ಕೇಜ್ರಿವಾಲ್ ನೇತೃತ್ವದ ಆಪ್ ಮಾತ್ರ ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರ್ಮೂಲ ಮಾಡಲು ಶಕ್ತವಾಗಿದೆ: ಭಾಸ್ಕರ್ ರಾವ್
ಒಳ್ಳೆಯ ಕೆಲಸ ಮಾಡಿದರೆ ಖಂಡಿತ ಜನ ಮೆಚ್ಚುತ್ತಾರೆ. ಪಕ್ಷಗಳಲ್ಲಿ ವಿ ಐ ಪಿ ಕಲ್ಚರ್ ಇರಬಾರದು. ರಾಜ್ಯದ ಎಲ್ಲ ಪಕ್ಷಗಳಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದನ್ನು ಕೇಜ್ರಿವಾಲ್ ನೇತೃತ್ವದಲ್ಲಿ ಮಾತ್ರ ನಿರ್ಮೂಲ ಮಾಡಲು ಸಾಧ್ಯ, ಎಂದು ಭಾಸ್ಕರ್ ರಾವ್ ಹೇಳಿದರು.
ದೆಹಲಿ: ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಭಾಸ್ಕರ ರಾವ್ (Bhaskar Rao) ಸ್ವಯಂ ನಿವೃತ್ತಿ (VRS) ಪಡೆದು ಸೋಮವಾರ ಅರವಿಂದ ಕೇಜ್ರಿವಾಲ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ ಸೇರಿದ್ದಾರೆ. ಆಪ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಭಾಸ್ಕರ ರಾವ್ ಅವರು ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರ ಹರೀಶ್ ರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. 32 ವರ್ಷಗಳ ಕಾಲ ಪೊಲೀಸ್ ಇಲಾಖೆಗೆ ಸಲ್ಲಿಸಿದ ಸೇವೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮತ್ತು ಅವುಗಳ ನಾಯಕರನ್ನು ಬಹಳ ಹತ್ತಿರದಿಂದ ನೋಡಿಕೊಂಡು ಬಂದಿರುವುದರಿಂದ ಅವರು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಅಂತ ಚೆನ್ನಾಗಿ ಗೊತ್ತಿದೆ. ಇದು ಸೆಕೆಂಡ್ ಇನ್ನಿಂಗ್ಸ್ ಅನ್ನೋ ಬದಲು ಮೊದಲ ಇನ್ನಿಂಗ್ಸ್ ನ ಮುಂದುವರಿದ ಭಾಗ ಎನ್ನಬಹುದು. ಆಪ್ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಗ್ಗೆ ತಮಗೆ ಬಹಳ ಗೌರವವಿದೆ. ಅವರು ರಾಜಕೀಯಕ್ಕೆ ಬಂದಾಗ ಬೇರೆ ಪಕ್ಷಗಳು ಅಪಹಾಸ್ಯ ಮಾಡಿದವು. ಅವರಿಂದ ಏನೂ ಕೈಲಾಗದು ಅಂತ ಹೇಳಲಾಗುತಿತ್ತು, ಆದರೆ ಅವರು ಮಾಡಿ ತೋರಿಸಿದ್ದಾರೆ ಎಂದು ಅವರು ಹೇಳಿದರು.
ಒಳ್ಳೆಯ ಕೆಲಸ ಮಾಡಿದರೆ ಖಂಡಿತ ಜನ ಮೆಚ್ಚುತ್ತಾರೆ. ಪಕ್ಷಗಳಲ್ಲಿ ವಿ ಐ ಪಿ ಕಲ್ಚರ್ ಇರಬಾರದು. ರಾಜ್ಯದ ಎಲ್ಲ ಪಕ್ಷಗಳಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಿದೆ. ಇದನ್ನು ಕೇಜ್ರಿವಾಲ್ ನೇತೃತ್ವದಲ್ಲಿ ಮಾತ್ರ ನಿರ್ಮೂಲ ಮಾಡಲು ಸಾಧ್ಯ, ಎಂದು ಭಾಸ್ಕರ್ ರಾವ್ ಹೇಳಿದರು.
ಧರ್ಮಾಂಧತೆ, ಮಾಂಸ ತಿನ್ನುವ ಮತ್ತು ಇನ್ನೂ ಬೇರೆ ಬಗೆಯ ವಿಚಾರಗಳಿಂದ ಕಲುಷಿತಗೊಂಡಿರುವ ರಾಜ್ಯ ರಾಜಕಾರಣದಲ್ಲಿ ಆಪ್ ಎಷ್ಷು ಪ್ರಸ್ತುತ ಎಂದು ಕೇಳಿದ ಪ್ರಶ್ನೆಗೆ ಭಾಸ್ಕರ ರಾವ್ ಅವರು ನಮ್ಮ ಪಕ್ಷ ಜನರ ನಾಡಿಮಿಡಿತ ಅರ್ಥಮಾಡಿಕೊಂಡು ಕೆಲಸ ಮಾಡುವ ಪಕ್ಷ. ಸಂವಿಧಾನದಲ್ಲಿ ಸೂಚಿಸಲಾಗಿರುವ ಸೌಲಭ್ಯಗಳು ಅವರಿಗೆ ಸಿಗಲೇಬೇಕು ಎಂದರು. ಜನಸಾಮಾನ್ಯರ ಬಲವರ್ಧನೆ ನಮ್ಮ ಪಕ್ಷದ ಮೂಲ ಉದ್ದೇಶವಾಗಿದೆ. ಬೇರೆ ಪಕ್ಷಗಳಲ್ಲಿ ಕಾರ್ಯಕರ್ತರಿಗೆ ಮರ್ಯಾದೆ ಇಲ್ಲದಂತಾಗಿದೆ, ನಮ್ಮ ಪಕ್ಷ ಚಿಕ್ಕದಾದರೂ ಒಂದು ದೊಡ್ಡ ಕುಟುಂಬದಂತೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಭ್ರಷ್ಟಾಚಾರ ನಿರ್ಮೂಲಗೊಳಿಸಲು ಕೇವಲ ಆಪ್ ಮಾತ್ರ ಶಕ್ತವಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ಜನಸಾಮಾನ್ಯರು ನಗರ ಮತ್ತು ಗ್ರಾಮೀಣ ಭಾಗ ಎರಡೂ ಕಡೆ ಇರುತ್ತಾರೆ. ನಮ್ಮ ಪಕ್ಷದ ಮೂಲಮಂತ್ರ ಜನರ ಆರೋಗ್ಯ ಮತ್ತು ಶಿಕ್ಷಣ ಆಗಿದೆ. ಜನಸಾಮಾನ್ಯ ಸ್ಥಿತಿಗತಿ ಉತ್ತಮಗೊಳ್ಳಬೇಕಿದೆ. ಬೇರೆ ಪಕ್ಷಗಳಿಗೆ ಅದನ್ನು ಮಾಡುವುದು ಸಾಧ್ಯವಾಗುತ್ತಿಲ್ಲ. ನಮ್ಮ ಪಕ್ಷ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ ಅಂತ ಹೇಳಿದ ರಾವ್, ಪಕ್ಷದ ನಾಯಕರು ತಮಗೆ ಒದಗಿಸುವ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ತಮ್ಮ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇನ್ನೂ ಸ್ವೀಪರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ ಪಂಜಾಬ್ ಮುಖ್ಯಮಂತ್ರಿಯನ್ನು ಸೋಲಿಸಿದ ಆಪ್ ಶಾಸಕನ ಅಮ್ಮ