ಮನೆ ಮೇಲಿನ ದಾಳಿ ಬಿಜೆಪಿ ಗೂಂಡಾಗಿರಿ; ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆದಾಗ ಬಿಜೆಪಿ ಸರ್ಕಾರವಿತ್ತು, ಯಾಕೆ ಪುನರ್ವಸತಿ ಕಲ್ಪಿಸಿಲ್ಲ?: ಕೇಜ್ರಿವಾಲ್

Arvind Kejriwal ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿಗೆ "ನಿಜವಾಗಿಯೂ ಚಿಂತೆ ಇಲ್ಲ" ಎಂದು ಕೇಜ್ರಿವಾಲ್, "ಹತ್ಯಾಕಾಂಡ ನಡೆದಾಗ ಯಾರ ಸರ್ಕಾರ ಅಧಿಕಾರದಲ್ಲಿತ್ತು? ಅದು ಬಿಜೆಪಿಯದ್ದು. ಅವರ ರಾಜ್ಯಪಾಲ ಜಗಮೋಹನ್ ಆಗಿದ್ದರು. ಆಗ ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿತ್ತು.

ಮನೆ ಮೇಲಿನ ದಾಳಿ ಬಿಜೆಪಿ ಗೂಂಡಾಗಿರಿ; ಕಾಶ್ಮೀರದಲ್ಲಿ ಹತ್ಯಾಕಾಂಡ ನಡೆದಾಗ ಬಿಜೆಪಿ ಸರ್ಕಾರವಿತ್ತು, ಯಾಕೆ ಪುನರ್ವಸತಿ ಕಲ್ಪಿಸಿಲ್ಲ?: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 07, 2022 | 6:19 PM

ದೆಹಲಿ: “ದಿ ಕಾಶ್ಮೀರ ಫೈಲ್ಸ್” (The Kashmir Files) ಕುರಿತ ತಮ್ಮ ಹೇಳಿಕೆಗಳಿಂದ ಕೋಪಗೊಂಡ ಪ್ರತಿಭಟನಾಕಾರರು ತಮ್ಮ ದೆಹಲಿ ನಿವಾಸದ ಮೇಲೆ ನಡೆಸಿದ ದಾಳಿಯು ಬಿಜೆಪಿ(BJP) ಗೂಂಡಾಗಿರಿ. ಈ ರೀತಿ “ಹಿಂಸಾಚಾರದ ರಾಜಕೀಯ” ಕೊನೆಗೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಗುರುವಾರ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಕಳೆದ ತಿಂಗಳು ಪ್ರತಿಭಟನಾಕಾರರು ತಮ್ಮ ಗೇಟ್‌ಗಳನ್ನು ಧ್ವಂಸಗೊಳಿಸಿದಾಗ ಅವರ ಪೋಷಕರು ಮನೆಯಲ್ಲಿ ಒಬ್ಬರೇ ಇದ್ದರು ಎಂದಿದ್ದಾರೆ. “ಪ್ರತಿಭಟನಾಕಾರರು ಬಿಜೆಪಿಯ ಜನರು, ಅವರು ನನ್ನ ಮನೆಗೆ ಬಂದರು, ಗೋಡೆಗಳನ್ನು ಹತ್ತಿದರು, ನನ್ನ ವಯಸ್ಸಾದ ಪೋಷಕರು ಅಲ್ಲಿದ್ದರು. ನಾವು ಮನೆಯಲ್ಲಿ ಇರಲಿಲ್ಲ. ನಿಮ್ಮ ಮನೆಯಲ್ಲಿ ಈ ರೀತಿ ಮಾಡಲು ಯಾರಿಗಾದರೂ ಹಕ್ಕಿದೆಯೇ?” “ನನ್ನ ಪ್ರಾಣ ಮುಖ್ಯವಲ್ಲ, ನಾನು ಹೇಳುತ್ತಲೇ ಇದ್ದೇನೆ, ನನ್ನ ಜೀವನದ ಬಗ್ಗೆ ನನಗೆ ಕಾಳಜಿ ಇಲ್ಲ, ನನ್ನ ಜೀವನ ದೇಶಕ್ಕಾಗಿರುವುದು. ನಾನು 15 ದಿನ ಉಪವಾಸ ಮಾಡಿದ್ದೇನೆ. ನನ್ನಲ್ಲಿ ಏನಾದರೂ ಹುಚ್ಚುತನವಿದೆಯೇ? ನಾನು ಬದುಕುಳಿಯುವುದಿಲ್ಲ ಎಂದಿದ್ದರು ವೈದ್ಯರು. ನಾನು ಮಧುಮೇಹ ರೋಗಿ, ಆದರೆ ಈ ಗೂಂಡಾಗಿರಿ ದೇಶಕ್ಕೆ ಒಳ್ಳೆಯದಲ್ಲ. ನನ್ನ ಜೀವಕ್ಕೆ ಯಾವುದೇ ಬೆದರಿಕೆಯ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದಿದ್ದಾರೆ ಕೇಜ್ರಿವಾಲ್.

ದೆಹಲಿ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಕೇಜ್ರಿವಾಲ್ ಅವರು, ಬಿಜೆಪಿ ನಾಯಕರು ಕಾಶ್ಮೀರ ಫೈಲ್ಸ್ “ಪ್ರಚಾರ” ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿರ್ಮಾಪಕರು ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಹೇಳುವ ಮೂಲಕ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಬೇಕೆಂಬ ಬೇಡಿಕೆಗೆ ಪ್ರತಿಕ್ರಿಯಿಸಿದ್ದರು.

ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ ನಾನು ಪಂಜಾಬ್ ಚುನಾವಣೆಗಳ ಕಾರಣದಿಂದ ದೀರ್ಘಕಾಲದವರೆಗೆ ಚಲನಚಿತ್ರಗಳನ್ನು ನೋಡಿಲ್ಲ. ನಾನು ತುಂಬಾ ಬ್ಯುಸಿಯಾಗಿದ್ದೆ ಎಂದಿದ್ದಾರೆ.

ಕಾಶ್ಮೀರಿ ಪಂಡಿತರ ಬಗ್ಗೆ ಬಿಜೆಪಿಗೆ “ನಿಜವಾಗಿಯೂ ಚಿಂತೆ ಇಲ್ಲ” ಎಂದು ಕೇಜ್ರಿವಾಲ್, “ಹತ್ಯಾಕಾಂಡ ನಡೆದಾಗ ಯಾರ ಸರ್ಕಾರ ಅಧಿಕಾರದಲ್ಲಿತ್ತು? ಅದು ಬಿಜೆಪಿಯದ್ದು. ಅವರ ರಾಜ್ಯಪಾಲ ಜಗಮೋಹನ್ ಆಗಿದ್ದರು. ಆಗ ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿತ್ತು. ಅವರು ಕಾಶ್ಮೀರಿ ಪಂಡಿತರಿಗೆ  ಅನ್ಯಾಯ ಮಾಡಿದ್ದಾರೆ. ಒಂದು ಕುಟುಂಬಕ್ಕೂ ಪುನರ್ವಸತಿ ಕಲ್ಪಿಸಿಲ್ಲ. ಎಷ್ಟೋ ವರ್ಷಗಳ ನಂತರ ಬಂದು ನಿಮ್ಮ ಮೇಲೆ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿ ಹಣ ಗಳಿಸುತ್ತಾರೆ. ಇದು ದುರಂಹಾರ. ಇದು ಅವರ ಗಾಯಗಳಿಗೆ ಉಪ್ಪು ಸವರಿದಂತಿದೆ. ಅವರ ಜಾಗದಲ್ಲಿ ನಾನಿದ್ದರೆ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸುತ್ತಿದ್ದೆ. ನಾನು ಅನೇಕ ಕಾಶ್ಮೀರಿ ಪಂಡಿತರೊಂದಿಗೆ ಮಾತನಾಡಿದ್ದೇನೆ, ಅವರು ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ನೇತೃತ್ವದ ಆಪ್ ಮಾತ್ರ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರ್ಮೂಲ ಮಾಡಲು ಶಕ್ತವಾಗಿದೆ: ಭಾಸ್ಕರ್ ರಾವ್

ಇದನ್ನೂ ಓದಿ: ಭಾರತದ ದೊಡ್ಡ ಪಕ್ಷ ಗೂಂಡಾಗಿರಿ ನಡೆಸಿದರೆ ಅದು ತಪ್ಪು ಸಂದೇಶ ರವಾನಿಸುತ್ತದೆ, ದೇಶಕ್ಕಾಗಿ ನಾನು ಪ್ರಾಣ ಕೊಡಬಲ್ಲೆ: ಅರವಿಂದ ಕೇಜ್ರಿವಾಲ್

Published On - 5:51 pm, Thu, 7 April 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್