ಮೋಸ ಮಾಡಿ 3 ಲಕ್ಷ ರೂ. ವಂಚನೆ; ಐಐಎಫ್​​​ಎಲ್ ಗೋಲ್ಡ್ ಲೋನ್ ಕಂಪನಿಗೆ ಟೋಪಿ ಹಾಕಿದ ಆಸಾಮಿ

ಮೋಸ ಮಾಡಿ 3 ಲಕ್ಷ ರೂ. ವಂಚನೆ; ಐಐಎಫ್​​​ಎಲ್ ಗೋಲ್ಡ್ ಲೋನ್ ಕಂಪನಿಗೆ ಟೋಪಿ ಹಾಕಿದ ಆಸಾಮಿ
ಬಾಬು ಕಿರಣ್​​

ಮಧು ಯುವಕನ ಮೇಲೆ ಅನ್ಯಕೋಮಿನ ಆರು ಯುವಕರಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ನಗರದ ನ್ಯೂ ಮಂಡ್ಲಿ ಬಳಿ ಘಟನೆ ಸಂಭವಿಸಿದ್ದು, ಏಕಾಏಕಿ ಅದೇ ಏರಿಯಾದ ಯುವಕರಿಂದ ಕೃತ್ಯ ಎಸಗಲಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 07, 2022 | 6:24 PM

ನೆಲಮಂಗಲ: ಕದ್ದ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ಹಣ ಪಡೆದ ಆರೋಪಿ, ಐಐಎಫ್​​​ಎಲ್ (IIFL) ಗೋಲ್ಡ್ ಲೋನ್ ಕಂಪನಿಗೆ ಮಕ್ಮಲ್ ಟೋಪಿ ಹಾಕಿರುವಂತಹ ಘಟನೆ ನಡೆದಿದೆ. ಬೆಂಗಳೂರಿನ ಟಿ.ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿರುವ ಬ್ರಾಚ್​ನಲ್ಲಿ ಘಟನೆ ನಡೆದಿದೆ. ಶೋಕಿ ಮಾಡಲು ಮನೆಗಳ್ಳತನ ಮಾಡಿದ್ದ ಚಿಕ್ಕಬಾಣಾವರದ ಬಾಬು ಕಿರಣ್​​ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ನಂಬಿಸಿ ದ್ರೋಹ ಹಾಗೂ ಮೋಸ ಮಾಡಿ ಕಂಪನಿಗೆ 3ಲಕ್ಷ ರೂಪಾಯಿ ನಷ್ಟ ಮಾಡಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಗೆ ಐಐಎಫ್​​​ಎಲ್ ಗೋಲ್ಡ್ ಲೋನ್ ಕಂಪನಿ ಮ್ಯಾನೇಜರ್ ಶೋಭ ದೂರು ನೀಡಿದ್ದಾರೆ. ಮನೆಯಲ್ಲಿ ತುಂಬಾ ಕಷ್ಟ ಇರುವುದಾಗಿ ನಂಬಿಸಿ ವಂಚಿಸಿದ್ದು, ಶೋಕಿ ಲೈಫ್ ಮಾಡಲು ಕೃತ್ಯವೆಸಗಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರಿಂದ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

13 ವರ್ಷದ ಪುತ್ರಿಯ ಮೇಲೆ‌ ತಂದೆಯಿಂದಲೇ ಅತ್ಯಾಚಾರ ಪ್ರಕರಣ; ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ:

ಬೆಂಗಳೂರು: 13 ವರ್ಷದ ಪುತ್ರಿಯ ಮೇಲೆ‌ ತಂದೆಯಿಂದಲೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಅತ್ಯಾಚಾರಿ ತಂದೆಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ 2ನೇ ತ್ವರಿತ ನ್ಯಾಯಾಲಯದಿಂದ ತೀರ್ಪ ನೀಡಲಾಗಿದೆ. 2015 ರಲ್ಲಿ ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ‌ ಸಹಾಯವಾಣಿ ಬಾಲಕಿಯನ್ನು ರಕ್ಷಿಸಿತ್ತು. ಈವರೆಗೂ ಎನ್​ಜಿಒ ಒಂದರಲ್ಲಿ ಆಶ್ರಯ ಪಡೆದಿದ್ದ ಬಾಲಕಿ, ಐಪಿಸಿ, ಪೊಕ್ಸೊ ಕಾಯ್ದೆಯಡಿ 20 ವರ್ಷ ಕಠಿಣ ಸಜೆ ನೀಡಲಾಗಿದೆ. ಎಫ್.ಟಿಸಿ 2ರ ವಿಶೇಷ ನ್ಯಾಯಾಧೀಶ ಎ.ಜಿ.ಗಂಗಾಧರ ತೀರ್ಪು ನೀಡಿದ್ದು, ಸಂತ್ರಸ್ತೆ ಪರ ಪಿಪಿ ಕೆ.ವಿ.ಅಶ್ವಥ್ ನಾರಾಯಣ ವಾದ ಮಂಡಿಸಿದ್ದಾರೆ. ಸಂತ್ರಸ್ತ ಬಾಲಕಿಗೆ 4 ಲಕ್ಷ ಪರಿಹಾರ ನೀಡಲು ಆದೇಶಿಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.

ಅನ್ಯಕೋಮಿನ ಯುವಕರಿಂದ ಮತ್ತೋರ್ವ ಯುವಕನ ಮೇಲೆ ಹಲ್ಲೆ:

ಶಿವಮೊಗ್ಗ: ಮಧು ಯುವಕನ ಮೇಲೆ ಅನ್ಯಕೋಮಿನ ಆರು ಯುವಕರಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ನಗರದ ನ್ಯೂ ಮಂಡ್ಲಿ ಬಳಿ ಘಟನೆ ಸಂಭವಿಸಿದ್ದು, ಏಕಾಏಕಿ ಅದೇ ಏರಿಯಾದ ಯುವಕರಿಂದ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಧು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡ ಪೇಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಪ್ರಕರಣ; ಐದು ಆರೋಪಿಗಳನ್ನು ಬಂಧಿಸಿದ ಪೊಲೀಸರು:

ನಿಪ್ಪಾಣಿ: ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಸೆರೆಯಾಗಿದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ನಿಪ್ಪಾಣಿ ನಗರದ ಮಾನವಿ ಗಲ್ಲಿಯಲ್ಲಿ ನಡೆದಿದ್ದ ಅಭಿಷೇಕ್ ದತ್ತವಾಡೆ ಎಂಬ ಯುವಕನ ಕೊಲೆಯಾಗಿತ್ತು. ಐವರು ಸ್ನೇಹಿತರು ಸೇರಿ ಅಭಿಷೇಕ್ ಕೊಲೆ ಮಾಡಿ ಪರಾರಿಯಾಗಿದ್ದರು. ಅದರಲ್ಲಿ ಮೂವರು ಅಪ್ರಾಪ್ತ ವಯಸ್ಕರರಾಗಿದ್ದಾರೆ. ಸೈಪ್ ಅಲಿ, (22) ಹಾಗೂ ಅಮನ್ ಯಕ್ಸಂಬೆ (22) ಬಂಧಿತ ಆರೋಪಿಗಳು. ನಿಪ್ಪಾಣಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ದಾಖಲಾಗಿದೆ.

ಈಜು ಬಾರದೇ ಯುವತಿ ಕೆರೆಯಲ್ಲಿ ಮುಳುಗಿ ಸಾವು:

ಯಾದಗಿರಿ: ಗೆಳತಿಯರೊಂದಿಗೆ ಈಜಲು ಹೋಗಿ ಯುವತಿ ನೀರುಪಾಲಾದಂತಹ ಘಟನೆ ನಡೆದಿದೆ. ಈಜು ಬಾರದೇ ಯುವತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ. ತಾಲೂಕಿನ ಮೈಲಾಪುರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ವಸಂತ ದಾನಪ್ಪ(24) ನೀರುಪಾಲಾದ ಯುವತಿ. ಸಾವಿಗೀಡಾದ ಯುವತಿ ಕಲಬುರ್ಗಿ ಜಿಲ್ಲೆಯ ಶಹಾಬಾದ್ ನಿವಾಸಿವಳಾಗಿದ್ದಾಳೆ. ವಸಂತ ಕುಟುಂಬಸ್ಥರೆಲ್ಲರೂ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಬಂದಿದ್ದರು. ಆಗ 5 ಜನ ಸ್ನೇಹಿತೆಯರೊಂದಿಗೆ ಕೆರೆಯಲ್ಲಿ ಈಜಲು ಹೋದಾಗ ನಡೆದ ಘಟನೆ ಸಂಭವಿಸಿದೆ. ಕೆರೆಯ ಆಳ ಗೊತ್ತಿಲ್ಲದೇ ಈಜಲು ಹೋಗಿದ್ದ ಯುವತಿ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೋಲಿಸರ ದೌಡಾಯಿಸಿ ಯುವತಿ ಶವ ಹೊರತೆಗೆದಿದ್ದಾರೆ. ಯಾದಗಿರಿ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಬಸ್​; ತಪ್ಪಿದ ಬಾರಿ ಅನಾಹುತ:

ತುಮಕೂರು: ರಸ್ತೆ ಕಾಮಗಾರಿ ಅಪೂರ್ಣ ಗೊಂಡ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಬಾರಿ ಅನಾಹುತ ತಪ್ಪಿದ್ದು, ಬಸ್ ಪ್ರಯಾಣಿಕರು ಸೇಫ್​ ಆಗಿದ್ದಾರೆ. ಜಿಲ್ಲೆಯ ಗುಬ್ಬಿ ತಾಲೂಕಿನ ಅರೇನಹಳ್ಳಿ ಗೇಟ್ ಬಳಿ ದುರಂತ ತಪ್ಪಿದೆ. ಬೆಂಗಳೂರಿನಿಂದ ಕಡೂರಿಗೆ ತೆರಳುತಿದ್ದ ಸರ್ಕಾರಿ ಬಸ್, 17 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಸೇತುವೆ ಮೇಲೆ ನಿಂತ ಬಸ್ ಕೆಳಗೆ ಬಿದಿದ್ದರೆ ಹೆಚ್ಚಿನ ಅನಾಹುತವಾಗುವ ಸಂಭವವಿತ್ತು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ:

ತಂದೆಯಿಂದಲೇ ಮಗನಿಗೆ ಬೆಂಕಿ ಹಾಕಿ ಹತ್ಯೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಇಂದು ಮಗ ಸಾವು; ಬೆಂಕಿ ಹಾಕುವ ದೃಶ್ಯಾವಳಿ ಸಿಸಿಟಿಯಲ್ಲಿ ಸೆರೆ

Shocking News: ಮನೆ ಹೊರಗೆ ಆಡುತ್ತಿದ್ದ ಅಣ್ಣ-ತಂಗಿ ಮೇಲೆ 20ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿ; ಬಾಲಕ ಸಾವು

Follow us on

Related Stories

Most Read Stories

Click on your DTH Provider to Add TV9 Kannada