ಮಣ್ಣಿನ ಮಡಕೆ ಬಳಸಿ; ತಮ್ಮ ಇಲಾಖೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ನಿಷೇಧಕ್ಕೆ ಉತ್ತರ ಪ್ರದೇಶದ ಸಚಿವ ಆದೇಶ
ಪ್ಲಾಸ್ಟಿಕ್ ಬಾಟಲಿಗಳ ಬದಲು ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮಡಕೆ ಮತ್ತು ಕುಲ್ಹಾದ್‌ಗಳನ್ನು ಬಳಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸಚಿವ ಧರಮ್ವೀರ್ ಪ್ರಜಾಪತಿ ಸೂಚಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಗೃಹರಕ್ಷಕ ದಳ ಮತ್ತು ಕಾರಾಗೃಹ ಇಲಾಖೆ ಸಚಿವ ಧರಮ್ವೀರ್ ಪ್ರಜಾಪತಿ ತಮ್ಮ ಇಲಾಖೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ (Plastic Water Bottles) ಬಳಕೆ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಬೇರೆ ಸರ್ಕಾರ ಹಾಗೂ ಇಲಾಖೆಗಳಿಗೆ ಮಾದರಿಯಾಗಿದ್ದಾರೆ. ಎಲ್ಲ ಕಡೆ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ನೀಡಲಾಗುತ್ತದೆ. ಇದರಿಂದ ಪ್ಲಾಸ್ಟಿಕ್ ತ್ಯಾಜ್ಯವೂ ಹೆಚ್ಚಾಗುತ್ತಿದೆ. ಹೀಗಾಗಿ, ಪ್ಲಾಸ್ಟಿಕ್ ನೀರಿನ ಬಾಟಲಿಯ ಬದಲಾಗಿ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮಡಕೆಗಳನ್ನು ಬಳಸಿಕೊಳ್ಳುವಂತೆ ಸಚಿವ ಧರಮ್ವೀರ್ ಪ್ರಜಾಪತಿ ಸೂಚಿಸಿದ್ದಾರೆ.
ಪರಿಸರ ಮತ್ತು ಆರೋಗ್ಯ ಸಂಬಂಧಿ ಕಾರಣಗಳಿಂದ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆಯನ್ನು ನಮ್ಮ ಇಲಾಖೆಯಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯಿಂದ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳು ಬರಬಹುದು ಆದ್ದರಿಂದ ಇದರ ಬಳಕೆಯನ್ನು ತಪ್ಪಿಸಬೇಕು ಎಂದು ಸಚಿವ ಧರಮ್ವೀರ್ ಪ್ರಜಾಪತಿ ಹೇಳಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳ ಬದಲು ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮಡಕೆ ಮತ್ತು ಕುಲ್ಹಾದ್‌ಗಳನ್ನು ಬಳಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎಂದು ಅಧಿಕಾರಿಗಳಿಗೆ ಸಚಿವ ಧರಮ್ವೀರ್ ಪ್ರಜಾಪತಿ ಸೂಚಿಸಿದ್ದಾರೆ. ಸಚಿವರ ಈ ಆದೇಶಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: Shocking News: ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್!; ಅಧ್ಯಯನದಲ್ಲಿ ಮೊಟ್ಟ ಮೊದಲ ಬಾರಿಗೆ ಶಾಕಿಂಗ್ ವಿಚಾರ ಪತ್ತೆ
Omicron Variant: ಒಮಿಕ್ರಾನ್ ವೈರಸ್ ಪ್ಲಾಸ್ಟಿಕ್ ಮೇಲೆ 8 ದಿನ, ಚರ್ಮದ ಮೇಲೆ 21 ಗಂಟೆ ಜೀವಂತವಾಗಿರಬಲ್ಲದು!