Shocking News: ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನನ್ನು ಕೊಂದ ಬಾಲಕ; ಪಾರಾಗಲು ಮಾಡಿದ್ದು ಕ್ರಿಮಿನಲ್​ ಐಡಿಯಾ

ಆದರೆ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಕೈವಾಡ ಈ ಕೊಲೆಯಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಬಳಿಕ 10ನೇ ತರಗತಿ ಹುಡುಗನನ್ನೇ ವಿಚಾರಣೆ ನಡೆಸಲಾಯಿತು. ನಂತರ ಆತ ಒಪ್ಪಿಕೊಂಡ..ದೊಡ್ಡದಾಗಿ ಅತ್ತುಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

Shocking News: ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನನ್ನು ಕೊಂದ ಬಾಲಕ; ಪಾರಾಗಲು ಮಾಡಿದ್ದು ಕ್ರಿಮಿನಲ್​ ಐಡಿಯಾ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Apr 07, 2022 | 8:09 AM

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣವೂ ಹೆಚ್ಚುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣನಾಗಬಹುದು ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ. ಫಲಿತಾಂಶ ಬಂದ ಮೇಲೆ ಕಡಿಮೆ ಅಂಕ ಬಂತು, ಫೇಲ್ ಆದೆ ಎಂದು ಸಾಯುವವರೂ ಇದ್ದಾರೆ. ಇದೆಲ್ಲವೂ ತಪ್ಪು. ಆದರೆ ಮಕ್ಕಳಲ್ಲಿರುವ ಭಯ, ಅಂಕ ಕಡಿಮೆ ಬಂದಾಗ ಅವರಷ್ಟಕ್ಕೇ ಅವರು ಅವಮಾನ ಆಯಿತು, ಮನೆಯಲ್ಲಿ ಬಯ್ಯುತ್ತಾರೆ, ಪಾಲಕರು ಹೊಡೆಯುತ್ತಾರೆ ಎಂದು ಭಾವಿಸಿ ತಮ್ಮ ಜೀವ ಕಳೆದುಕೊಳ್ಳುತ್ತಾರೆ. ಆದರೆ ಮಧ್ಯಪ್ರದೇಶದಲ್ಲೊಂದು ಶಾಕಿಂಗ್​ ಘಟನೆ ನಡೆದಿದೆ. ಇಲ್ಲಿ 15ವರ್ಷದ ಬಾಲಕನೊಬ್ಬ ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದು ಎಂದು ಹೆದರಿ ಅಪ್ಪನನ್ನೇ ಕೊಂದಿದ್ದಾನೆ. ಅಷ್ಟೇ ಅಲ್ಲ, ಈ ಕೊಲೆಯನ್ನು ಪಕ್ಕದ ಮನೆಯವನ ತಲೆಗೆ ಕಟ್ಟಲೂ ಪ್ರಯತ್ನ ಪಟ್ಟಿದ್ದಾನೆ.

ಮೃತ ವ್ಯಕ್ತಿಯ ಹೆಸರು ದುಳಿಚಾಂದ್​ ಅಹಿರ್ವಾರ್. ಏಪ್ರಿಲ್​ 3ರಂದು ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಲ್ಲಲ್ಪಟ್ಟಿದ್ದಾರೆ. ಪುತ್ರನೇ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ನಾನು ಗಲಾಟೆ ಕೇಳಿ ಹೊರಗೆ ಬಂದೆ, ಪಕ್ಕದ ಮನೆಯವನಾದ ವೀರೇಂದ್ರ ಅಹಿರ್ವಾರ್​ ಮತ್ತು ಇನ್ನೊಬ್ಬಾತ ಓಡಿಹೋಗಿದ್ದನ್ನು ನಾನು ನೋಡಿದೆ ಎಂದೂ ದೂರಿನಲ್ಲಿ ತಿಳಿಸಿದ್ದ.  ಈ ವೀರೇಂದ್ರ ಮತ್ತು ಬಾಲಕನ ಮನೆಯ ನಡುವೆ ಭಿನ್ನಾಭಿಪ್ರಾಯವಿತ್ತು. ಆಗಾಗ ಜಗಳವಾಗುತ್ತಿತ್ತು. ಅದನ್ನು ಸದ್ಬಳಕೆ ಮಾಡಿಕೊಂಡು, ತಾನು ಪಾರಾಗುವ ಪ್ರಯತ್ನ ಇವನದಾಗಿತ್ತು. ಆದರೆ ವೀರೇಂದ್ರನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ಕೈವಾಡ ಈ ಕೊಲೆಯಲ್ಲಿ ಇಲ್ಲ ಎಂಬುದು ಗೊತ್ತಾಯಿತು. ಬಳಿಕ 10ನೇ ತರಗತಿ ಹುಡುಗನನ್ನೇ ವಿಚಾರಣೆ ನಡೆಸಲಾಯಿತು. ನಂತರ ಆತ ಒಪ್ಪಿಕೊಂಡ..ದೊಡ್ಡದಾಗಿ ಅತ್ತುಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಸರಿಯಾಗಿ ವಿದ್ಯಾಭ್ಯಾಸ ಮಾಡುವುದಿಲ್ಲ, ಓದುವುದಿಲ್ಲ ಎಂದು ನನ್ನ ಅಪ್ಪ ಸದಾ ನಿಂದಿಸುತ್ತಿದ್ದರು. ಪರೀಕ್ಷೆಯಲ್ಲಿ ಫೇಲ್​ ಆದರೆ ಮನೆಯಿಂದ ಹೊರಹಾಕುವ ಬೆದರಿಕೆಯನ್ನೂ ಹಾಕಿದ್ದರು. ಹೀಗಾಗಿ ಕಡಿಮೆ ಅಂಕ ಬಂದು, ಅನುತ್ತೀರ್ಣನಾದರೆ ಅವರು ಹೊಡೆಯುತ್ತಾರೆ, ಬೈಯ್ಯುತ್ತಾರೆ ಎಂದು ಹೆದರಿ ಕೊಂದು ಹಾಕಿದೆ ಎಂದು ಬಾಲಕ  ಒಪ್ಪಿಕೊಂಡಿದ್ದಾಗಿಯೂ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ನಂತರ ಬಾಲಾಪರಾಧಿ ಕೇಂದ್ರಕ್ಕೆ ಕಳಿಸಲಾಗುವುದು ಎಂದೂ  ಹೇಳಿದ್ದಾರೆ.

ಇದನ್ನೂ ಓದಿ: Pat Cummins: ಮೊದಲ ಪಂದ್ಯದಲ್ಲೇ ಕಮಿನ್ಸ್​ ಸ್ಫೋಟಕ ಆಟ: ಕೇವಲ 14 ಎಸೆತಗಳಲ್ಲಿ ಅರ್ಧಶತಕದ ದಾಖಲೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ