AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು

ತಾಯಿಯೇ ಹೋಗಿ ನೇಣು ಹಾಕಿಕೋ ಅಂತ ಹೇಳಿದ್ದಕ್ಕೆ ಮನನೊಂದು ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡರು. ನಿನ್ನೆ ಕೂಡ ನನ್ನನ್ನು ಕೆಟ್ಟದಾಗಿ ಬೈದಿದ್ದರು. ನಾನು ಈಗ ನಾಲ್ಕು ತಿಂಗಳ ಪ್ರಗ್ನೆಂಟ್ ಎಂದು ಮೃತನ ಪತ್ನಿ ಮೇಘನಾ ಅಳಲು ತೋಡಿಕೊಂಡಿದ್ದಾರೆ.

ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು
ನಾನು 4 ತಿಂಗಳ ಪ್ರಗ್ನೆಂಟ್ ಎಂದು ಅಳಲು ತೋಡಿಕೊಂಡ ಶಂಕರಣ್ಣನ ಪತ್ನಿ ಮೇಘನಾ, ಎಲ್ಲಾ ನಮ್ಮತ್ತೆಯದ್ದೇ ಹಿಕ್ಮತ್ತು ಅಂದರು
TV9 Web
| Edited By: |

Updated on:Mar 29, 2022 | 3:40 PM

Share

ತುಮಕೂರು: ಸುಮಾರು 5 ತಿಂಗಳ ಹಿಂದೆ 25 ವರ್ಷದ ಯುವತಿಯನ್ನು ಮದುವೆಯಾಗಿ (Marriage) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಸಂಭವಿಸಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿ ಮೃತನ ಪತ್ನಿ ಮೇಘನಾ ನಾನು ಈಗ ನಾಲ್ಕು ತಿಂಗಳ ಪ್ರಗ್ನೆಂಟ್ ಎಂದು ತನ್ನ ಸಂಸಾರದಲ್ಲಾದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.

ನಾನು, ನನ್ನ ಗಂಡ ಚೆನ್ನಾಗಿದ್ವಿ. ಎರಡು ತಿಂಗಳಿಂದ ನನ್ನ ಜೊತೆಗೆ ಅತ್ತೆ ಜಗಳ ಮಾಡುತ್ತಿದ್ದರು. 15 ದಿನಕ್ಕೊಂದು ಸಲ ಜಗಳ ಆಗುತ್ತಿತ್ತು. ಗಂಡ- ಹೆಂಡತಿ ನಡುವೆ ಏನು ಸಮಸ್ಯೆ ಇರಲಿಲ್ಲ. ಅತ್ತೆ ಪದೇ ಪದೇ ಹೊರಗೆ ಹೋಗ್ತಾಳೆ ಅಂತ ಜಗಳ ಮಾಡುತ್ತಿದ್ದರು. ನನ್ನ ತಂದೆ ತಾಯಿಯರ ಜೊತೆಗೂ ಮಾತನಾಡಲು ಬಿಡುತ್ತಿರಲಿಲ್ಲ. ಇಬ್ಬರನ್ನು ಸಂಬಾಳಿಸಲು ಸಾಧ್ಯವಿಲ್ಲ ಅಂತ ನನ್ನ ಗಂಡ ಹೇಳಿತಿದ್ರು. ನೀನು ಹೋಗಿ ಸಾಯಿ ಅಂತ ನಮ್ಮ ಅತ್ತೆಯೇ ಮಗನಿಗೆ ಬೈದದ್ದು ಮನೆ ಬಿಟ್ಟು ಹೋದ ನನ್ನ ಪತಿ ರಾತ್ರಿಯಲ್ಲ ವಾಪಸ್ ಬರಲಿಲ್ಲ. ರಾತ್ರಿ ಫೋನ್ ಮಾಡಿದ್ರೆ ಕಾಲ್ ರಿಸೀವ್ ಮಾಡಲಿಲ್ಲ. ಬೆಳಗ್ಗೆ ಸತ್ತಿರುವ ಸುದ್ದಿ ಗೊತ್ತಾಯಿತ್ತು. ಜಮೀನು, ಹಣ ಅಂತಸ್ತು ನೋಡಿ ಬರಲಿಲ್ಲ.

ಒಂದ್ವೇಳೆ ಆ ರೀತಿ ನಾನು ಇದ್ದರೆ, ಮದುವೆಗೆ ಮುಂಚೇನೆ ನನ್ನ ಹೆಸರಿಗೆ ಆಸ್ತಿ ಬರೆಯುವಂತೆ ಕೇಳುತ್ತಿದ್ದೆ. ಮೆಣಸಿಗೆರೆ ದೊಡ್ಡಿ ರಾಜಣ್ಣ ಎಂಬುವರು ನನಗೆ ಮದುವೆ ಮಾಡಿಸಿದರು. ಅಪ್ಪ, ಅಮ್ಮನನ್ನು ಬಿಟ್ಟು ಮದುವೆಯಾಗಿದ್ದೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಎಲ್ಲಾರು ಸೇರಿಕೊಂಡು ಕಾಟ ನೀಡಿದ್ರು. ಮದುವೆಯಾಗಿದ್ದು ನಮ್ಮ ಅತ್ತೆಗೆ ಇಷ್ಟ ಇರಲಿಲ್ಲ. ನನಗೆ ಮೊದಲನೇ ಮದುವೆಯಾಗಿತ್ತು. ಮೊದಲನೇ ಮದುವೆ ಲವ್ ಮ್ಯಾರೇಜ್ ಆಗಿತ್ತು. ಆತ ಸಾಲ ಮಾಡಿಕೊಂಡು ನನ್ನ ಬಿಟ್ಟು ಹೋದ. ಆತನನ್ನು ಒಂದೂವರೆ ವರ್ಷ ಹುಡುಕಿಸಿದ್ದೆ, ಆತ ಸಿಗಲಿಲ್ಲ, ಪೊಲೀಸ್ ಠಾಣೆಗೂ ದೂರು ನೀಡಿದ್ದೆ. ಕೊನೆಗೆ ರಾಜಣ್ಣ, ಶಂಕ್ರಪ್ಪ ನನ್ನು ಮದುವೆಯಾಗುವ ಪ್ರಸ್ತಾಪ ಮಾಡಿದರು ಶಂಕರಣ್ಣನೇ ನನ್ನನ್ನು ಇಷ್ಟು ಪಟ್ಟು ಮದುವೆಯಾದ್ರು. ಮದುವೆ ಸಂದರ್ಭದಲ್ಲೂ ಏನು ಕೊಡಲಿಲ್ಲ. ಸೀರೆ, ತಾಳಿ, ಕಾಲೂಂಗರ ಮಾತ್ರ ಕೊಟ್ಟಿದ್ದರು.

ಬೆಂಗಳೂರು-ಮೈಸೂರಿಗೆ ಹೋಗುವಂತೆ ನಾನು ಡಿಮ್ಯಾಂಡ್ ಮಾಡಿರಲಿಲ್ಲ. ಸತ್ಯಾಂಶ ಗೊತ್ತಿದೆ, ನನ್ನದು ಸಂತೇಮಾವತ್ತೂರು. ಮೂರು ತಿಂಗಳು ಚೆನ್ನಾಗಿದ್ದು ಆಮೇಲೆ ಜಗಳ ತೆಗೆದರು. ಮನೆಯಲ್ಲಿ ಪಾತ್ರೆ ತೊಳೆಯುವ ವಿಚಾರವಾಗಿ ಜಗಳವಾಯ್ತು. ಹೊಸ ವರ್ಷವೇ ಜಗಳ ಮಾಡಿದ್ರು. ತಾಯಿ ಮಗನನ್ನು ದೂರ ಮಾಡ್ತಿದ್ದಾಳೆ ಅಂತ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದರು. ನಾನು ಯಾವುದೆ ಕಾಟ ಕೊಟ್ಟಿಲ್ಲ. ತಾಯಿಯೇ ಹೋಗಿ ನೇಣು ಹಾಕಿಕೋ ಅಂತ ಹೇಳಿದ್ದಕ್ಕೆ ಮನನೊಂದು ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡರು. ನಿನ್ನೆ ಕೂಡ ನನ್ನನ್ನು ಕೆಟ್ಟದಾಗಿ ಬೈದಿದ್ದರು. ನಾನು ಈಗ ನಾಲ್ಕು ತಿಂಗಳ ಪ್ರಗ್ನೆಂಟ್ ಎಂದು ಮೃತನ ಪತ್ನಿ ಮೇಘನಾ ಅಳಲು ತೋಡಿಕೊಂಡಿದ್ದಾರೆ.

ಶಂಕರಣ್ಣನ ಸಾವಿಗೆ ತಾಯಿಯೇ ಕಾರಣ ಇನ್ನು ಈ ಬಗ್ಗೆ ಮಾತನಾಡಿರುವ ಮೃತ ಶಂಕರಣ್ಣ ಮಾವ, ಈ ಬಗ್ಗೆ ನನಗೇನು ಗೊತ್ತಿಲ್ಲ. ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ನಾಲ್ಕು ದಿನಗಳ‌ ಬಳಿಕ ಠಾಣೆಗೆ ಬಂದು ಇಬ್ಬರು ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಎಂದು ಹೇಳಿದರು. ತಾಯಿ ಮಗನಿಗೂ ಹೊಂದಾಣಿಕೆ ಇರಲಿಲ್ಲ. ಒಂದೂವರೆ ತಿಂಗಳ ಹಿಂದೆ ಹೆಂಡತಿ-ತಾಯಿ ನಡುವೆ ಜಗಳವಾಗಿತ್ತು. ಹೆಂಡತಿಯನ್ನು ಬೆಂಗಳೂರಿನಲ್ಲಿ ಇರಿಸಿದ್ದರು. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯದಶಮಿ ದಿನ ಮದುವೆಯಾಗಿದ್ದರು. ಮಗಳು ಪ್ರಗ್ಮೆಂಟ್. ನನ್ನ ಮಗಳದ್ದು ತಪ್ಪಿಲ್ಲ, ತಾಯಿಯಿಂದಲೇ ಮಗ ಸಾವನಪ್ಪಿರೋದು ಅಂತ ದೂರು ನೀಡುತ್ತೇನೆ. ಶಂಕರಣ್ಣ ಸಾವಿಗೆ ತಾಯಿಯೇ ಕಾರಣ ಅಂತ ದೂರು ನೀಡುತ್ತೇವೆ ಎಂದು ಮೇಘಾನ ತಂದೆ ಹೇಳಿದ್ದಾರೆ.

ಸೊಸೆ ಮೇಘನಾ ಕಿರುಕುಳದಿಂದ ಶಂಕ್ರಣ್ಣ ನೇಣಿಗೆ ಶರಣಾಗಿದ್ದಾನೆ, ಶಂಕ್ರಣ್ಣನ ತಾಯಿ ರಂಗಮ್ಮ ಆರೋಪ ನಾನು ನಿನ್ನೆ ಎಮ್ಮೆ ಹೊಡೆದುಕೊಂಡು ಬರುತ್ತಿದ್ದೆ. ಆಗ ಸೊಸೆ ನಾಯಿ ಬಿಟ್ಟಳು. ಗಾಬರಿ ಆಯ್ತು, ನಾನು ಬೀಳುತ್ತಿದ್ದೆ ಆಗ ಸೊಸೆಗೆ ನಾನು ಬೈದೆ. ಈ ವಿಚಾರವಾಗಿ ಜಗಳ ಶುರುವಾಯ್ತು. ನನ್ನ ಮಗನಿಗೆ ದೂರು ಹೇಳಿದೆ. ನನ್ನನ್ನು ಮನೆಯಿಂದ ಹೊರಗೆ ತಳ್ಳುವಂತೆ ಸೊಸೆ ಮಗನಿಗೆ ಹೇಳಿದಳು. ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನು ಆತ ಹೊಡೆಯಲು ಬಂದ. ಹೇಗಾದ್ರೂ ಜಗಳವಾಡಿ ಅಂತ ಸಂಜೆ ಮನೆಯಿಂದ ಹೊರಗೆ ಹೋದ. ಮದುವೆಯಾದ ದಿನದಿಂದ ಜಗಳ ವಾಡುತ್ತಿದ್ದರು. ನನಗೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ನಾನು ಬೇರೆ ಅಡುಗೆ ಮಾಡಿಕೊಂಡು ಇದ್ದೆ. ಅವಳಿಗೆ ದುಡ್ಡು ಹಣ ಬೇಕಿತ್ತಂತೆ. ಮೇಘಾನ ಹಾಗೂ ನನ್ನ ಮಗನ ಮದುವೆ ಬಗ್ಗೆ ನನಗೆ ಗೊತ್ತಿರಲಿಲ್ಲ. ನಾನು ಮದುವೆಗೆ ಒಪ್ಪಿಕೊಂಡಿರಲಿಲ್ಲ. ದೇವಸ್ಥಾನದ ಎದುರು ಮದುವೆಯಾಗುತ್ತಿದ್ದೇನೆ ಎಂದು ನನ್ನನ್ನು ಕರೆದುಕೊಂಡು ಹೋಗಿದ್ದರು. ಹೊನಸಿಗೇರೆ ದೊಡ್ಡಿ ಹುಚ್ಚಮಾರಮ್ಮ ದೇವಸ್ಥಾನದ ಬಳಿ ಮದುವೆ ಆಯ್ತು. ರಾಜಣ್ಣ ಎಂಬಾತ ಹೆಣ್ಣು ತೋರಿಸಿದ್ದ. ಮಗನಿಗೆ ಬಹಳಷ್ಟು ಹೆಣ್ಣು ನೋಡಿದ್ದೋ, ಮದುವೆ ಆಗಿರಲಿಲ್ಲ. ನನಗೆ ನಾಲ್ಕು ಜನ ಮಕ್ಕಳು, ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ.

ಇದೀಗ ಈ ಮಗನೂ ಕೂಡ ಸಾವನಪ್ಪಿದ್ದಾನೆ. ಇನ್ನೊಬ್ಬ ಮಗಳಿದ್ದಾಳೆ ಅವಳು ಮಾನಸಿಕ ಅಸ್ವಸ್ಥೆ. ಈ ಹಿಂದೆ ಗಲಾಟೆ ಮಾಡಿದ್ದಳು. ಗಲಾಟೆ ಮಾಡಿದ್ದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಳು. ಯಾರೋ ಮನೆಗೆ ಪದೇ ಪದೇ ಬರುತ್ತಿದ್ದರು. ನನ್ನ ಮಗ ನನ್ನನ್ನು ಬಿಟ್ಟು ಇರುತ್ತಿರಲಿಲ್ಲ. ನಿನ್ನೆಯೇ ನನ್ನನ್ನು ಹೊಡೆಯಲು ಬಂದಿದ್ದು, ಮಗನ ಜೊತೆಗೆ ಸರಿಯಾಗಿ ಸಂಸಾರ ಮಾಡುತ್ತಿರಲಿಲ್ಲ. ಆಕೆಯ ಬಟ್ಟೆಯನ್ನು ನಾನೇ ಒಗೆಯಬೇಕಿತ್ತು. ಊರಿನವರು ಬುದ್ದಿವಾದ ಹೇಳಿದ್ರು ಕೇಳಿರಲಿಲ್ಲ. ನಾನು ಬುದ್ದಿವಾದ ಹೇಳಿದ್ರೆ ಸತ್ತು ಹೋಗುತ್ತೇನೆ ಎಂದು ಹೇಳುತ್ತಿದ್ದ. ಆಸ್ತಿ, ಒಡವೆ ಸಿಗುತ್ತೆ ಅಂತ ಮದುವೆಯಾಗಿದ್ದಳು. ಒಂದು ಲಕ್ಷ ಒಂದು ಸಲ, ಇಪತ್ತು ಸಾವಿರ ಒಂದು ಸಲ ಹಣ ನನ್ನ ಬಳಿ ಪಡೆದುಕೊಂಡಿದ್ದಳು. ಬೆಳಗ್ಗೆ ಮಲಗಿದ್ದ ಸಂದರ್ಭದಲ್ಲಿ ನೇಣು ಬೀಗಿದುಕೊಂಡಿರುವುದು ಗೊತ್ತಾಯ್ತು. ಆಕೆಯ ಮೇಲೆ ದೂರು ನೀಡಿದ್ದೇನೆ. ಆಕೆಯಿಂದಲ್ಲೇ ನನ್ನ ಮಗ ಸಾವನಪ್ಪಿದ್ದಾನೆ ಎಂದು ಮೃತ ಶಂಕರಣ್ಣ ತಾಯಿ ರಂಗಮ್ಮ ಕಣ್ಣೀರು ಹಾಕಿದ್ದಾರೆ.

ಸದ್ಯ ಕೌಟುಂಬಿಕ ಜಗಳದಿಂದ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಾಯಿ ರಂಗಮ್ಮ ನೀಡಿದ ದೂರಿನ ಮೇರೆಗೆ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಗಂಡ- ಹೆಂಡತಿ ಜಗಳ ಕಾರಣದಿಂದ ಶಂಕ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಜಗಳ ಹೊರತು ಪಡಿಸಿ ಮಗನ ಸಾವಿಗೆ ಬೇರೆ ಕಾರಣ ಇಲ್ಲ ಅಂತ ರಂಗಮ್ಮ ದೂರು ನೀಡಿದ್ದಾರೆ.

ಘಟನೆ ಹಿನ್ನೆಲೆ 25 ವರ್ಷದ ಯುವತಿಯನ್ನು ಮದುವೆಯಾಗಿದ್ದ (Marriage) 45 ವರ್ಷದ ಶಂಕರಣ್ಣ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಸಂಭವಿಸಿದೆ. ಸುಮಾರು 5 ತಿಂಗಳ ಹಿಂದೆ ಈ ಜೋಡಿ ರಾಜ್ಯಾದ್ಯಂತ ಬಾರಿ ಸಂಚಲನ ಮೂಡಿಸಿತ್ತು. 25 ವರ್ಷದ ಯುವತಿಯನ್ನು 45 ವರ್ಷದ ಶಂಕರಣ್ಣ ಮದುವೆಯಾಗಿದ್ದರು. ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ಶಂಕರಣ್ಣ ಜೊತೆ ಮೇಘಾನ ಮದುವೆಯಾಗಿದ್ದರು. ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ಕಳೆದ 5 ತಿಂಗಳ ಹಿಂದೆ ಮದುವೆ ನಡೆದಿತ್ತು. ಇಂದು ಬೆಳಗ್ಗೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಕಿಮರಿ ಪಾಳ್ಯದ ಶಂಕರಣ್ಣ ಮೃತದೇಹ ಪತ್ತೆಯಾಗಿದೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೇಘನಾ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದು, ಈಕೆಗೆ ಬೇರೆಯವರ ಜೊತೆ ಮೊದಲೇ ಒಂದು ಮದುವೆಯಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಪತಿ ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಇತ್ತು. ಪತಿ ಎರಡು ವರ್ಷಗಳಿಂದ ಬಾರದ ಹಿನ್ನೆಲೆಯಲ್ಲಿ ಮೇಘನಾಳೇ ಹೋಗಿ 45 ವರ್ಷದ ವ್ಯಕ್ತಿಯನ್ನ ಮದುವೆಯಾಗಿದ್ದರು.

ಮೇಘನಾ ಸ್ವತಃ ಶಂಕರಣ್ಣ ಬಳಿ ಹೋಗಿ ಮದುವೆಯಾಗಿ ಅಂತಾ ಕೇಳಿಕೊಂಡಿದ್ದರು. ಈ ವೇಳೆ ಮದುವೆಯಾಗದ ಶಂಕರಣ್ಣ ಯುವತಿಯನ್ನ ಒಪ್ಪಿ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದರು. ಇಬ್ಬರು ಮದುವೆಯಾಗಿರುವ ಫೋಟೋ ನೋಡಿ ಟ್ರೋಲಿಗರು ಟ್ರೋಲ್ ಮಾಡಿದ್ದರು. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ್​ ಭೇಟಿ; ಇಲ್ಲಿದೆ ವಿಡಿಯೋ

ಮಂಗಳಮ್ಮನ ವಿರುದ್ಧ ತಿರುಗಿಬಿದ್ದ ಭುವಿ; ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್​

Published On - 3:24 pm, Tue, 29 March 22