ್ದಾರೆ.

ಘಟನೆಯ ವಿವರ ಮಾರ್ಚ್ 21 ರಂದು ಫಾರ್ಮಸಿ ಕಾಲೇಜಿನಲ್ಲಿ ತಮ್ಮ ಕೊಠಡಿಯಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅರುಣ್ ಕುಮಾರ್ ಕೆಲಸ ಮಾಡುತ್ತಿದ್ದರಂತೆ. ಆಗ ಡಾ. ಅರುಣ್ ಕುಮಾರ್ ಅವರ ಕೊಠಡಿಗೆ ಆಗಮಿಸಿದ ಸಹಾಯಕ ಪ್ರಾಧ್ಯಾಪಕ ಶಾಂತವೀರ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಂತೆ. ನಂತರ ತನ್ನ ಬಳಿಯಿದ್ದ ಆಸಿಡ್ ಬಾಟಲಿಯನ್ನು ಓಪನ್ ಮಾಡಿ, ತನ್ನ ಮೇಲೆ ಎರಚಲು ಮುಂದಾದ. ಆಗ ನಾನು ನಮ್ಮ ಸಿಬ್ಬಂದಿ ನೆರವಿನಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದೇನೆ. ನಂತರ ನಾನು ಮನೆಗೆ ಹೋಗಲು ಮುಂದಾದಾಗ ಆಸಿಡ್ ಎರಚಿ, ಕಾರು ಹತ್ತಿಸಿ ತನ್ನ ಕೊಲೆಗೆ ಶಾಂತವೀರ್ ಮುಂದಾಗಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಡಾ. ಅರುಣ್ ಕುಮಾರ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಬ್ಬರ ದ್ವೇಷಕ್ಕೆ ಕಾರಣವೇನು? ಇನ್ನು ಪ್ರಾಚಾರ್ಯ ಡಾ. ಅರುಣ್ ಕುಮಾರ್, ಮತ್ತು ಸಹಾಯಕ ಪ್ರಾಧ್ಯಾಪಕ ಶಾಂತವೀರ್ ನಡುವಿನ ದ್ವೇಷಕ್ಕೆ ಕಾರಣವಾಗಿದ್ದು, ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆಯ ಇನ್ಸಪೆಕ್ಟರ್ ನೇಮಕಾತಿ. ಹೌದು ಫಾರ್ಮಸಿ ಕೌನ್ಸಿಲ್ ಆಪ್ ಇಂಡಿಯಾ, ಫಾರ್ಮಸಿ ಕಾಲೇಜುಗಳ ಪರಿವೀಕ್ಷಣೆ ಮಾಡಲು ಇನ್ಸಪೆಕ್ಟರ್ ಗಳ ನೇಮಕಾತಿ ಮಾಡುತ್ತದೆ. ಇದಕ್ಕೆ ಶಾಂತವೀರ್ ಕೂಡಾ ಅರ್ಜಿ ಹಾಕಿದ್ದರಂತೆ. ಆದ್ರೆ ಅರ್ಜಿ ಹಾಕಿದ್ದ ಶಾಂತವೀರ್ ಬದಲಾಗಿ ಕಲ್ಯಾಣಿ ಬಿರಾದರ್ ಅನ್ನೋರನ್ನು ಬೋರ್ಡ್ ನೇಮಕ ಮಾಡಿದೆ. ಆದರೆ ತನ್ನ ನೇಮಖಾತಿಯಾಗದೇ ಇರೋದಕ್ಕೆ ಡಾ. ಅರುಣ್ ಕುಮಾರ್ ಅವರೇ ಕಾರಣ ಅನ್ನೋ ಸಿಟ್ಟು ಶಾಂತವೀರ್ ಅವರಿಗೆ ಇದೆಯಂತೆ. ಹೌದು ಮೊದಲು ತನ್ನನ್ನೇ ನೇಮಕ ಮಾಡಿಸೋ ಭರವಸೆ ನೀಡಿದ್ದ ಡಾ. ಅರುಣ್ ಕುಮಾರ್, ನಂತರ ಬೇರೆಯವರು ಆ ಹುದ್ದೆಗೆ ನೇಮಕವಾಗುವಂತೆ ನೋಡಿಕೊಂಡಿದ್ದಾರೆ. ತನ್ನ ಬಗ್ಗೆ ಇಲ್ಲಸಲ್ಲದ ಮಾಹಿತಿಯನ್ನು ಹೇಳಿ, ಪರಿವೀಕ್ಷಣೆ ಇನ್ಸಪೆಕ್ಟರ್ ಹುದ್ದೆ ಸಿಗದಂತೆ ಮಾಡಿದ್ದಾರೆ ಅಂತ ಕೋಪಿಸಿಕೊಂಡು, ಇಂತಹದೊಂದು ಕೃತ್ಯ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.

ಸದ್ಯ ದೂರನ್ನು ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರವೇ, ನಿಜವಾಗಿಯೂ ಕೂಡಾ ಶಾಂತವೀರ್ ಅವರು ಆಸಿಡ್ ಎರಚಲು ಮುಂದಾಗಿದ್ದರಾ, ಅಥವಾ ಇಲ್ಲವಾ ಅನ್ನೋದು ಗೊತ್ತಾಗಲಿದೆ.

ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೈದಿ ಸಾವು ಬೆಳಗಾವಿ: ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಕೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೂಳೆ ಗ್ರಾಮದ ಸಿದ್ದಗೌಡ ಹಿಪ್ಪಲಕರ್(34) ಆತ್ಮಹತ್ಯೆ ಮಾಡಿಕೊಂಡ ಕೈದಿ. ಮಗುವನ್ನ ಕೊಲೆ ಮಾಡಿದ ಕೇಸ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಿದ್ದಗೌಡ, ಆರು ವರ್ಷದಿಂದ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ನಾಲ್ಕು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಿದ್ದಗೌಡ ಮೃತಪಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು

Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!

Published On - 5:17 pm, Tue, 29 March 22

ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ