AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಹಿಂದೂ ವ್ಯಕ್ತಿಯ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ನೆರವಿಗೆ ಧಾವಿಸಿದ್ದು ಒಬ್ಬ ಮುಸ್ಲಿಂ ವ್ಯಕ್ತಿ!

ಬೆಳಗಾವಿಯಲ್ಲಿ ಹಿಂದೂ ವ್ಯಕ್ತಿಯ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ನೆರವಿಗೆ ಧಾವಿಸಿದ್ದು ಒಬ್ಬ ಮುಸ್ಲಿಂ ವ್ಯಕ್ತಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 04, 2022 | 8:59 PM

ಈ ಮುಸ್ಲಿಂ ವ್ಯಕ್ತಿ ಕಾರು ಯಾವ ಧರ್ಮದವರಿಗೆ ಸೇರಿದ್ದು ಅಂತ ಕೇಳುವ ಗೋಜಿಗೆ ಹೋಗಲಿಲ್ಲ. ಕಾರು ಮತ್ತು ಕಾರಲ್ಲಿದ್ದ ಪಾಟೀಲ್ ಕಷ್ಟದಲ್ಲಿದ್ದಾರೆ ಅನ್ನೋದನ್ನು ಮಾತ್ರ ಅವರು ಯೋಚಿಸಿ ಕೂಡಲೇ ನೆರವಿಗೆ ಧಾವಿಸಿದ್ದಾರೆ.

ಬೆಳಗಾವಿ: ಚಲಿಸುವ ಕಾರುಗಳಲ್ಲಿ (moving cars) ಇದ್ದಕ್ಕಿದ್ದಂತೆ ಬೆಂಕಿಹೊತ್ತಿಕೊಂಡು ಸಂಭವಿಸುವ ದುರ್ಘಟನೆಗಳ ಬಗ್ಗೆ ನಾವು ಈಗಾಗಲೇ ಹಲವಾರು ಬಾರಿ ವರದಿ ಮಾಡುತ್ತಾ ಆತಂಕ ವ್ಯಕ್ತಪಡಿಸಿದ್ದೇವೆ. ಆದರೆ ಕಾರು ತಯಾರಿಸುವ ಕಂಪನಿಗಳು (manufacturing companies) ಹಾಗಾಗದಂತೆ ತಡೆಯಲು ಪ್ರಯತ್ನ ಮಾಡುತ್ತಿಲ್ಲವೇನೋ ಎಂಬ ಸಂಶಯ ಮೂಡುತ್ತದೆ. ಇದನ್ನು ಯಾಕೆ ಹೇಳಬೇಕಾಗಿದೆ ಅಂದರೆ, ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ಹಾಗೆ, ಸೋಮವಾರ ಬೆಳಗಾವಿಯ (Belagavi) ಕಿತ್ತೂರು ಚನ್ನಮ್ಮ ಸರ್ಕಲ್ ಬಳಿ ಈ ಕೆಂಪು ಬಣ್ಣದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಸದರಿ ಕಾರು ಖಾಸಗಿ ಸಹಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ವಿಶಾಲ್ ಪಾಟೀಲ್ (Vishal Patil) ಅವರಿಗೆ ಸೇರಿದ್ದು. ಬೆಂಕಿ ಹೊತ್ತಿಕೊಂಡಾಗ ಕಾರಲ್ಲಿ ಅವರೊಬ್ಬರೇ ಇದ್ದರೆನ್ನಲಾಗಿದೆ.

ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಪಾಟೀಲ್ ಆಚೆ ಬಂದಿದ್ದರಿಂದ ಅವರಿಗೇನೂ ಆಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅದು ಸರಿ, ಕಾರಲ್ಲಿ ಬೆಂಕಿ ಕಾಣಿಸಿಕೊಂಡಾಗ ಒಬ್ಬ ಮುಸ್ಲಿಂ ವ್ಯಕ್ತಿ ಪಾಟೀಲ್ಅವರ ಸಹಾಯಕ್ಕೆ ಧಾವಿಸಿದ್ದಾರೆ, ನಿಮಗೆ ವಿಡಿಯೋನಲ್ಲಿ ಅವರು ಕಾಣುತ್ತಾರೆ.

ನಮ್ಮ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರಿಗೆ ಗೊತ್ತಿಲ್ಲ? ಹಿಜಾಬ್, ಹಲಾಲ್ ಕಟ್, ಅಜಾನ್, ಹರ್ಷನ ಕೊಲೆ ಮೊದಲಾದ ಸಂಗತಿಗಳನ್ನು ನೋಡುವಾಗ ಹಿಂದೂ ಮತ್ತು ಮುಸಲ್ಮಾನರ ನಡುವೆ ಸಾಮರಸ್ಯದ ಅಂಶ ಉಳಿದೇ ಇಲ್ಲವೇನೋ ಎಂಬ ಅನುಮಾನ ಹುಟ್ಟುತ್ತದೆ.

ಆದರೆ, ಈ ಮುಸ್ಲಿಂ ವ್ಯಕ್ತಿ ಕಾರು ಯಾವ ಧರ್ಮದವರಿಗೆ ಸೇರಿದ್ದು ಅಂತ ಕೇಳುವ ಗೋಜಿಗೆ ಹೋಗಲಿಲ್ಲ. ಕಾರು ಮತ್ತು ಕಾರಲ್ಲಿದ್ದ ಪಾಟೀಲ್ ಕಷ್ಟದಲ್ಲಿದ್ದಾರೆ ಅನ್ನೋದನ್ನು ಮಾತ್ರ ಅವರು ಯೋಚಿಸಿ ಕೂಡಲೇ ನೆರವಿಗೆ ಧಾವಿಸಿದ್ದಾರೆ.

ಧರ್ಮಗಳ ನಡುವೆ ಸತತವಾಗಿ ನಡೆಯುತ್ತಿರುವ ಸಂಘರ್ಷದಲ್ಲಿ ಮಾನವೀಯತೆಯ ಈ ಮುಖ ಜನರ ಮನಸ್ಸಿಗೆ ಬಹಳ ಮುದ ನೀಡುತ್ತದೆ ಮಾರಾಯ್ರೇ.

ಇದನ್ನೂ ಓದಿ:   Bengaluru Crime: ವಾಕಿಂಗ್ ಮಾಡುವ ಮಹಿಳೆಯರ ಪೋಟೋ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ