AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸೊಸೆ ಮೇಘನಾ ಕಾರಣ ಎನ್ನುತ್ತಾರೆ ಶಂಕ್ರಣ್ಣನ ತಾಯಿ

ಮಗ ಆತ್ಮಹತ್ಯೆ ಮಾಡಿಕೊಳ್ಳಲು ಸೊಸೆ ಮೇಘನಾ ಕಾರಣ ಎನ್ನುತ್ತಾರೆ ಶಂಕ್ರಣ್ಣನ ತಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 29, 2022 | 4:13 PM

Share

ಮೇಘನಾ ಪ್ರತಿದಿನ ತನ್ನೊಂದಿಗೆ ಮತ್ತು ಗಂಡನೊಂದಿಗೆ ಜಗಳವಾಡುತ್ತಿದ್ದಳು, ಮನೆಗೆಲಸ ಯಾವುದನ್ನೂ ಮಾಡುತ್ತಿರಲಿಲ್ಲ, ತಾನೇ ಅವಳ ಬಟ್ಟೆ ಒಗೆಯಬೇಕಿತ್ತು ಎಂದು ಶಂಕ್ರಣ್ಣನ ತಾಯಿ ಹೇಳುತ್ತಾರೆ.

ಈ ತಾಯಿಯ ಕರುಣಾಜನಕ ಕತೆ ಕೇಳುತ್ತಿದ್ದರೆ ಕಷ್ಟಗಳೆಲ್ಲ ಹುಡುಕಿಕೊಂದು ಇವರ ಮನೆಗೆ ಬಂದು ಬಿಡುತ್ತವಾ ಅನಿಸದಿರದು. ನಾಲ್ಕು ಮಕ್ಕಳ ತಾಯಿಯಾಗಿರುವ ಇವರು ಬದುಕಿನಲ್ಲಿ ಬರೀ ಕಷ್ಟವೇ ಅನುಭವಿಸಿದ್ದಾರೆ ಅನಿಸುತ್ತೆ. ಮುದಿಪ್ರಾಯದಲ್ಲಿ ಆಸರೆಯಾಗಿದ್ದ ಮಗ ಕೂಡ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದಹಾಗೆ, ಇವರ ಮಗನ ಹೆಸರು ಶಂಕರ ಆದರೆ ಊರಲೆಲ್ಲ ಶಂಕ್ರಣ್ಣ (Shankaranna) ಅಂತಲೇ ಪರಿಚಯ. ಇವರ ಊರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಬಳಿ ಇರುವ ಅಕ್ಕಿಮರಿಪಾಳ್ಯ (Akkimaripalya). ತಾಯಿಗೆ ಶಂಕ್ರಣ ಸೇರಿದಂತರ ನಾಲ್ವರು ಮಕ್ಕಳು-ಎರಡು ಗಂಡು, ಎರಡು ಹೆಣ್ಣು. ಒಬ್ಬ ಮಗಳನ್ನು ಬಿಟ್ಟು ಎಲ್ಲರೂ ಸತ್ತುಹೋಗಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ಅವರ ಎರಡನೇ ಮಗ ಹಾವು ಕಚ್ಚಿದ್ದಿರಿಂದ (snakebite) ಸತ್ತು ಹೋದರು. ದೊಡ್ಡ ಮಗಳು ಗಂಡ ನೀಡುತ್ತಿದ್ದ ವಿಪರೀತ ಹಿಂಸೆಯಿಂದಾಗಿ ತವರಿಗೆ ವಾಪಸ್ಸು ಬಂದು ಸತ್ತರಂತೆ. ಮತ್ತೊಬ್ಬ ಮಗಳ ತಲೆಯ ಮೇಲೆ ತೆಂಗಿನ ಬಿದ್ದ ಕಾರಣ ಹುಚ್ಚುಚ್ಚಾಗಿ ಆಡುತ್ತಾರಂತೆ. ತಾನು ಮದುವೆಯಾದರೆ ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳಲಾಗದು ಎಂಬ ಕಾರಣಕ್ಕೆ ಶಂಕ್ರಣ್ಣ 45 ನೇ ವಯಸ್ಸಿನವರೆಗೆ ಮದುವೆಯಾಗಿರಲಿಲ್ಲ.

ಆದರೆ ಸುಮಾರು 6 ತಿಂಗಳ ಹಿಂದೆ ಯಾವುದೋ ಪೂಜಾರಿ ಮೇಘನಾ (ಶಂಕ್ರಣ್ಣನ ಹೆಂಡತಿ) ಸಂಬಂಧ ತೆಗೆದುಕೊಂಡು ಬಂದ ಎಂದು ಶಂಕ್ರಣ್ಣನ ತಾಯಿ ಹೇಳುತ್ತಾರೆ. ಮೇಘನಾ ವಯಸ್ಸು ಬರೀ 25 ಮಾತ್ರ. ಅದುವರೆಗೆ ಮದುವೆ ಬೇಡ ಅನ್ನುತ್ತಿದ್ದ ಮೇಘನಾರನ್ನು ಮದುವೆಯಾಗಲು ಒಪ್ಪಿಕೊಂಡರು.

ಕೇವಲ ತನ್ನ ಮಗನ ಆಸ್ತಿಯ ಮೇಲೆ ಕಣ್ಣಿಟ್ಟು ಮೇಘನಾ ತನಗಿಂತ 20 ವರ್ಷ ಹಿರಿಯನಾಗಿದ್ದ ತನ್ನ ಮಗನನ್ನೂ ಮದುವೆಯಾದಳು ಎಂದು ಶಂಕ್ರಣ್ಣನ ತಾಯಿ ಆರೋಪಿಸುತ್ತಾರೆ. ಅಲ್ಲದೆ ಅವರಲ್ಲಿದ್ದ ಒಂದು ಲಕ್ಷ ರೂಪಾಯಿ ಗಳನ್ನು ಗಂಡನ ಮೂಲಕ ಇಸಿದುಕೊಂಡು ತನ್ನಪ್ಪನಿಗೆ ಒಂದು ದ್ವಿಚಕ್ರ ವಾಹನ ಖರೀಸಿ ಕೊಟ್ಟಿದ್ದಳಂತೆ ಮತ್ತು ತಾನು ಕಿವಿಯೋಲೆ ಮಾಡಿಸಿಕೊಂಡಿದ್ದಳಂತೆ.

ಮೇಘನಾ ಪ್ರತಿದಿನ ತನ್ನೊಂದಿಗೆ ಮತ್ತು ಗಂಡನೊಂದಿಗೆ ಜಗಳವಾಡುತ್ತಿದ್ದಳು, ಮನೆಗೆಲಸ ಯಾವುದನ್ನೂ ಮಾಡುತ್ತಿರಲಿಲ್ಲ, ತಾನೇ ಅವಳ ಬಟ್ಟೆ ಒಗೆಯಬೇಕಿತ್ತು ಎಂದು ಶಂಕ್ರಣ್ಣನ ತಾಯಿ ಹೇಳುತ್ತಾರೆ. ಮೇಘನಾಳ ಮಾತು ಕೇಳಿ ಸೋಮವಾರ ಸಾಯಂಕಾಲ (ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು) ಶಂಕ್ರಣ್ಣ ತಾಯಿ ಮೇಲೆ ಕೈಮಾಡಲು ಹೋಗಿದ್ದರಂತೆ. ಅದಕ್ಕಾಗಿ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡರೆ?

ಆದರೆ ಶಂಕ್ರಣ್ಣನ ತಾಯಿ ಮಾತ್ರ ಹೆಂಡತಿ ಕಾಟ ತಡೆಯಲಾರದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳುತ್ತಾರೆ. ಆಸ್ತಿಯನ್ನೆಲ್ಲ ಮಾರಿ ಬೆಂಗಳೂರಿಗೆ ಹೋಗಿ ಇದ್ದುಬಿಡೋಣ ಅಂತ ಮೇಘನಾ ಪ್ರತಿದಿನ ಗಂಡನನ್ನು ಪೀಡಿಸುತ್ತಿದ್ದಳು ಎಂದು ಅವರು ಆರೋಪಿಸುತ್ತಾರೆ.

ಶಂಕ್ರಣ್ಣ ಯಾಕೆ ಆತ್ಮಹತ್ಯೆ ಮಾಡಿಕೊಂಡರು ಅಂತ ಪೊಲೀಸರ ತನಿಖೆ ನಂತರವೇ ಗೊತ್ತಾಗಬೇಕು.

ಇದನ್ನೂ ಓದಿ:  ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು