AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಜಲೀಕರಣವು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡಬಹುದು; ಇರಲಿ ಎಚ್ಚರ

ಬೆಳಿಗ್ಗೆ ಊಟದಲ್ಲಿ ಹಸಿರು ತರಕಾರಿಗಳು ಮತ್ತು ನೀರು ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ನೀರಿನ ಕೊರತೆಯನ್ನು ನೀಗಿಸಲು, ಮಜ್ಜಿಗೆ, ಹಾಲು, ಮೊಸರು ಸೇವಿಸಿ ಮತ್ತು ಚಹಾ ಹಾಗೂ ಕಾಫಿ ಸೇವನೆಯನ್ನು ತಪ್ಪಿಸಿ.

ನಿರ್ಜಲೀಕರಣವು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡಬಹುದು; ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 26, 2022 | 8:09 AM

Share

ಈಗ ಕ್ರಮೇಣ ತಾಪಮಾನ ಹೆಚ್ಚುತ್ತಿದೆ. ಇದರಿಂದಾಗಿ ಶಾಖವು ಹೆಚ್ಚುತ್ತಿದೆ. ಬೇಸಿಗೆಯಲ್ಲಿ, ಜನರು ಸಾಮಾನ್ಯವಾಗಿ ನಿರ್ಜಲೀಕರಣದ ಸಮಸ್ಯೆಯನ್ನು ಹೊಂದಿರುತ್ತಾರೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಮಾರಕವಾಗಬಹುದು. ವೈದ್ಯರ ಪ್ರಕಾರ, ದೇಹದಲ್ಲಿ ನೀರಿನ ಕೊರತೆಯಿಂದಾಗಿ ನಿರ್ಜಲೀಕರಣ (Dehydration) ಸಂಭವಿಸುತ್ತದೆ. ಇದರಿಂದಾಗಿ ಹಠಾತ್ತನೆ ತಲೆಸುತ್ತು, ಮೂತ್ರ ವಿಸರ್ಜನೆ ಆಗದಿರುವುದು, ತಲೆನೋವು, ಬಾಯಿ ಒಣಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿರ್ಜಲೀಕರಣದಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ, ದೇಹದಲ್ಲಿ(Body) ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಮತ್ತು ನಿಯಮಿತ ಮಧ್ಯಂತರದಲ್ಲಿ ನೀರನ್ನು ಕುಡಿಯುವುದು ಮುಖ್ಯ. ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಒಯ್ಯಿರಿ. ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಂಬೆ ಹಣ್ಣಿನ ಜ್ಯೂಸ್​ (lemon Juice) ಕುಡಿಯಿರಿ. ನಿಮಗೆ ತಲೆತಿರುಗುವಿಕೆ ಅಥವಾ ತೀವ್ರ ತಲೆನೋವು ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಹಿರಿಯ ವೈದ್ಯ ಡಾ.ಕಮಲಜಿತ್ ಸಿಂಗ್ ಕೈಂತ್ ಮಾತನಾಡಿ, ಬೇಸಿಗೆಯಲ್ಲಿ ಬೆವರಿನ ಮೂಲಕ ದೇಹದಿಂದ ನೀರು ಹೊರಬರುತ್ತಲೇ ಇರುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಾಕಷ್ಟು ಪ್ರಮಾಣದ ನೀರು ಬೇಕಾಗುತ್ತದೆ. ಆದರೆ ನೀರಿನ ಕೊರತೆಯಿರುವಾಗ ನಿರ್ಜಲೀಕರಣದ ಅಪಾಯವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಅನೇಕ ರೋಗಗಳು ಸಂಭವಿಸಬಹುದು. ನಿರ್ಜಲೀಕರಣದ ಕಾರಣ ಬಿಪಿ ನಿಯಂತ್ರಣದಲ್ಲಿ ಉಳಿಯುವುದಿಲ್ಲ. ಕೆಲವೊಮ್ಮೆ ಸ್ನಾಯು ನೋವು ಸಹ ಸಂಭವಿಸುತ್ತದೆ. ನೀರಿನ ಕೊರತೆಯು ಮೂತ್ರ ವಿಸರ್ಜನೆಯನ್ನು ಕಡಿಮೆ ಮಾಡುತ್ತದೆ. ಇದು ನಂತರ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ ನೀರಿನ ಕೊರತೆ ಇರಬಾರದು ಎಂಬುದು ಮುಖ್ಯ. ಇದಕ್ಕಾಗಿ ಸಾಕಷ್ಟು ನೀರು ಕುಡಿಯಿರಿ. ಬೆಳಿಗ್ಗೆ ಊಟದಲ್ಲಿ ಹಸಿರು ತರಕಾರಿಗಳು ಮತ್ತು ನೀರು ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ನೀರಿನ ಕೊರತೆಯನ್ನು ನೀಗಿಸಲು, ಮಜ್ಜಿಗೆ, ಹಾಲು, ಮೊಸರು ಸೇವಿಸಿ ಮತ್ತು ಚಹಾ ಹಾಗೂ ಕಾಫಿ ಸೇವನೆಯನ್ನು ತಪ್ಪಿಸಿ.

ವಾಂತಿ ಮತ್ತು ಲೂಸ್ ಮೋಷನ್

ಈ ಋತುವಿನಲ್ಲಿ ಜನರು ವಾಂತಿ ಮತ್ತು ಲೂಸ್ ಮೋಷನ್ ಕಾರಣಕ್ಕೆ ಆಸ್ಪತ್ರೆಗೆ ಬರುತ್ತಾರೆ ಎಂದು ಡಾ. ಕಮಲಜಿತ್ ಸಿಂಗ್ ಕೈಂತ್ ಹೇಳಿದ್ದಾರೆ. ಅಂತಹ ಯಾವುದೇ ಸಮಸ್ಯೆಯ ಸಂದರ್ಭದಲ್ಲಿ ಅಜಾಗರೂಕರಾಗಿರಬಾರದು. ಏಕೆಂದರೆ ವಾಂತಿ ಮತ್ತು ಲೂಸ್​ ಮೋಷನ್​ನಿಂ್ ದೇಹದಲ್ಲಿ ನೀರಿನ ಕೊರತೆಯಿದೆ ಎಂದು ಅರ್ಥ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನವಜಾತ ಶಿಶುಗಳು ಮತ್ತು ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅದಕ್ಕಾಗಿ ಬೇಸಿಗೆಯಲ್ಲಿ ಚಿಕ್ಕ ಮಕ್ಕಳ ಬಗ್ಗೆ ವಿಶೇಷ ಗಮನವನ್ನು ನೀಡುವುದು ಅವಶ್ಯಕ.

ನಿರ್ಜಲೀಕರಣದ ಲಕ್ಷಣಗಳು

ತಲೆತಿರುಗುವಿಕೆ

ತೀವ್ರ ತಲೆನೋವು

ಹಳದಿ ಮೂತ್ರ

ಒಣ ಚರ್ಮ

ಇದನ್ನೂ ಓದಿ:

Health Tips: ಸೆಲರಿ ತಿನ್ನುವ ಅಭ್ಯಾಸ ಇದೆಯೇ? ಇಲ್ಲಿದೆ ಇದರ ಆರೋಗ್ಯಯುತ ಗುಣಗಳ ಮಾಹಿತಿ

ಬೇವಿನ ಎಲೆ ಕಹಿ ಎಂದು ಮೂಗು ಮುರಿಯುವ ಬದಲು ಆರೋಗ್ಯ ಪ್ರಯೋಜನ ತಿಳಿದುಕೊಳ್ಳಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ