ಹಾಸನದಲ್ಲಿ ಚಿರತೆಯೊಂದಿಗೆ ಕಾದಾಡಿ ಗೆದ್ದ ಸಾಕು ನಾಯಿ; ವಿಡಿಯೋ ನೋಡಿ
ಚಿರತೆ ಹಾಗು ತಮ್ಮ ನಾಯಿಯ ಹೋರಾಟದ ಶಬ್ದ ಕೇಳಿ ಮಾಲೀಕ ಹೊರಗೆ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ಮನೆಯ ಮಾಲೀಕ ಚಿರತೆ ಓಡಿಸಲು ಮುಂದಾದರು.
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಚಿರತೆಯೊಂದಿಗೆ (Leopard) ಸಾಕುನಾಯಿ (Dog) ಕಾದಾಡಿ ಗೆದ್ದಿದೆ. ಮನೆ ಶೆಡ್ನೊಳಗಿದ್ದ ಸಾಕುನಾಯಿಯನ್ನ ಚಿರತೆ ಹೊತ್ತೊಯ್ಯಲು ಮುಂದಾಗಿತ್ತು. ಈ ವೇಳೆ ಚಿರತೆ ಜೊತೆ ಶ್ವಾನ ಸೆಣಸಾಡಿ ಮಣಿಸಿದೆ. ಚಿರತೆ ಹಾಗು ತಮ್ಮ ನಾಯಿಯ ಹೋರಾಟದ ಶಬ್ದ ಕೇಳಿ ಮಾಲೀಕ ಹೊರಗೆ ಬಂದಿದ್ದಾರೆ. ಪ್ರಾಣದ ಹಂಗು ತೊರೆದು ಮನೆಯ ಮಾಲೀಕ ಚಿರತೆ ಓಡಿಸಲು ಮುಂದಾದರು. ನಾಯಿ ಚಿರತೆಯೊಂದಿಗೆ ಸೆಣಸಾಡುವ ಲ್ಯಾಬ್ರಡಾರ್ ನಾಯಿಯ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮದ ಮಂಜೇಗೌಡ ಎಂಬುವರ ಮನೆಯ ಬಳಿ ಚಿರತೆ ಆಹಾರಕ್ಕಾಗಿ ಮಧ್ಯರಾತ್ರಿ ಬಂದಿತ್ತು. ಚಿರತೆ ಬಂದ ಕೂಡಲೇ ನಾಯಿ ಚಿರತೆಯೊಂದಿಗೆ ಕಾದಾಡಲು ಇಳಿದಿತ್ತು. ಆದರೆ ಬೇಟೆಯಾಡಲು ಬಂದು ಬರಿಗೈಲಿ ಮರಳಿದೆ. ಚಿರತೆ – ಸಾಕು ನಾಯಿ ಕಾದಾಡುವ ದೃಶ್ಯ ಮೈಜುಂ ಎನಿಸುವ ಹಾಗೇ ಇದೆ.
ಇದನ್ನೂ ಓದಿ
ಪುನೀತ್ ನಿಧನರಾಗಿ 5 ತಿಂಗಳು, ಕುಟುಂಬ ಸದಸ್ಯರಿಂದ ಪೂಜೆ ಸಲ್ಲಿಕೆ; ಸಮಾಧಿಗೆ ಭೇಟಿ ನೀಡಿ, ನಮನ ಸಲ್ಲಿಸಿದ ಆರ್ಜಿವಿ
ಶೀಘ್ರದಲ್ಲೇ ಕೋವಿಡ್-19 ಕಾಲರ್ ಟ್ಯೂನ್ ತೆರವು; ಕೊನೆಗೂ ಮುಕ್ತಿ ಸಿಕ್ತು ಎಂದ ನೆಟ್ಟಿಗರು

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ

ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!

ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ

ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
