3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಪಾತಕಿ ಸ್ವಂತ ದೊಡ್ಡಪ್ಪ! ದುರಂತವೆಂದರೆ ಪೈಶಾಚಿಕ ಕೃತ್ಯವೆಸಗಿ, ಅಪಘಾತ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದ. ಜೊತೆಗೆ, 31 ವರ್ಷದ ಆರೋಪಿ ಫುಡ್ ಪಾಯ್ಸನ್ ಆಗಿತ್ತು, ಆ್ಯಕ್ಸಿಡೆಂಟ್​ ಎಂದೂ ಕಿರಾತಕ ಆರೋಪಿ ಬಡಬಡಿಸಿದ್ದ.

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು
ಸಾಂಕೇತಿಕ ಚಿತ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 24, 2022 | 3:51 PM

ಬೆಂಗಳೂರು: ಮೂರು ವರ್ಷದ ಬಾಲಕಿಯ ಮೇಲೆ ಮೃಗೀಯವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿಯೊಬ್ಬನನ್ನು ಆನೇಕಲ್ ತಾಲೂಕಿನ (anekal) ಅತ್ತಿಬೆಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮಧ್ಯೆ, ಲೈಂಗಿಕ ದೌರ್ಜನ್ಯಕ್ಕೆ (physical harassement) ನಲುಗಿ ರಕ್ತಸ್ರಾವದಿಂದ (bleeding) ಮಗು ಮೃತಪಟ್ಟಿದೆ. ಗುಪ್ತಾಂಗ ರಕ್ತ ಸ್ರಾವದಿಂದ ನರಳಿದ್ದ ಬಾಲಕಿ ನೋವು ತಾಳಲಾರದೇ ರಕ್ತಸ್ರಾವವಾಗಿ ಅತ್ತಿಬೆಲೆಯ ನೆರಳೂರಿನಲ್ಲಿ ಮೃತಪಟ್ಟಿದ್ದಳು.

ದುರಂತವೆಂದರೆ ಪೈಶಾಚಿಕ ಕೃತ್ಯವೆಸಗಿ, ಅಪಘಾತ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದ. ಜೊತೆಗೆ, 31 ವರ್ಷದ ಆರೋಪಿ ಫುಡ್ ಪಾಯ್ಸನ್ ಆಗಿತ್ತು, ಆ್ಯಕ್ಸಿಡೆಂಟ್​ ಎಂದೂ ಕಿರಾತಕ ಆರೋಪಿ ಬಡಬಡಿಸಿದ್ದ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿತ್ತು. 3 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಪಾತಕಿ ಸ್ವಂತ ದೊಡ್ಡಪ್ಪ! ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಪೋಸ್ಕೊ ಕಾಯ್ದೆಯಡಿ ಪ್ರಕರಣ‌ ದಾಖಲಾಗಿದೆ.

ತಾಯಿ ತೀರಿಕೊಂಡ ಕೆಲವೇ ಗಂಟೆಗಳಲ್ಲಿ ಮಗನಿಗೆ ಹೃದಯಾಘಾತ -ಸಾವು ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿಯಲ್ಲಿ ವಯೋಸಹಜ ಕಾಯಿಲೆಯಿಂದ ತಾಯಿ ನಾಗಮ್ಮ(93) ನಿನ್ನೆ ಬುಧವಾರ ಸಾವನ್ನಪ್ಪಿದರು. ಆದರೆ ತಾಯಿ ಸಾವಿನ ಕೆಲವೇ ಕ್ಷಣಗಳಲ್ಲಿ ಮಗ ಕರಿಯಪ್ಪ(48) ಅವರೂ ಸಹ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಸಂಜೆ 93 ವರ್ಷದ ನಾಗಮ್ಮ ಅವರು ವಯೋ ಸಹಜ ಕಾಯಿಲೆಯಿಂದ ಮೃತಪಟ್ಟರು. ನಾಗಮ್ಮನ ಸಾವಿನ ಹಿನ್ನೆಲೆ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಭಜನೆ ಮಾಡುತ್ತಾ ಮಾಡುತ್ತಾ ನಾಗಮ್ಮನ ಮಗ ಕರಿಯಪ್ಪ ಹೃದಯಾಘಾತದಿಂದ ನಿಧನರಾದರು. ಇಬ್ಬರನ್ನೂ ಸ್ಮಶಾನದಲ್ಲಿ ಅಕ್ಕಪಕ್ಕದಲ್ಲೇ ಅಂತ್ಯಸಂಸ್ಕಾರ ಮಾಡಲಾಯಿತು.

ದುರಸ್ಥಿ ವೇಳೆ ಅವಘಡ, ವಿದ್ಯುತ್ ತಗುಲಿ ಲೈನ್​ಮ್ಯಾನ್ ಸಾವು: ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್ ಅಜೀತ್ ಮನಗೂಳಿ ಮೃತಪಟ್ಟಿದ್ದಾರೆ. ವಿದ್ಯುತ್ ಲೈನ್ ದುರಸ್ಥಿ ವೇಳೆ ಅವಘಡ ಸಂಭವಿಸಿದೆ. ಅಜೀತ್ ಮನಗೂಳಿ ಮೂಲತಃ ನಿಡಗುಂದಿ ತಾಲೂಕಿನ ಆರ್ ಎಸ್ ಬೇನಾಳ ಗ್ರಾಮದ‌ವರು. ಮನಗೂಳಿ ಗ್ರಾಮದಲ್ಲಿ ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Also Read: Sri Vishnu Sahasranama Stotram: ಶ್ರೀ ವಿಷ್ಣು ಸಹಸ್ರನಾಮ ಸ್ತುತಿಸುವುದರ ಫಲಶ್ರುತಿ ಮತ್ತು ಅದರ ಮಹತ್ವ ಹೀಗಿದೆ

Also Read: ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?

Published On - 3:15 pm, Thu, 24 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ