AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತನುಜಾ’ ಸಿನಿಮಾ ಶೂಟಿಂಗ್​ನಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್​; ಇಲ್ಲಿವೆ ಫೋಟೋಗಳು

‘ತನುಜಾ’ ಸಿನಿಮಾದಲ್ಲಿ ಡಾ. ಕೆ. ಸುಧಾಕರ್ ನಟಿಸಿದ್ದಾರೆ. ಒಂದೇ ಟೇಕ್​ನಲ್ಲಿ ತಮ್ಮ ಪಾತ್ರದ ಶೂಟಿಂಗ್​ ಮುಗಿಸಿ ಸೈ ಎನಿಸಿಕೊಂಡಿದ್ದಾರೆ.

TV9 Web
| Updated By: ಮದನ್​ ಕುಮಾರ್​

Updated on: Apr 07, 2022 | 4:10 PM

ನೈಜ ಘಟನೆ ಆಧಾರಿತ ‘ತನುಜಾ’ ಸಿನಿಮಾದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನಟಿಸುತ್ತಾರೆ ಎಂಬುದು ಇತ್ತೀಚೆಗೆ ತಿಳಿದುಬಂದಿತ್ತು. ಈಗ ಅದೇ ಸಿನಿಮಾದಲ್ಲಿ ಸಚಿವ ಡಾ. ಕೆ. ಸುಧಾಕರ್ ಅವರು ಕೂಡ ನಟಿಸುತ್ತಿದ್ದಾರೆ. ಆ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದಾರೆ. ಈ ಸಿನಿಮಾ ಬಗ್ಗೆ ಜನರಿಗೆ ಕೌತುಕ ಮೂಡಿದೆ.

Minister Dr K Sudhakar acts in Tanuja Kannada movie based on real incidents

1 / 5
ತನುಜಾ ಎಂಬ ವಿದ್ಯಾರ್ಥಿನಿ ಕೊವಿಡ್ ಸಮಯದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ್ದಳು. ಆಗ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸಚಿವ ಡಾ. ಕೆ. ಸುಧಾಕರ್ ಮುಂತಾದವರು ಸಹಾಯ ಮಾಡಿದ್ದರು. ಹೀಗೆ ಕಷ್ಟದಲ್ಲಿ ಪರೀಕ್ಷೆ ಬರೆದ ತನುಜಾ ವೈದ್ಯಕೀಯ ಸೀಟು ಪಡೆದಿದ್ದು ಎಲ್ಲರ ಹುಬ್ಬೇರಿಸಿತ್ತು. ಆ ನೈಜ ಘಟನೆ ಆಧರಿಸಿ ‘ತನುಜಾ’ ಚಿತ್ರ ಸಿದ್ಧವಾಗುತ್ತಿದೆ.

Minister Dr K Sudhakar acts in Tanuja Kannada movie based on real incidents

2 / 5
ಡಾ.ಕೆ.ಸುಧಾಕರ್

Covid Positive to Health Minister Sudhakar

3 / 5
ಡಾ. ಕೆ. ಸುಧಾಕರ್​ ಅವರು ತಮ್ಮ ರಿಯಲ್​ ಲೈಫ್​ ಪಾತ್ರಕ್ಕೆ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆ. ಶೂಟಿಂಗ್​ ಸಮಯ ಫೋಟೋಗಳನ್ನು ಚಿತ್ರತಂಡ ಹಂಚಿಕೊಂಡಿದೆ.

4 / 5
‘ತನುಜಾ’ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂ.ಡಿ. ಹಳ್ಳಿಯವರ ನಿರ್ದೇಶನ ಮಾಡುತ್ತಿದ್ದಾರೆ. ಬಿಯಾಂಡ್​ ವಿಷನ್ಸ್​ ಸಿನಿಮಾಸ್​ ಸಂಸ್ಥೆ ಬಂಡವಾಳ ಹೂಡುತ್ತಿದೆ. ಶಿವಮೊಗ್ಗ ಮತ್ತು ಬೆಂಗಳೂರಿನ ಹಲವೆಡೆ ಚಿತ್ರೀಕರಣ ಮಾಡಲಾಗುತ್ತಿದೆ. ರಾಜೇಶ್ ನಟರಂಗ, ಸಪ್ತಾ ಪಾವೂರ್ ಕೂಡ ನಟಿಸಿದ್ದಾರೆ.

5 / 5
Follow us