Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?

ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ (Spiritual). ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ. ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ

ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?
ನೆಲದ ಮೇಲೆ ಕುಳಿತು ಊಟ ಮಾಡುವುದು ಸಂಪ್ರದಾಯವಷ್ಟೇ ಅಲ್ಲ, ಅದು ಯೋಗ ಸಾಧನೆಯ ಒಂದು ಆಸನ! ಹೇಗೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 24, 2022 | 6:06 AM

ಸನಾತನ ಧರ್ಮದಲ್ಲಿ ಅನೇಕ ವೈಜ್ಞಾನಿಕ ಸತ್ಯಗಳು ಅಡಗಿವೆ (Science). ಉದಾಹರಣೆಗೆ ಭಾರತೀಯ ಮಹಿಳೆಯರು ಬಳೆಗಳನ್ನು ಏಕೆ ಧರಿಸುತ್ತಾರೆ ಅಂದರೆ ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ (Spiritual). ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ. ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ (Why we sit on floor and eat?) 

  1. ವಿವಾಹಿತ ಹೆಣ್ಣುಮಕ್ಕಳು ಏಕೆ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ: ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಕಾಲುಂಗುರದಲ್ಲಿರುವ ನರವು ನೇರವಾಗಿ ಗರ್ಭಾಶಯ ಮತ್ತು ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಾಶಯವು ಸದೃಢಗೊಳ್ಳುತ್ತದೆ. ಇದರಿಂದ ಗರ್ಭಕೋಶಕ್ಕೆ ನಿರಂತರವಾಗಿ ರಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದುಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ!
  2. ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ: ಸನಾತನ ಧರ್ಮವು “ತುಳಸಿ” ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ಪವಿತ್ರ ತುಳಸಿ ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲಿಯೂ ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
  3. ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ: ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ ( ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ). ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ). ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು ಹೆಚ್ಚಿಸುತ್ತದೆ ಮತ್ತು ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಎರಡು ಮನಸ್ಸು, ಹೃದಯಗಳನ್ನು ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತಲಾಘವ ಮಾಡುವ ಮೂಲಕ ಹಾಗು ಅಪ್ಪಿಕೊಳ್ಳುವ ಮೂಲಕ ಸಹ ಮಾಡಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ. ಯಾವಾಗ ನೀವು ನಿಮ್ಮ ಕೈಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ ಧಾರಕಗಳಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ.
  4. ನೆಲದ ಮೇಲೆ ಕುಳಿತು ಊಟ ಮಾಡುವುದು: ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ. ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸುಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.
  5. ಹಣೆಗೆ ತಿಲಕ ಹಚ್ಚುವ ಕ್ರಮ: ಪುರಾತನ ಕಾಲದಿಂದಲೂ ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರ ಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶಕ್ತಿಯು ಪೋಲಾಗುವುದುನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು ಕುಂಕುಮವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.
  6. ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ: ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆಯನ್ನು ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಗಾಗಿಯಾದರೂ ಕಿವಿಯೋಲೆ ಧರಿಸುತ್ತಾರೆ!
  7. ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ: ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ. ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ. (ಸದ್ವಿಚಾರ ಸಂಗ್ರಹ)

ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ಪುನೀತ್ ತರಹೇವಾರಿ ಅಭಿಮಾನಿಗಳು, ಆದರೆ ಇಂಥ ಅಭಿಮಾನಿ ಪ್ರಾಯಶಃ ಕಾಣಸಿಗರು!
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು
ನಟನ ಹೆಸರಲ್ಲಿ ಅನ್ನದಾನ ಕಾರ್ಯಕ್ರಮ ಏರ್ಪಡಿಸಿರುವ ಬೀದಿಬದಿ ವ್ಯಾಪಾರಿಗಳು