ಹೊಸತೊಡಕು ದಿನ ಬೆಂಗಳೂರಿನ ಮುಸ್ಲಿಂ ಮಾಂಸದಂಗಡಿಗಳಲ್ಲಿ ವ್ಯಾಪಾರ ಅರ್ಧದಷ್ಟು ಕುಸಿದಿತ್ತು!
ಹೊಸತೊಡಕು ದಿನ ಅವರ ಅಂಗಡಿಯಲ್ಲಿ ಕನಿಷ್ಟ 1,000 ಕೆಜಿ ಕೋಳಿ ಮಾಂಸ ಮಾರಾಟವಾಗುತ್ತಿತ್ತಂತೆ. ಆದರೆ ಸೋಮವಾರ ಅದರ ಅರ್ಧದಷ್ಟು ಮಾತ್ರ ವ್ಯಾಪಾರವಾಗಿದೆ. ವ್ಯಾಪಾರದ ಬಗ್ಗೆ ಅವರು ಹೆಚ್ಚು ಆತಂಕಿತರಾಗಿಲ್ಲ, ಆದರೆ, ತಲೆದೋರಿರುವ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು: ರವಿವಾರ ಇಡೀ ರಾಜ್ಯದಲ್ಲಿ ಹಿಂದೂ ಸಮುದಾಯದ (Hindu community) ಜನ ಹೊಸತೊಡಕು (Hosathadku) ಆಚರಿಸಿದರು. ಬೆಂಗಳೂರು ನಗರದಲ್ಲೂ ಆಚರಣೆ ಭರ್ಜರಿಯಾಗಿತ್ತು. ಅದರೆ ಹಲಾಲ್ ಕಟ್ (Halal Cut) ಮತ್ತು ಜಟ್ಕಾ ಕಟ್ (Jhatka Cut) ಮಾಂಸದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಚಿಕನ್ ಮತ್ತು ಮಟನ್ ವ್ಯಾಪಾರಸ್ಥರ ಮೇಲೆ ವಿವಾದ ಪ್ರಭಾವ ಜೋರಾಗೇ ಉಂಟಾಗಿತ್ತು. ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಒಬ್ಬ ಮುಸ್ಲಿಂ ವ್ಯಾಪಾರಸ್ಥನನ್ನು ಮಾತಾಡಿಸಿದ್ದಾರೆ. ವ್ಯಾಪಾರಿಯೇ ಹೇಳುವ ಹಾಗೆ ಹೊಸತೊಡಕು ದಿನ ಅವರ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ. ಹಲಾಲ್ ಕಟ್ ಮಾಂಸದ ವಿರುದ್ಧ ನಡೆಯುತ್ತಿರುವ ಅಭಿಯಾನ ಸರಿಯಲ್ಲ. ಏನೇನಾಗುತ್ತಿದೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ, ನಾವೇನೂ ಕಣ್ಣು ಮುಚ್ಚಿಕೊಂಡು ಕೂತಿಲ್ಲ. ಶತಮಾನಗಳಿಂದ ನಾವು ಹಿಂದೂಗಳ ಜೊತೆ ಅಣ್ಣತಮ್ಮಂದಿರ ಹಾಗೆ ಸಹಾಬಾಳ್ವೆ ನಡೆಸಿಕೊಂಡು ಬಂದಿದ್ದೇವೆ, ಆದರೆ ಈಗ ಉಂಟಾಗಿರುವ ಸ್ಥಿತಿ ಹೇವರಿಕೆ ಹುಟ್ಟಿಸುತ್ತಿದೆ. ಎಷ್ಟು ದಿನಾಂತ ನಾವು ಇದನ್ನೆಲ್ಲ ಸಹಿಸುವುದು ಅಂತ ಅವರು ಕೇಳುತ್ತಾರೆ.
ಹೊಸತೊಡಕು ದಿನ ಅವರ ಅಂಗಡಿಯಲ್ಲಿ ಕನಿಷ್ಟ 1,000 ಕೆಜಿ ಕೋಳಿ ಮಾಂಸ ಮಾರಾಟವಾಗುತ್ತಿತ್ತಂತೆ. ಆದರೆ ಸೋಮವಾರ ಅದರ ಅರ್ಧದಷ್ಟು ಮಾತ್ರ ವ್ಯಾಪಾರವಾಗಿದೆ. ವ್ಯಾಪಾರದ ಬಗ್ಗೆ ಅವರು ಹೆಚ್ಚು ಆತಂಕಿತರಾಗಿಲ್ಲ, ಆದರೆ, ತಲೆದೋರಿರುವ ಪರಿಸ್ಥಿತಿ ಬಹಳ ಕೆಟ್ಟದ್ದಾಗಿದೆ ಎಂದು ಅವರು ಹೇಳಿದರು.
ನಿನ್ನೆ ಆಗಿರುವ ನಷ್ಟದ ಬಗ್ಗೆ ಹೇಳಿಕೊಳ್ಳಲು ನಮಗೆ ನಾಚಿಕೆಯಾಗುತ್ತದೆ ಎಂದು ಈ ಹಿರಿಯ ವ್ಯಕ್ತಿ ಹೇಳುತ್ತಾರೆ. ಅಂದಹಾಗೆ, ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದ ಕೇವಲ ಹೊಸತೊಡಕು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಸೋಮವಾರವೂ ಅದು ಮುಂದುವರಿದಿತ್ತು. ಯಾವಾಗ ಕೊನೆಗೊಂಡೀತು ಅಂತ ಮುಸಲ್ಮಾನರು ಕಾಯುತ್ತಿದ್ದಾರೆ.
ಇದನ್ನೂ ಓದಿ: ಸಂಬರಗಿಗೆ ತಾಕತ್ತಿದ್ದರೆ ನಾನು ಹೇಳುವ ಜಾಗದಲ್ಲಿ ಹಲಾಲ್ ಕಟ್ ವಿರುದ್ಧ ಅಭಿಯಾನ ನಡೆಸಲಿ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ