Shocking News: ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್!; ಅಧ್ಯಯನದಲ್ಲಿ ಮೊಟ್ಟ ಮೊದಲ ಬಾರಿಗೆ ಶಾಕಿಂಗ್ ವಿಚಾರ ಪತ್ತೆ

ಜನರು ದಿನವೂ ತಮ್ಮ ರಕ್ತದಲ್ಲಿ ಕಂಡುಬರುವಷ್ಟು ಪ್ಲಾಸ್ಟಿಕ್ ಅನ್ನು ಸೇವಿಸುತ್ತಾರೆ ಅಥವಾ ಉಸಿರಾಡುತ್ತಾರೆ ಎಂದು ಈ ಅಧ್ಯಯನದಿಂದ ದೃಢಪಟ್ಟಿದೆ. ಈ ಅಧ್ಯಯನದ ಆವಿಷ್ಕಾರಗಳು ಬಹಳ ಆತಂಕಕಾರಿಯಾಗಿದೆ.

Shocking News: ಮನುಷ್ಯನ ರಕ್ತದಲ್ಲಿ ಪ್ಲಾಸ್ಟಿಕ್!; ಅಧ್ಯಯನದಲ್ಲಿ ಮೊಟ್ಟ ಮೊದಲ ಬಾರಿಗೆ ಶಾಕಿಂಗ್ ವಿಚಾರ ಪತ್ತೆ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Mar 25, 2022 | 1:54 PM

ನವದೆಹಲಿ: ಆಘಾತಕಾರಿ ಹೊಸ ಅಧ್ಯಯನವೊಂದರಲ್ಲಿ ಮನುಷ್ಯನ ರಕ್ತದಲ್ಲಿ (Blood) ಪ್ಲಾಸ್ಟಿಕ್ ಕಣಗಳ ಅಂಶವಿರುವುದು ಬಹಿರಂಗವಾಗಿದೆ. ಅಧ್ಯಯನದ ಪ್ರಕಾರ, ಈ ಅಧ್ಯಯನಕ್ಕೆ ಒಳಗಾದವರಲ್ಲಿ ಶೇ. 77ರಷ್ಟು ಜನರ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು (microplastic particles) ಪತ್ತೆಯಾಗಿದೆ. ಡಚ್ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಮನುಷ್ಯನ ರಕ್ತದಲ್ಲಿ ಕಂಡುಬರುವ ಪ್ಲಾಸ್ಟಿಕ್‌ನ ಅತ್ಯಂತ ಪ್ರಚಲಿತ ರೂಪವೆಂದು ಕಂಡುಬಂದಿದೆ. PET ಅನ್ನು ಸಾಮಾನ್ಯವಾಗಿ ನೀರು, ಆಹಾರ ಮತ್ತು ಬಟ್ಟೆಗಳನ್ನು ಪ್ಯಾಕೇಜಿಂಗ್ ಮಾಡಲು ಬಳಸಲಾಗುತ್ತದೆ.

ಬ್ರಿಟಿಷ್ ದಿನಪತ್ರಿಕೆಯಾದ ‘ದಿ ಇಂಡಿಪೆಂಡೆಂಟ್‌’ನ ವರದಿಯ ಪ್ರಕಾರ, ಗಾಳಿ ಮತ್ತು ಆಹಾರ ಮತ್ತು ನೀರಿನ ಅಂಶದ ಮೂಲಕವೂ ಪ್ಲಾಸ್ಟಿಕ್ ಮಾನವ ದೇಹವನ್ನು ಪ್ರವೇಶಿಸಬಹುದು ಎಂದು ಅಧ್ಯಯನದ ಲೇಖಕರು ತೀರ್ಮಾನಿಸಿದ್ದಾರೆ. ಈ ಅಧ್ಯಯನದ ಆವಿಷ್ಕಾರಗಳು ಬಹಳ ಆತಂಕಕಾರಿಯಾಗಿದೆ. ಏಕೆಂದರೆ ಜನರು ದಿನವೂ ತಮ್ಮ ರಕ್ತದಲ್ಲಿ ಕಂಡುಬರುವಷ್ಟು ಪ್ಲಾಸ್ಟಿಕ್ ಅನ್ನು ಸೇವಿಸುತ್ತಾರೆ ಅಥವಾ ಉಸಿರಾಡುತ್ತಾರೆ ಎಂದು ಈ ಅಧ್ಯಯನದಿಂದ ದೃಢಪಟ್ಟಿದೆ ಎಂದು ನೆದರ್ಲ್ಯಾಂಡ್​ನ ವ್ರಿಜೆ ಯೂನಿವರ್ಸಿಟಿ ಆಂಸ್ಟರ್‌ಡ್ಯಾಮ್‌ನ ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಿಕ್ ವೆಥಾಕ್ ಉಲ್ಲೇಖಿಸಿದ್ದಾರೆ.

ಮನುಷ್ಯರ ದೇಹದಲ್ಲಿನ ಈ ಪ್ಲಾಸ್ಟಿಕ್ ಕಣಗಳು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು ಎಂಬುದು ಕೂಡ ಅಧ್ಯಯನದಲ್ಲಿ ಬಯಲಾಗಿದೆ. ಅಧ್ಯಯನಕ್ಕಾಗಿ 5 ಬಗೆಯ ಪ್ಲಾಸ್ಟಿಕ್‌ಗಳ ಪರೀಕ್ಷೆ ಮಾಡಲಾಗಿದೆ. 22 ಜನರ ರಕ್ತದ ಮಾದರಿಗಳನ್ನು ಐದು ರೀತಿಯ ಪ್ಲಾಸ್ಟಿಕ್‌ಗಳಾದ ಪಾಲಿಪ್ರೊಪಿಲೀನ್, ಪಾಲಿಸ್ಟೈರೀನ್, ಪಾಲಿಮಿಥೈಲ್ ಮೆಥಾಕ್ರಿಲೇಟ್, ಪಾಲಿಥಿಲೀನ್ ಮತ್ತು ಪಾಲಿಥಿಲೀನ್ ಟೆರೆಫ್ತಾಲೇಟ್ (ಪಿಇಟಿ) ಪರೀಕ್ಷೆಗೆ ಬಳಸಿಕೊಳ್ಳಲಾಗಿತ್ತು.

22 ರಕ್ತದಾನಿಗಳಲ್ಲಿ 17 ಮಂದಿ ತಮ್ಮ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದೆ. ಇದು ಸಂಶೋಧಕರನ್ನು ಆಘಾತಗೊಳಿಸಿದೆ. PET ನಂತರ ಮಾನವನ ರಕ್ತದ ಮಾದರಿಗಳಲ್ಲಿ ಪಾಲಿಸ್ಟೈರೀನ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಎರಡನೇ ವಿಧದ ಪ್ಲಾಸ್ಟಿಕ್ ಆಗಿದೆ. ಈ ರೀತಿಯ ಪ್ಲಾಸ್ಟಿಕ್ ಅನ್ನು ವಿವಿಧ ರೀತಿಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ವಿಜ್ಞಾನಿಗಳು ರಕ್ತದಲ್ಲಿ ಕಂಡುಕೊಂಡ ಮೂರನೇ ರೀತಿಯ ಪ್ಲಾಸ್ಟಿಕ್ ಪಾಲಿಥಿಲೀನ್. ಇದನ್ನು ಪ್ಲಾಸ್ಟಿಕ್ ಕ್ಯಾರಿಯರ್ ಬ್ಯಾಗ್‌ಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ.

ಅಧ್ಯಯನದ ಪ್ರಕಾರ, ಶೇ. 50ರಷ್ಟು ಜನರ ರಕ್ತದಲ್ಲಿ ಪಾಲಿಥಿಲೀನ್ ಟೆರೆಫ್ತಾಲೇಟ್ ಕಂಡುಬಂದಿದೆ. ಆದರೆ, ಪಾಲಿಸ್ಟೈರೀನ್ ಶೇ. 36ರಷ್ಟು ಜನರ ರಕ್ತದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

ರಕ್ತ ಮತ್ತು ಕಣ್ಣೀರಿನ ನದಿಗಳು ಹರಿಯುತ್ತಿವೆ: ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ರಷ್ಯಾಕ್ಕೆ ಕರೆ ನೀಡಿದ ಪೋಪ್ ಫ್ರಾನ್ಸಿಸ್

Published On - 1:53 pm, Fri, 25 March 22