AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನಾದರೂ ಪುಸ್ತಕ ತೆರೆದು ಓದಲಿ; ಅನಗತ್ಯವಾಗಿ ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು ಸರಿಯಲ್ಲ: ಡಿಕೆ ಸುರೇಶ್ ಟ್ವೀಟ್​ಗೆ ಬಿಸಿ ನಾಗೇಶ್ ಪ್ರತಿಕ್ರಿಯೆ

ಅನಗತ್ಯವಾಗಿ ಶ್ರೇಷ್ಠ ಸಂಸ್ಥೆ, ಕೋಟ್ಯಾಂತರ ಜನರ ಮೇಲೆ ದೇಶಪ್ರೇಮದ ಪ್ರಭಾವ ಬೀರುವ ಸಂಸ್ಥೆ ಆರ್​ಎಸ್​ಎಸ್ ಬಗ್ಗೆ ಮಾತಾನಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಇನ್ನಾದರೂ ಪುಸ್ತಕ ತೆರೆದು ಓದಲಿ; ಅನಗತ್ಯವಾಗಿ ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು ಸರಿಯಲ್ಲ: ಡಿಕೆ ಸುರೇಶ್ ಟ್ವೀಟ್​ಗೆ ಬಿಸಿ ನಾಗೇಶ್ ಪ್ರತಿಕ್ರಿಯೆ
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
TV9 Web
| Edited By: |

Updated on: Feb 01, 2022 | 4:41 PM

Share

ಬೆಂಗಳೂರು: ಸಂಸದ ಡಿ.ಕೆ. ಸುರೇಶ್ ಬೇಜವಾಬ್ದಾರಿಯಾಗಿ ಟ್ವೀಟ್ ಮಾಡಿದ್ದಾರೆ. ಯಾವ ಪುಸ್ತಕವೇ ಇಲ್ಲ, ಪಾಠವೇ ಇಲ್ಲ, ಅಂಥ ಇಲ್ಲದಿರುವ ಪುಸ್ತಕದ ಬಗ್ಗೆ ಸುರೇಶ್ ಟ್ವೀಟ್ ಮಾಡಿದಾರೆ. ಅವರು ಏನನ್ನೂ ಓದಿಲ್ಲ ಅನ್ನೋದು ಇದರಿಂದ ಸಾಬೀತಾಗಿದೆ. ಮುಂದಿನ ದಿನಗಳಲ್ಲಾದರೂ ಸಂಸದ ಸುರೇಶ್ ಪುಸ್ತಕಗಳನ್ನು ತೆರೆದು ಓದಲಿ. ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೊಡುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆಯೂ ಮಾನಸಿಕತೆ ಬದಲಾಗತ್ತೆ. ಸತ್ಯಾಸತ್ಯತೆ ಪರೀಕ್ಷೆ ಮಾಡಿ ತಾವೇ ಸ್ವತಃ ಓದಿ ಟ್ವೀಟ್ ಮಾಡಲಿ. ಅನಗತ್ಯವಾಗಿ ಶ್ರೇಷ್ಠ ಸಂಸ್ಥೆ, ಕೋಟ್ಯಾಂತರ ಜನರ ಮೇಲೆ ದೇಶಪ್ರೇಮದ ಪ್ರಭಾವ ಬೀರುವ ಸಂಸ್ಥೆ ಆರ್​ಎಸ್​ಎಸ್ ಬಗ್ಗೆ ಮಾತಾನಾಡುವುದು ಸರಿಯಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಂಗಳವಾರ ಹೇಳಿದ್ದಾರೆ.

ಉಡುಪಿಯಲ್ಲಿ ಉಂಟಾಗಿರುವ ಯೂನಿಫಾರಂ, ಹಿಜಾಬ್ ವಿವಾದದ ಬಗ್ಗೆಯೂ ಬಿ.ಸಿ. ನಾಗೇಶ್ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ರಾಜ್ಯದಲ್ಲಿ ಯೂನಿಫಾರಂ ಹೇಗಿದೆ, ಸುಪ್ರೀಂ ಕೋರ್ಟ್, ಇತರ ಕೋರ್ಟ್​ಗಳು ಏನು ಹೇಳಿದೆ ಎಂದು ನೋಡುತ್ತೇವೆ. ಏಕರೂಪದ ನೀತಿ ಅಂತ ಅಲ್ಲದೇ ಇದ್ದರೂ ಈ ಬಗ್ಗೆ ಸ್ಪಷ್ಟನೆ ಕೊಡುವ ಕೆಲಸ ಮಾಡುತ್ತೇವೆ. ಸರ್ಕಾರವೇ ಯೂನಿಫಾರಂ ಕೊಡುತ್ತೋ ಅಥವಾ ಎಸ್​ಡಿಎಂಸಿಗೇ ಆ ಅಧಿಕಾರ ಕೊಟ್ಟರೂ ಯಾವ ಆಧಾರದಲ್ಲಿ ಅದನ್ನು ಮಾಡಬೇಕು ಎಂದು ಹೇಳುತ್ತೇವೆ. ಸಮಿತಿಯ ವರದಿಯಂತೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಆ ಕಾರ್ಯ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಈ ಪುಟ್ಟ ವಿಷಯ ಅನೇಕ ಸಮಸ್ಯೆಗಳನ್ನು ಸೃಷ್ಟಿಮಾಡಬಹುದು. ಕೇಸರಿ ಶಾಲು, ಹಸುರು ಶಾಲು, ಬನಿಯನ್, ಅರ್ಧ ಪ್ಯಾಂಟ್ ಹೀಗೆ ಬೇಕಾದ್ದನ್ನು ಹಾಕಿಕೊಂಡು ಬರುತ್ತೇವೆ ಅಂತ ಆಗಬಾರದು. ಡ್ರೆಸ್ ಕೋಡ್​​ನಲ್ಲಿ ಏನು ಮಾಡಬಾರದು ಅಂತ ಇತ್ತು. ಏನು ಮಾಡಬೇಕು ಅಂತಲೂ ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಡಿಕೆ ಸುರೇಶ್ ಅವರ ಆರೋಪ ಏನಿತ್ತು?

ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯಕ್ರಮದ ಗುಣಮಟ್ಟ ಕುಸಿಯುತ್ತಿದೆ. ವಿದ್ಯಾರ್ಥಿಗಳು ಈಗಾಗಲೇ ಕಡಿಮೆ ಪಠ್ಯಕ್ರಮ ಹೊಂದಿದ್ದಾರೆ. ಇದರ ಜೊತೆಗೆ ಭೋದನೆಗೆ ಸಂಬಂಧಪಟ್ಟ ಸರ್ಕಾರದ ಮೇಲ್ವಿಚಾರಣೆ ಕೂಡ ಇಲ್ಲ. ಸದ್ಯದ ಪಠ್ಯಪುಸ್ತಕಗಳಲ್ಲಿ ಚಿತ್ರಗಳನ್ನು ಶಿಕ್ಷಣ ಸಮಿತಿಯು ಯಾವುದೇ ಸಂಶೋಧನೆ ಮಾಡದೆ ಅಂತರ್ಜಾಲದಿಂದ ತೆಗೆದು ಪ್ರಕಟಿಸುತ್ತಿದೆ. ಅಂದ ಹಾಗೆ ಶಾಲಾ ಪಠ್ಯಕ್ರಮದಲ್ಲಿರುವ ಚಿತ್ರಗಳು ಮತ್ತು ಪಠ್ಯಗಳನ್ನು ಶಿಕ್ಷಣ ಇಲಾಖೆಯಲ್ಲಿ ಸಿದ್ದಪಡಿಸಲಾಗುತ್ತಿದೆಯೋ ಅಥವಾ ಕೇಶವಕೃಪದಲ್ಲೋ ಎಂಬುದನ್ನು ಬಿ.ಸಿ. ನಾಗೇಶ್ ಮತ್ತು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಬೇಕು. ಬಿಜೆಪಿ ಸರಕಾರದ ತೀವ್ರ ಅಸಡ್ಡೆ ಹಾಗೂ ಅವ್ಯವಸ್ಥೆಯಿಂದ ಕರ್ನಾಟಕವು ಇಡೀ ದೇಶದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಹಿಜಾಬ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ; ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ರಿಟ್ ಅರ್ಜಿ

ಇದನ್ನೂ ಓದಿ: ಹಿಜಾಬ್ ತೆಗೆದು ಕ್ಲಾಸಿಗೆ ಬರುವುದಾದರೆ ಬನ್ನಿ; ಹಿಜಾಬ್ ಧರಿಸಿ ಪಾಠ ಕೇಳುವ ಅವಕಾಶ ಇಲ್ಲ: ಸಭೆಯಲ್ಲಿ ತೀರ್ಮಾನ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್