ತಂದೆಯಿಂದಲೇ ಮಗನಿಗೆ ಬೆಂಕಿ ಹಾಕಿ ಹತ್ಯೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗ ಸಾವು; ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆ
ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ಗೆ ಪ್ರವಾಸ ಬಂದಿದ್ದ ಮೂವರು ಯುವಕರು ನೀರುಪಾಲಾದಂತಹ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂನ ಮಂಗಳ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಬೆಂಗಳೂರು: ತಂದೆಯಿಂದಲೇ ಮಗನಿಗೆ ಬೆಂಕಿ (Fire) ಹಾಕಿ ಹತ್ಯೆ ಮಾಡಿರುವಂತಹ ಅಮಾನವೀಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಹಾಡಹಗಲೇ ಬೆಂಗಳೂರಿನ ಅಜಾದ್ ನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಕೇವಲ 12 ಸಾವಿರ ಹಣ ಕಳೆದಿದ್ದಕ್ಕೆ ಮಗನಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಲಾಗಿದೆ. ಅಪ್ಪನೇ ಮಗನಿಗೆ ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆಯಾಗಿದೆ. ಸುರೇಂದ್ರ ಎಂಬ ಕ್ರೂರಿ ತಂದೆಯಿಂದ ಮಗ ಅರ್ಪಿತ್ಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿಲಾಗಿದೆ. ಕಳೆದ ವಾರ ಬೆಂಕಿ ಹಾಕಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅರ್ಪಿತ್ (25) ಇಂದು ಸಾವನ್ನಪ್ಪಿದ್ದಾನೆ. ರಾಜಸ್ಥಾನ ಮೂಲದ ಸುರೇಂದ್ರ ಆದರೆ ಹುಟ್ಟಿ ಬೆಳದಿರುವುದೆಲ್ಲ ಬೆಂಗಳೂರಿನಲ್ಲಿ. ತಂದೆ ಮಗ ಇಬ್ಬರೂ ಫ್ಯಾಬ್ರಿಕೇಶನ್ ಬ್ಯುಸಿನೆಸ್ ಮಾಡ್ತಾ ಇದ್ದರು. ಒಂದನೆ ತಾರೀಖು ಘಟನೆ ನಡೆದಾಗ ಆಸ್ಪತ್ರೆಗೆ ತೆರಳಿ ಮಗನ ಹೇಳಿಕೆ ಪಡೆದಿದ್ದ ಪೊಲೀಸರು, ಈ ವೇಳೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾಗ ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ತಂದೆ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸದ್ಯ ಐಪಿಸಿ 302 ರ ಪ್ರಕಾರ ಪ್ರತ್ಯಕ್ಷದರ್ಶಿಯಿಂದ ದೂರು ಪಡೆದುಕೊಂಡು ಎಫ್.ಐ.ಆರ್ ದಾಖಲು ಮಾಡಲಾಗಿದೆ.
ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ನೀರುಪಾಲು:
ಉಡುಪಿ: ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ಗೆ ಪ್ರವಾಸ ಬಂದಿದ್ದ ಮೂವರು ಯುವಕರು ನೀರುಪಾಲಾದಂತಹ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂನ ಮಂಗಳ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಅಲೆನ್ ರೇಜಿ, ಅಮಲ್ ಸಿ ಅನಿಲ್, ಅಂಟೋನಿ ಶೆಣೈ ಮುಳುಗಡೆ ಯಾದವರು. ಮಲ್ಪೆಗೆ ಪ್ರವಾಸ 42 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಬಂದಿದ್ದರು. ಆಕಸ್ಮಿಕವಾಗಿ ಮೂವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ. ಮತ್ತೋರ್ವ ವಿದ್ಯಾರ್ಥಿ ಅಂಟೋನಿ ಶೆಣೈ ಶವ ಪತ್ತೆ ಶೋಧ ಕಾರ್ಯ ನಡೆಯುತ್ತಿದೆ. ದ್ವೀಪ ಪ್ರದೇಶದ ಅಪಾಯಕಾರಿ ಸಮುದ್ರ ಭಾಗದಲ್ಲಿ ವಿದ್ಯಾರ್ಥಿಗಳು ಇಳಿದಿದ್ದರು ಎನ್ನಲಾಗುತ್ತಿದೆ.
ಬೈಕ್ ಇನೋವಾ ಕಾರು ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು:
ಚಿಕ್ಕಬಳ್ಳಾಪುರ: ಬೈಕ್ಗೆ ಇನೋವಾ ಕಾರು ಡಿಕ್ಕಿ ಬೈಕ್ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲಾಡಳಿತ ಭವನದ ಬಳಿ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ಮೂಲದ ಬೈಕ್ ಸವಾರ ಸುರೇಶ್ ಮೃತ ವ್ಯಕ್ತಿ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುರೇಶ್ ಎಫ್ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ. ಕರ್ತವ್ಯಕ್ಕೆ ಹಾಜರಾಗಲು ಬೈಕ್ನಲ್ಲಿ ಆಗಮಿಸುತ್ತಿರುವಾಗ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: