Noble thought of Autophagy: ನಾವೇಕೆ ಉಪವಾಸ ಮಾಡಬೇಕು? ನಮಸ್ಕಾರ ಮುದ್ರೆ ಅಂದರೇನು?

ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವ ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ಚಕ್ರವಾಗಿರುತ್ತದೆ.

Noble thought of Autophagy: ನಾವೇಕೆ ಉಪವಾಸ ಮಾಡಬೇಕು? ನಮಸ್ಕಾರ ಮುದ್ರೆ ಅಂದರೇನು?
ನಾವೇಕೆ ಉಪವಾಸ ಮಾಡಬೇಕು? ನಮಸ್ಕಾರ ಮುದ್ರೆ ಅಂದರೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 25, 2022 | 6:06 AM

ಸನಾತನ ಧರ್ಮದಲ್ಲಿ (Sanatana Dharma) ಅನೇಕ ವೈಜ್ಞಾನಿಕ ಸತ್ಯಗಳು ಅಡಗಿವೆ. ಉದಾಹರಣೆಗೆ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು… ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದ ನಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹ ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿದೂ ನಡೆದುಕೊಂಡು ಬಂದಿದೆ (Spiritual).

  1. ದೇವಾಲಯಗಳಲ್ಲಿ ಘಂಟೆಗಳು ಏಕೆ ಇರುತ್ತವೆ: ಜನರು ದೇವಾಲಯಗಳಿಗೆ ಭೇಟಿ ನೀಡಿದಾಗ ಗರ್ಭಗುಡಿಯನ್ನು ಪ್ರವೇಶಿಸುವ ಮೊದಲು ಘಂಟೆಯನ್ನು ಬಾರಿಸುತ್ತಾರೆ. ಕಾರಣವೇನೆಂದರೆ ಶಾಸ್ತ್ರದ ಪ್ರಕಾರ ಘಂಟೆಯ ಸದ್ದು ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆಯಂತೆ. ಜೊತೆಗೆ ಇದು ದೇವರಿಗೆ ಅಪ್ಯಾಯಮಾನಕರವಾದ ಸದ್ದಾಗಿರುತ್ತದೆ. ವೈಜ್ಞಾನಿಕವಾಗಿ ಇದನ್ನು ವಿವರಿಸಬೇಕೆಂದರೆ ಇದು ನಮ್ಮ ಏಕಾಗ್ರತೆಯನ್ನು ದೇವರ ಕ್ರಿಯೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ಈ ಘಂಟೆಯನ್ನು ಯಾವ ಪ್ರಕಾರ ಮಾಡಿರುತ್ತಾರೆ ಎಂದರೆ ಇದು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗಿಸುತ್ತದೆಯಂತೆ. ನಾವು ಯಾವಾಗ ಘಂಟೆಯನ್ನು ಹೊಡೆಯುತ್ತೇವೆಯೋ, ಆಗ ಅದು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿ ಧ್ವನಿಸುತ್ತದೆ.
  2. ಗಂಡಸರ ತಲೆಯ ಮೇಲೆ ಶಿಖೆ: ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು ಅಧಿಪತಿ ಮರ್ಮ ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವ ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಠವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.
  3.  ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ: ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎನ್ನುತ್ತಾರೆ ಅಧ್ಯಯನಕಾರರು. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಈ ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತಾ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.
  4.  ಸೂರ್ಯ ನಮಸ್ಕಾರ: ಹಿಂದೂಗಳು ಸೂರ್ಯ ದೇವನಿಗೆ ನಮಸ್ಕಾರ ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲೂ ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.
  5.  ನಾವೇಕೆ ಉಪವಾಸವಿರುತ್ತೇವೆ: ಉಪವಾಸದ ಹಿಂದಿನ ತತ್ತ್ವವು ಆಯುರ್ವೇದದಲ್ಲಿ ಅಡಗಿದೆ: ಪ್ರಾಚೀನ ವೈದ್ಯ ವಿಜ್ಞಾನವು ಹಲವಾರು ಕಾಯಿಲೆಗಳಿಗೆ ಮೂಲ ಕಾರಣವು ನಮ್ಮ ಜೀರ್ಣಾಂಗ ವ್ಯೂಹದಲ್ಲಿ ಬಿಡುಗಡೆಯಾಗುವ ಟಾಕ್ಸಿಕ್ ಪದಾರ್ಥಗಳೇ ಆಗಿರುತ್ತದೆ ಎಂದು ಹೇಳುತ್ತದೆ. ಈ ಟಾಕ್ಸಿಕ್ ಪದಾರ್ಥಗಳನ್ನು ನಿರಂತರವಾಗಿ ಸ್ವಚ್ಛ ಮಾಡುತ್ತ ಇರುವುದರಿಂದ ನಾವು ಆರೋಗ್ಯವಾಗಿರಬಹುದು. ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯೂಹಕ್ಕೆ ಸ್ವಲ್ಪ ವಿಶ್ರಾಂತಿಯು ದೊರೆಯುತ್ತದೆ ಮತ್ತು ದೇಹದಲ್ಲಿರುವ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತವೆ. ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಈ ಅವಧಿಯಲ್ಲಿ ನಿಯಮಿತವಾಗಿ ಲಿಂಬೆ ರಸವನ್ನು ಸೇವಿಸುವುದರಿಂದ ದೇಹದಲ್ಲಿ ವಾಯು ತುಂಬಿಕೊಳ್ಳುವ ಸಮಸ್ಯೆಯು ತಲೆದೋರುವುದಿಲ್ಲ. ಆಯುರ್ವೇದದಲ್ಲಿ ಹೇಳಿರುವಂತೆ ನಮ್ಮ ದೇಹದ್ಲಲಿ ಶೇ. 80 ರಷ್ಟು ನೀರು ಮತ್ತು ಶೇ. 20% ರಷ್ಟು ಘನ ಪದಾರ್ಥಗಳು ಇರುತ್ತವೆ. ಭೂಮಿಯ ಮೇಲೆ ಪರಿಣಾಮ ಬೀರಿದಂತೆ ಚಂದ್ರನು ನಮ್ಮ ದೇಹದಲ್ಲಿನ ನೀರಿನಂಶದ ಮೇಲೆ ಪ್ರಭಾವ ಬೀರುತ್ತಾನೆ. ಆಗ ಜನರು ಉದ್ವೇಗ, ಕಿರಿಕಿರಿ ಮತ್ತು ಹಿಂಸಾ ಪ್ರವೃತ್ತಿಗೆ ಇಳಿಯುತ್ತಾರೆ. ಈ ಸಮಸ್ಯೆಗೆ ಉಪವಾಸವು ಪ್ರತಿ ವಿಷದಂತೆ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದು ನಮ್ಮ ದೇಹದಲ್ಲಿನ ಆಮ್ಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಜನರು ತಮ್ಮ ವಿವೇಕವನ್ನು ಉಳಿಸಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಕ್ಯಾನ್ಸರ್, ಹೃದ್ರೋಗ, ಮಧುಮೇಹ, ರೋಗ ನಿರೋಧಕ ಶಕ್ತಿಯಲ್ಲಿನ ನ್ಯೂನತೆಗಳು ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ.
  6.  ನಮಸ್ಕಾರ ಮಾಡಲು ಎರಡು ಅಂಗೈಗಳನ್ನು ಜೋಡಿಸುವುದು: ಹಿಂದೂ ಸಂಪ್ರದಾಯದಲ್ಲಿ ಅತಿಥಿಗಳನ್ನು ಅಥವಾ ಹಿರಿಯರನ್ನು ಕಂಡಾಗ ಅವರನ್ನು ಸ್ವಾಗತಿಸಲು ನಮಸ್ಕಾರ ಮುದ್ರೆ ಎಂದರೆ ಎರಡೂ ಅಂಗೈಗಳನ್ನು ಜೋಡಿಸುವ ಕ್ರಿಯೆಯನ್ನು ಮಾಡಲಾಗುತ್ತದೆ. ಇನ್ನು ಇದರ ಹಿಂದಿನ ವೈಜ್ಞಾನಿಕ ಸತ್ಯಾಂಶವನ್ನು ನೋಡುವುದಾದರೆ, ನಮಗೆ ತಿಳಿದು ಬರುವುದು ಇಷ್ಟು… ಎರಡೂ ಅಂಗೈಗಳನ್ನು ಪರಸ್ಪರ ಜೋಡಿಸುವುದರಿಂದ ಹತ್ತು ಬೆರಳುಗಳು ಪರಸ್ಪರ ಕೂಡುತ್ತವೆ. ಆಗ ಕಣ್ಣು, ಕಿವಿ ಮತ್ತು ಮನಸ್ಸಿನ ಒತ್ತಡ ಕೇಂದ್ರಗಳು ಒಂದನ್ನೊಂದು ತಾಕುತ್ತವೆ. ಇದರಿಂದ ನಮಗೆ ಪರಿಚಯವಾಗುವ ವ್ಯಕ್ತಿಯ ಹೆಸರನ್ನು ದೀರ್ಘಕಾಲ ನಾವು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಾವು ದೈಹಿಕವಾಗಿ ಆ ವ್ಯಕ್ತಿಯನ್ನು ಸ್ಪರ್ಶಿಸಲು ಹೋಗದ ಕಾರಣ, ಯಾವುದೇ ಕೀಟಾಣುಗಳು ಸಹ ನಮ್ಮ ಸಂಪರ್ಕಕ್ಕೆ ಬರುವುದಿಲ್ಲ.
  7.  ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು: ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದ ನಮಗೆ ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹ ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿದೂ ನಡೆದುಕೊಂಡು ಬಂದಿದೆ. (ಸದ್ವಿಚಾರ ಸಂಗ್ರಹ)

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?