ತನ್ನ ಜಮೀನು ಉಳಿಸಿಕೊಳ್ಳಲು ಜೆಸಿಬಿ ಮುಂದೆ ಉರುಳು ಸೇವೆ ಮಾಡಿದ ಜಡ್ಜ್; ಮುಂದೇನಾಯ್ತು ನೋಡಿ

ತನ್ನ ಜಮೀನು ಉಳಿಸಿಕೊಳ್ಳಲು ಜೆಸಿಬಿ ಮುಂದೆ ಉರುಳು ಸೇವೆ ಮಾಡಿದ ಜಡ್ಜ್; ಮುಂದೇನಾಯ್ತು ನೋಡಿ
ಜೆಸಿಬಿ ಎದುರು ಮಲಗಿದ ಜಡ್ಜ್

ಬಸ್ತಿ ಜಿಲ್ಲೆಯ ಛಾಪಿಯಾ ಶುಕ್ಲಾ ಗ್ರಾಮದಲ್ಲಿ ಕಾಲುವೆ ಅಗೆಯುವ ವೇಳೆ ಎಡಿಜೆ ಮನೋಜ್ ಶುಕ್ಲಾ ಅವರು ಜೆಸಿಬಿ ಎದುರು ಮಲಗಿ ಅಗೆಯುವ ಕಾಮಗಾರಿಯನ್ನು ವಿರೋಧಿಸಿದ್ದರು. ನ್ಯಾಯಾಧೀಶರ ಈ ಪ್ರತಿಭಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.

TV9kannada Web Team

| Edited By: Sushma Chakre

Apr 07, 2022 | 6:27 PM

ಅಲಹಾಬಾದ್: ಬಸ್ತಿ ಜಿಲ್ಲೆಯ ತಮ್ಮ ಪೂರ್ವಜರ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿರುವುದನ್ನು ವಿರೋಧಿಸಿ ಜೆಸಿಬಿ (JCB) ಎದುರು ಉರುಳಾಡಿ, ಪ್ರತಿಭಟಿಸಿದ್ದ ಸುಲ್ತಾನಪುರ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಎಡಿಜೆ) ಮನೋಜ್ ಶುಕ್ಲಾ ಅವರನ್ನು ಅಲಹಾಬಾದ್ ಹೈಕೋರ್ಟ್ ಅಮಾನತು ಮಾಡಿದೆ. ಬಸ್ತಿ ಜಿಲ್ಲೆಯ ಹರಯಾ ಪೊಲೀಸ್ ಠಾಣೆ ವ್ಯಾಪ್ತಿಯ ಛಾಪಿಯಾ ಶುಕ್ಲಾ ಗ್ರಾಮದಲ್ಲಿ ಕಾಲುವೆ ಅಗೆಯುವ ವೇಳೆ ಎಡಿಜೆ ಮನೋಜ್ ಶುಕ್ಲಾ ಅವರು ಜೆಸಿಬಿ ಎದುರು ಮಲಗಿ ಅಗೆಯುವ ಕಾಮಗಾರಿಯನ್ನು ವಿರೋಧಿಸಿದ್ದರು. ನ್ಯಾಯಾಧೀಶರ ಈ ಪ್ರತಿಭಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.

ಎಡಿಜೆ ಶುಕ್ಲಾ ಅವರ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್ ಆಡಳಿತ ಸಮಿತಿಯು ಅವರನ್ನು ಅಮಾನತುಗೊಳಿಸಲು ನಿರ್ಧರಿಸಿದೆ. ಈ ಅಮಾನತು ಆದೇಶವನ್ನು ಸುಲ್ತಾನ್‌ಪುರ ಜಿಲ್ಲಾ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಎಡಿಜೆ ಶುಕ್ಲಾ ಅವರು ಇಡೀ ರಾತ್ರಿ ಜಿಲ್ಲಾಡಳಿತ ತಂಡದ ಮುಂದೆ ಊಟ, ಕುಡಿಯದೆ ನೆಲದ ಮೇಲೆ ಮಲಗಿ ಅವಾಂತರ ಸೃಷ್ಟಿಸಿದ್ದರು ಎಂದು ವರದಿಗಳು ತಿಳಿಸಿವೆ.

ನಾನು ನ್ಯಾಯಾಂಗ ಅಧಿಕಾರಿ, ಇದು ನನ್ನ ಪೂರ್ವಜರ ಭೂಮಿ. ನಮ್ಮ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಭೂ ಸ್ವಾಧೀನ ನಿಯಮಗಳಿಗೆ ವಿರುದ್ಧವಾಗಿದ್ದು, ಜಿಲ್ಲಾಧಿಕಾರಿ ನೀಡಿರುವ ಆದೇಶ ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ಎಡಿಜೆ ಮನೋಜ್ ಶುಕ್ಲಾ ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮನೋಜ್ ಶುಕ್ಲಾ ಜೆಸಿಬಿ ಎದುರು ಮಲಗಿರುವ ಬಗ್ಗೆ ಟ್ವೀಟ್ ಮಾಡಿದ್ದು, ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ಅಧಿಕಾರಿಗೇ ಹೀಗಾದರೆ ಸಾಮಾನ್ಯ ಜನರಿಗೆ ಏನಾಗಬಹುದು ಎಂದು ಊಹಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮುನ್ನಾರ್​ ರಸ್ತೆಯಲ್ಲಿ ಬಸ್​ ಎದುರು ಬಂದು ಗಾಜು ಒಡೆದ ಕಾಡಾನೆ; ಚಾಲಕ ಮಾಡಿದ್ದೇನು?

Viral Video: ಬಾಯಾರಿದ ಕೋತಿಗೆ ನೀರು ಕುಡಿಸಿದ ಟ್ರಾಫಿಕ್ ಪೊಲೀಸ್; ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ

Follow us on

Related Stories

Most Read Stories

Click on your DTH Provider to Add TV9 Kannada