ಎಫ್ಎಸ್ಎಲ್ ವರದಿ ವಿಳಂಬವಾದ ಮಾತ್ರಕ್ಕೆ ಕಡ್ಡಾಯ ಜಾಮೀನಿಲ್ಲ; ಮಾದಕದ್ರವ್ಯ ಪ್ರಕರಣದಲ್ಲಿ ಹೈಕೋರ್ಟ್ ಆದೇಶ

ಎಫ್ಎಸ್ಎಲ್ ವರದಿ ವಿಳಂಬವಾದ ಮಾತ್ರಕ್ಕೆ ಕಡ್ಡಾಯ ಜಾಮೀನಿಲ್ಲ; ಮಾದಕದ್ರವ್ಯ ಪ್ರಕರಣದಲ್ಲಿ ಹೈಕೋರ್ಟ್ ಆದೇಶ
ಹೈಕೋರ್ಟ್

ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಮದುಮಗ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಬಳಿ ಘಟನೆ ಸಂಭವಿಸಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 07, 2022 | 7:55 PM

ಬೆಂಗಳೂರು: ಎಫ್ಎಸ್ಎಲ್ (FSL) ವರದಿ ವಿಳಂಬವಾದ ಮಾತ್ರಕ್ಕೆ ಕಡ್ಡಾಯ ಜಾಮೀನಿಲ್ಲ ಎಂದು ಮಾದಕದ್ರವ್ಯ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ನೀಡಿದೆ. ಆರೋಪಪಟ್ಟಿ ದಾಖಲಿಸುವಾಗ ಎಫ್ಎಸ್ಎಲ್ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಸಿಆರ್​​ಪಿಸಿ ಸೆ.167(2) ಅಡಿ ಕಡ್ಡಾಯ ಜಾಮೀನು ಕೋರಿದ್ದ ಆರೋಪಿ ಸೈಯದ್ ಮೊಹಮ್ಮದ್ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಎಫ್ಎಸ್ಎಲ್ ವರದಿ ವಿಳಂಬವಾದ ಮಾತ್ರಕ್ಕೆ ಆರೋಪಪಟ್ಟಿ ಅಪೂರ್ಣವಲ್ಲ. ನಂತರ ಹೆಚ್ಚುವರಿ ಚಾರ್ಜ್ ಷೀಟ್ ನಂತೆ ಎಫ್ಎಸ್ಎಲ್ ವರದಿ ಸಲ್ಲಿಸಬಹುದು ಎಂದು ನ್ಯಾ.ಎಂ. ನಾಗಪ್ರಸನ್ನರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಮಾಡಿದೆ.

ಬೈಕ್ ಮತ್ತು ಕಾರು ನಡುವೆ ಅಪಘಾತ; ಸ್ಥಳದಲ್ಲೇ ಮದುಮಗ ಸೇರಿ ಇಬ್ಬರು ಸಾವು:

ಕಲಬುರಗಿ: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮ ಮದುಮಗ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಬಳಿ ಘಟನೆ ಸಂಭವಿಸಿದೆ. ಯಡ್ರಾಮಿ ತಾಲೂಕಿನ ಕೋಣಶಿರಸಗಿ ಗ್ರಾಮದ ದೇವೇಂದ್ರಪ್ಪ (30) ವಸ್ತಾರಿ ಗ್ರಾಮದ ಗುರುರಾಜ (30) ಮೃತರು. ಎಪ್ರಿಲ್ 17 ರಂದು ದೇವೇಂದ್ರಪ್ಪ ಅವರ ಮದುವೆ ನಿಶ್ಚಯವಾಗಿತ್ತು. ಸಂಬಂಧಿಕರಿಗೆ ಮದುವೆ ಆಹ್ವಾನ ಪತ್ರ ನೀಡಲು ಜೇರಟಗಿಯತ್ತ ತೆರಳುತ್ತಿದ್ದರು. ಓವರಟೇಕ್ ಮಾಡಿಕೊಂಡ ಬಂದ ಕಾರು ಬೈಕ್​ಗೆ ಡಿಕ್ಕಿ ಹೊಡೆದಿದೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಿಡಿಲು ಬಡಿದು ಹದಿನೈದು ವರ್ಷದ ಬಾಲಕ ಸಾವು:

ಹಾವೇರಿ: ಸಿಡಿಲು ಬಡಿದು ಹದಿನೈದು ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಕಟ್ಟಿ ಗ್ರಾಮದ ಬಳಿ ಘಟನೆ ನಡೆದಿದೆ. ಮಹಾಂತೇಶ ಜಟ್ಟೆಪ್ಪನವರ 15 ವರ್ಷ ಮೃತ ಬಾಲಕ. ಮೃತ ಮಹಾಂತೇಶ, ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರ ಗ್ರಾಮದ ನಿವಾಸಿಯಾಗಿದ್ದಾನೆ. ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ. ಭಾರಿ ಗಾಳಿ ಮತ್ತು ಸಿಡಿಲಿನೊಂದಿಗೆ ಮಳೆಯಾಗುತ್ತಿದ್ದ ವೇಳೆ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈಜು ಬಾರದೇ ಯುವತಿ ಕೆರೆಯಲ್ಲಿ ಮುಳುಗಿ ಸಾವು:

ಯಾದಗಿರಿ: ಗೆಳತಿಯರೊಂದಿಗೆ ಈಜಲು ಹೋಗಿ ಯುವತಿ ನೀರುಪಾಲಾದಂತಹ ಘಟನೆ ನಡೆದಿದೆ. ಈಜು ಬಾರದೇ ಯುವತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ತಾಲೂಕಿನ ಮೈಲಾಪುರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ವಸಂತ ದಾನಪ್ಪ(24) ನೀರುಪಾಲಾದ ಯುವತಿ. ಸಾವಿಗೀಡಾದ ಯುವತಿ ಕಲಬುರ್ಗಿ ಜಿಲ್ಲೆಯ ಶಹಾಬಾದ್ ನಿವಾಸಿವಳಾಗಿದ್ದಾಳೆ. ವಸಂತ ಕುಟುಂಬಸ್ಥರೆಲ್ಲರೂ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಆಗ 5 ಜನ ಸ್ನೇಹಿತೆಯರೊಂದಿಗೆ ಕೆರೆಯಲ್ಲಿ ಈಜಲು ಹೋದಾಗ ನಡೆದ ಘಟನೆ ಸಂಭವಿಸಿದೆ. ಕೆರೆಯ ಆಳ ಗೊತ್ತಿಲ್ಲದೇ ಈಜಲು ಹೋಗಿದ್ದ ಯುವತಿ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೋಲಿಸರ ದೌಡಾಯಿಸಿ ಯುವತಿ ಶವ ಹೊರತೆಗೆದಿದ್ದಾರೆ. ಯಾದಗಿರಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಇದನ್ನೂ ಓದಿ:

Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಏಪ್ರಿಲ್ 7ರ ಚಿನ್ನ, ಬೆಳ್ಳಿ ದರ ಇಲ್ಲಿದೆ

Second PU exams time table: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟ

Follow us on

Related Stories

Most Read Stories

Click on your DTH Provider to Add TV9 Kannada