ನಮ್ಮ ಆರ್​ಎಸ್​ಎಸ್​ ಎಂದು ನೀವು ಹೇಗೆ ಹೇಳಲು ಸಾಧ್ಯ: ಸ್ಪೀಕರ್ ಮಾತಿಗೆ ಕಾಂಗ್ರೆಸ್ ಗರಂ

ನಗಾಡುತ್ತಾ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇದೇನ್ರೀ ನೀವು, ನಮ್ಮ ಆರ್​ಎಸ್​ಎಸ್​ ಬಗ್ಗೆ ಹೀಗೆಲ್ಲಾ ಹೇಳಬಹುದೇ’ ಎಂದು ಪ್ರಶ್ನಿಸಿದರು.

ನಮ್ಮ ಆರ್​ಎಸ್​ಎಸ್​ ಎಂದು ನೀವು ಹೇಗೆ ಹೇಳಲು ಸಾಧ್ಯ: ಸ್ಪೀಕರ್ ಮಾತಿಗೆ ಕಾಂಗ್ರೆಸ್ ಗರಂ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 24, 2022 | 2:40 PM

ಬೆಂಗಳೂರು: ಕರ್ನಾಟಕದ ಕಾನೂನು ಸುವ್ಯವಸ್ಥೆ ವಿಚಾರವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವಿಧಾನಸಭೆಯಲ್ಲಿ ಸುದೀರ್ಘ ಭಾಷಣ ಮಾಡಿದರು. ಭಾಷಣದ ಮಧ್ಯೆ ವೈಯಕ್ತಿಕ ಸಂಬಂಧಗಳ ಬಗ್ಗೆ ಪ್ರಸ್ತಾಪಿಸಿದರ ಅವರು, ‘ಕಂದಾಯ ಸಚಿವ ಅರ್.ಅಶೋಕ್ ಜೊತೆಗೆ ನನ್ನ ಸಂಬಂಧ ಚೆನ್ನಾಗಿದೆ. ಮೊದಲಿಗೆ ನಾವು ಮನುಷ್ಯರು. ನಂತರ ಉಳಿದದ್ದು. ಆರ್​ಎಸ್​ಎಸ್​ ಇನ್ನೊಂದು ಮತ್ತೊಂದು’ ಎಂದು ಹೇಳಿದರು.

ಈ ಮಾತಿಗೆ ನಗಾಡುತ್ತಾ ಪ್ರತಿಕ್ರಿಯಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಇದೇನ್ರೀ ನೀವು, ನಮ್ಮ ಆರ್​ಎಸ್​ಎಸ್​ ಬಗ್ಗೆ ಹೀಗೆಲ್ಲಾ ಹೇಳಬಹುದೇ’ ಎಂದು ಪ್ರಶ್ನಿಸಿದರು. ಕಂದಾಯ ಸಚಿವ ಆರ್.ಅಶೋಕ್ ಸಹ ದನಿಗೂಡಿಸಿ, ‘ಮುಂದೊಂದು ದಿನ ಎಲ್ಲರೂ ನಮ್ಮ ಆರ್​ಎಸ್​ಎಸ್​ ಎಂದು ಹೇಳುವ ಕಾಲ ಬರಲಿದೆ’ ಎಂದರು. ಹಗುರವಾಗಿ, ತಮಾಷೆಯಾಗಿ ಆರಂಭವಾದ ಮಾತು ಇದ್ದಕ್ಕಿದ್ದಂತೆ ಬಿರುಸಾಯಿತು.

‘ಅಧ್ಯಕ್ಷರ ಪೀಠದಲ್ಲಿದ್ದು ನೀವು ಇಂಥ ಮಾತು ಆಡಬಹುದೇ? ನಮ್ಮ ಆರ್​ಎಸ್​ಎಸ್​ ಎನ್ನಬಹುದೇ’ ಎಂದು ಶಾಸಕ ಜಮೀರ್ ಅಹಮದ್ ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ಏಕವಚನದಲ್ಲಿ ಜಮೀರ್ ಅವರನ್ನು ನಿಂದಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ‘ಸಮಾಜದ ಸ್ವಾಸ್ಥ್ಯ ಕದಡುವ ಯಾವುದೇ ಪದಬಳಕೆಯನ್ನು ಕಡತದಲ್ಲಿ ಉಳಿಸುವುದಿಲ್ಲ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸುವುದರಿಂದ ಪರಿಸ್ಥಿತಿ ತಿಳಿಯಾಯಿತು.

ಈ ಹಂತದಲ್ಲಿ ಮಾತಿಗೆ ನಿಂತ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ಆರ್​ಎಸ್​ಎಸ್​ ವಿರುದ್ಧ ಹರಿಹಾಯ್ದರು. ‘ಹಲವು ಪ್ರತಿಭಟನೆಗಳ ವೇಳೆ ಆರ್​ಎಸ್​ಎಸ್​ನವರು ಸಂವಿಧಾನಕ್ಕೆ ಗೌರವ ಕೊಟ್ಟಿಲ್ಲ’ ಎಂದ ಅವರ ಮಾತಿಗೆ ಸ್ಪೀಕರ್ ಕಾಗೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಹಾಗೆಲ್ಲಾ ಏನೇನಾರ ಹೇಳಬಾರದು ಪ್ರಿಯಾಂಕ್. ಈ ವಿಷಯ ಇಲ್ಲಿಗೆ ನಿಲ್ಲಿಸೋಣ’ ಎಂದು ಸದನವನ್ನು ಮುಂದೂಡಿದರು.

ಸಂವಾದ ಹೀಗೆ ನಡೆಯಿತು

ಸಿದ್ಧರಾಮಯ್ಯ: ಅಶೋಕನ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ, ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್, ಮತ್ತೆ ಬಿಜೆಪಿ ಆರ್ ಎಸ್ ಎಸ್, ಕಾಂಗ್ರೆಸ್ ಎಲ್ಲಾ

ಅಶೋಕ್: ಮತ್ತೆ ಆರ್ ಎಸ್ ಎಸ್ ಗೇ ಹೋಗ್ತೀರಲ್ಲಾ ಸಾರ್

ಸ್ಪೀಕರ್: ನೀವು ಯಾಕೆ ನಮ್ಮ ಆರ್ ಎಸ್ ಎಸ್ ಬಗ್ಗೆ ಅಷ್ಟು ಬೇಸರ ಮಾಡ್ಕೊಳ್ತೀರಿ?

ಸಿದ್ದರಾಮಯ್ಯ: ಬೇಸರನೇ ಮಾಡ್ಕೊಂಡಿಲ್ಲಾ, ಆರ್ ಎಸ್ ಎಸ್ ಅನ್ನೋದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ?

ಸ್ಪೀಕರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ

ಜಮೀರ್ ಅಹಮದ್: ಪೀಠ ಮೇಲೆ ಕೂತ್ಕೊಂಡು ನಮ್ಮ ಆರ್ ಎಸ್ ಎಸ್ ಅಂತೀರಾ ತಾವು?

ಸ್ಪೀಕರ್: ಇನ್ನೇನು ಮತ್ತೆ? ನಮ್ಮ ಅರ್ ಎಸ್ ಎಸ್ಸೆ! ಆರ್ ಎಸ್ ಎಸ್ ನಮ್ದೇ ರೀ

ಆರಗ ಜ್ಞಾನೇಂದ್ರ: ಅವರು ಸುಳ್ಳು ಹೇಳೋದು ಹೇಗೆ ಜಮೀರ್?

ಸ್ಪೀಕರ್: ಜಮೀರ್ ಒಂದು ಮಾತು ಹೇಳ್ತೀನಿ, ಇವತ್ತಲ್ಲಾ ನಾಳೆ ನಮ್ಮ ದೇಶದಲ್ಲಿ ನೀವೂ ಸಹ ನಮ್ಮ ಆರ್ ಎಸ್ ಎಸ್ ಅಂತಾ ಹೇಳಬೇಕಾಗುತ್ತದೆ ಖಂಡಿತವಾಗಿ ಹೇಳಬೇಕಾಗುತ್ತದೆ

ಸಿದ್ದರಾಮಯ್ಯ: ಜಮೀರ್ ಹೋಗಲಿ, ನಾನೇ ತೀರ್ಮಾನಕ್ಕೆ ಬಂದಿದ್ದೇನೆ, ಆರ್ ಎಸ್ ಎಸ್ ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ, ಅದಕ್ಕೆ ವಿರೋಧ ಮಾಡುತ್ತೇವೆ

ಅಶೋಕ್: ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ, ಈಗ ಸರ್ವ ವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್ ಎಸ್ ಎಸ್, ಪ್ರಧಾನಿ ಆರ್ ಎಸ್ ಎಸ್, ಉಪ ರಾಷ್ಟ್ರಪತಿ ಆರ್ ಎಸ್ ಎಸ್, ಮುಖ್ಯಮಂತ್ರಿಗಳು ಆರ್ ಎಸ್ ಎಸ್, ಒಪ್ಪಿಕೊಳ್ಳಲೇ ಬೇಕು ಈಗ

ರಾಮಲಿಂಗಾರೆಡ್ಡಿ: ದುರದೃಷ್ಟ ಇದು

ಅಶೋಕ್: ದುರಾದೃಷ್ಟ ಅಲ್ಲ ಇದು, ಅದೃಷ್ಟ

ಜಮೀರ್: ಅಶೋಕ್ ಅವರೇ ನೀವು ಬಿಜೆಪಿ ಪಕ್ಷ ಅಂತಾ ಯಾಕೆ ಹೇಳ್ತೀರಾ, ಆರ್ ಎಸ್ ಎಸ್ ಪಕ್ಷ ಅಂತಾ ಹೇಳಿ, ಬಿಜೆಪಿ ತೆಗೆದು ಬಿಡಿ

ಈಶ್ವರಪ್ಪ: ಈ ದೇಶದ ಎಲ್ಲಾ ಮುಸಲ್ಮಾನರು, ಎಲ್ಲಾ ಕ್ರಿಶ್ಚಿಯನ್ನರು ಇವತ್ತಲ್ಲಾ ನಾಳೆ ಆರ್ ಎಸ್ ಎಸ್ ಆಗ್ತಾರೆ ಯಾವ ಅನುಮಾನವೂ ಇಲ್ಲ

ಕೆ.ಜೆ. ಜಾರ್ಜ್: ಅದು ಆಗುವುದಿಲ್ಲ, ಸಾಧ್ಯವೇ ಇಲ್ಲ, ನೀವೇ ಇರೋದಿಲ್ಲ

ಈಶ್ವರಪ್ಪ: ನಾನು ಆರ್ ಎಸ್ ಎಸ್ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ ಅಂತಾ ನೀವೇ ಹೇಳ್ತೀರಾ

ಪ್ರಿಯಾಂಕ್ ಖರ್ಗೆ: ಇದೇ ಪೀಠದಲ್ಲಿ ಕುಳಿತು ಸಂವಿಧಾನದ ಬಗ್ಗೆ ಉತ್ತಮ ಚರ್ಚೆ ಮಾಡಿದ್ದೇವೆ ಎಂದು ನೀವೇ ಹೇಳಿದ್ದೀರಿ, ಅಂದು ಪೀಠದಲ್ಲಿ ಕುಳಿತು ಸಂವಿಧಾನ ಪರವಾಗಿ ಇದ್ದೀರಿ ಅಂತಾ ಹೇಳಿದ್ದೀರಿ, ಈಗ ಅದೇ ಪೀಠದಲ್ಲಿ ಕುಳಿತು ನೀವು ಸಂವಿಧಾನದ ಪರವಾಗಿ ಇದ್ದೀರಿ ಅಂತಾ ಹೇಳ್ತಿದ್ದೀರಿ, ಇದೇ ಆರ್ ಎಸ್ ಎಸ್ ನವರು ರಾಮಲೀಲಾ ಮೈದಾನದಲ್ಲಿ ನೂರೈವತ್ತು ಬಾರಿ ಪ್ರತಿಭಟನೆ ಮಾಡಿ ಸಂವಿಧಾನ ಸುಟ್ಟಿದ್ದಾರೆ

ಸ್ಪೀಕರ್: ಹೇ ಎಲ್ಲೆಲ್ಲೋ ಹೋಗ್ತಿದ್ದೀರಿ ಪ್ರಿಯಾಂಕ್, ಸುಮ್ ಸುಮ್ಮನೇ ಏನೇನೋ ಮಾತಾಡಬಾರದು, ಸರಿಯಲ್ಲ ಇದು, ನಿಮ್ಮ ರಾಜಕೀಯ ಇದ್ದರೆ ಹೊರಗೆ ಮಾತಾಡಿ.

ಇದನ್ನೂ ಓದಿ: ‘ಹೌದು ನಾನು ಆರ್​ಎಸ್​ಎಸ್​, ನೀವ್ಯಾರು?’ ಕಾಂಗ್ರೆಸ್​ ಶಾಸಕರಿಗೆ ಸದನದಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

ಇದನ್ನೂ ಓದಿ: ಇನ್ನಾದರೂ ಪುಸ್ತಕ ತೆರೆದು ಓದಲಿ; ಅನಗತ್ಯವಾಗಿ ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು ಸರಿಯಲ್ಲ: ಡಿಕೆ ಸುರೇಶ್ ಟ್ವೀಟ್​ಗೆ ಬಿಸಿ ನಾಗೇಶ್ ಪ್ರತಿಕ್ರಿಯೆ

Published On - 2:03 pm, Thu, 24 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್