AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಒಂದೇ ದಿನ 4,800 ರೂ. ಏರಿಕೆಯಾಗಿ ದಾಖಲೆ ಬರೆದ ಬೆಳ್ಳಿ ದರ; ಚಿನ್ನದ ಬೆಲೆಯೂ ಹೆಚ್ಚಳ

Silver Price Today: ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 4,800 ರೂ. ಏರಿಕೆ ಕಂಡಿದೆ. ಭಾರತದಲ್ಲಿ ಚಿನ್ನದ ದರ ಇಂದು 10 ಗ್ರಾಂ.ಗೆ 230 ರೂ. ಏರಿಕೆಯಾಗಿದೆ.

Gold Price Today: ಒಂದೇ ದಿನ 4,800 ರೂ. ಏರಿಕೆಯಾಗಿ ದಾಖಲೆ ಬರೆದ ಬೆಳ್ಳಿ ದರ; ಚಿನ್ನದ ಬೆಲೆಯೂ ಹೆಚ್ಚಳ
ಬೆಳ್ಳಿ ಬೆಲೆ
TV9 Web
| Edited By: |

Updated on: Apr 08, 2022 | 6:01 AM

Share

ಬೆಂಗಳೂರು: ಕಳೆದ 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Prices) ಇಂದು ಮತ್ತೆ ಏರಿಕೆಯತ್ತ ಸಾಗಿದೆ. ಭಾರತದಲ್ಲಿ ಚಿನ್ನದ ದರ (Gold Rate) ಇಂದು 10 ಗ್ರಾಂ.ಗೆ 230 ರೂ. ಏರಿಕೆಯಾಗಿದೆ. ಆದರೆ, ಬೆಳ್ಳಿಯ ಬೆಲೆ (Silver Price) ಇಂದು ದಾಖಲೆಯ ಏರಿಕೆ ಕಂಡಿದ್ದು, ಒಂದೇ ದಿನ 1 ಕೆಜಿಗೆ 4,800 ರೂ. ಹೆಚ್ಚಳವಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,800 ರೂ. ಇದ್ದುದು 48,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,140 ರೂ. ಇದ್ದುದು 52,370 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. 2 ದಿನಗಳ ಹಿಂದೆ ಚೆನ್ನೈ- 48,590 ರೂ. ಮುಂಬೈ- 48,000 ರೂ, ದೆಹಲಿ- 48,000 ರೂ, ಕೊಲ್ಕತ್ತಾ- 48,000 ರೂ, ಬೆಂಗಳೂರು- 48,000 ರೂ, ಹೈದರಾಬಾದ್- 48,000 ರೂ, ಕೇರಳ- 48,000 ರೂ, ಪುಣೆ- 48,100 ರೂ, ಮಂಗಳೂರು- 48,000 ರೂ, ಮೈಸೂರು- 48,000 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 53,010 ರೂ, ಮುಂಬೈ- 52,370 ರೂ, ದೆಹಲಿ- 52,370 ರೂ, ಕೊಲ್ಕತ್ತಾ- 52,370 ರೂ, ಬೆಂಗಳೂರು- 52,370 ರೂ, ಹೈದರಾಬಾದ್- 52,370 ರೂ, ಕೇರಳ- 52,370 ರೂ, ಪುಣೆ- 52,470 ರೂ, ಮಂಗಳೂರು- 52,370 ರೂ, ಮೈಸೂರು- 52,370 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಮಾತ್ರ ಕುಸಿತವಾಗುತ್ತಲೇ ಇದೆ.

ಇಂದಿನ ಬೆಳ್ಳಿಯ ದರ: ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 4,800 ರೂ. ಏರಿಕೆ ಕಂಡಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 66,200 ರೂ. ಇದ್ದುದು ಇಂದು 71,000 ರೂ.ಗೆ ಹೆಚ್ಚಳವಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 71,000 ರೂ, ಮೈಸೂರು- 71,000 ರೂ., ಮಂಗಳೂರು- 71,000 ರೂ., ಮುಂಬೈ- 71,000 ರೂ, ಚೆನ್ನೈ- 71,000 ರೂ, ದೆಹಲಿ- 66,300 ರೂ, ಹೈದರಾಬಾದ್- 71,000 ರೂ, ಕೊಲ್ಕತ್ತಾ- 66,300 ರೂ. ಆಗಿದೆ.

ಇದನ್ನೂ ಓದಿ: Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 6ನೇ ತಾರೀಕಿನ ಬುಧವಾರದ ಚಿನ್ನ, ಬೆಳ್ಳಿ ದರ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್