Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು

Organ Donation, Eye Donation: ಕೊರೊನಾ ವೇಳೆ ಅತಿಹೆಚ್ಚು ಸಾವನ್ನು ಕಂಡು ಮರುಗಿದ್ದ ಚಾಲಕ ವಡಿವೇಲು ಅವರು ತಾವು ಮೃತಪಟ್ಟ ಬಳಿಕವೂ ಬೇರೆಯವರಿಗೆ ಸಹಕಾರಿಯಾಗಬೇಕೆಂದು ದೇಹ ದಾನ ಮತ್ತು ನೇತ್ರದಾನಕ್ಕೆ ಪತ್ರಕ್ಕೆ ಮೊದಲೇ ಸಹಿ‌ ಮಾಡಿದ್ದರು.

ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ  ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು
ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕನಿಂದ ದೇಹದಾನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 29, 2022 | 5:25 PM

ಬಳ್ಳಾರಿ: ಸಿರಗುಪ್ಪ ಪಟ್ಟಣದ 108 ಆಂಬುಲೆನ್ಸ್ ಚಾಲಕರೊಬ್ಬರು ನೇತ್ರದಾನ ಮತ್ತು ದೇಹದಾನ ಮಾಡಿ, ಮಾದರಿಯಾಗಿದ್ದಾರೆ. 42 ವರ್ಷದ ವಡಿವೇಲು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಮೃತಪಟ್ಟ ನಂತರ ಸಿರಗುಪ್ಪ ಪಟ್ಟಣದ 108 ಆಂಬುಲೆನ್ಸ್ ಚಾಲಕ ಡಿ. ವಡಿವೇಲು ಅವರ ಕಣ್ಣು ಮತ್ತು ದೇಹದಾನ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಕೊರೊನಾ ವೇಳೆ ಅತಿಹೆಚ್ಚು ಸಾವನ್ನು ಕಂಡು ಮರುಗಿದ್ದ ಚಾಲಕ ವಡಿವೇಲು ಅವರು ತಾವು ಮೃತಪಟ್ಟ ಬಳಿಕವೂ ಬೇರೆಯವರಿಗೆ ಸಹಕಾರಿಯಾಗಬೇಕೆಂದು ದೇಹ ದಾನ ಮತ್ತು ನೇತ್ರದಾನಕ್ಕೆ ಪತ್ರಕ್ಕೆ ಮೊದಲೇ ಸಹಿ‌ ಮಾಡಿದ್ದರು. ಅವರ ಇಚ್ಛೆಯಂತೆ ಬಳ್ಳಾರಿಯ ನಿತ್ಯಜ್ಯೋತಿ ನೇತ್ರ ಭಂಡಾರಕ್ಕೆ ಕಣ್ಣು ಮತ್ತು ವಿಮ್ಸ್ ಆಸ್ಪತ್ರೆಗೆ ದೇಹದಾನ ಮಾಡಲಾಗಿದೆ. ಯುವ ಬ್ರಿಗೇಡ್ ನೇತೃತ್ವದಲ್ಲಿ ದೇಹ ದಾನ ಮತ್ತು ಕಣ್ಣುಗಳ ದಾನ ಕಾರ್ಯ ನೆರವೇರಿತು.

ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ನಿಲ್ಲಿಸೋದಿಲ್ಲ- ಶಾದಿ ಮಹಲ್ ಮಾತ್ರ ನಿಲ್ಲಿಸ್ತೇವೆ: ಸಿಎಂ ಬೊಮ್ಮಾಯಿ ಸ್ಪಷ್ಟನೆ ಬೆಂಗಳೂರು: ಬಜೆಟ್​ ಅಧಿವೇಶನದಲ್ಲಿ ವಿಧಾನಸೌಧದಲ್ಲಿ ಕಲಾಪ ಮುಂದುವರಿದಿದೆ. ಕಲಾಪದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಈ ಹಿಂದೆ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳೆ, ಅಲ್ಪ ಸಂಖ್ಯಾತ ಮಕ್ಕಳಿಗೆ ಸ್ಕಾಲರ್ ಶಿಪ್ ನಿಲ್ಲಿಸಲಾಗ್ತಿದೆ. ಹಿಜಾಬ್ ವಿಚಾರ ನೀವು ಏನಾದ್ರೂ ಮಾಡಿಕೊಳ್ಳಿ, ಅದರೆ ಸ್ಕಾಲರ್ ಶಿಪ್ ದಯವಿಟ್ಟು ನಿಲ್ಲಿಸಬೇಡಿ ಎಂದು ಸದಸ್ಯರೊಬ್ಬರು ಸಿಎಂ ಬೊಮ್ಮಾಯಿ ಗಮನಕ್ಕೆ ತಂದರು. ಅದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ. ಮಕ್ಕಳ ಸ್ಕಾಲರ್ ಶಿಪ್ ಗೆಂದೇ 100 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡ್ತೇನೆ. ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ನಿಲ್ಲಿಸೋದಿಲ್ಲ. ಮಕ್ಕಳ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಅವರಿಗೆ ಸ್ಕಾಲರ್ ಶಿಪ್ ಒದಗಿಸುತ್ತೇವೆ. ಶಾದಿ ಮಹಲ್ ಮಾತ್ರ ನಿಲ್ಲಿಸುತ್ತೇವೆ, ಅದನ್ನು ಬಿಟ್ಟು ಅಲ್ಪಸಂಖ್ಯಾತರ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೊರೊನಾ ವೇಳೆ ಸಾವನ್ನು ಕಂಡು ಮರುಗಿದ್ದ ಸಿರಗುಪ್ಪದ ಆಂಬುಲೆನ್ಸ್ ಚಾಲಕ ದೇಹದಾನ -ನೇತ್ರದಾನ ಮಾಡಿದರು

Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!

Published On - 4:59 pm, Tue, 29 March 22

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ