ಹಲಾಲ್ ಕಟ್ ಮತ್ತು ಅಜಾನ್ ಬಗ್ಗೆ ಸಚಿವ ಈಶ್ವರಪ್ಪ ತಳೆದಿರುವ ಮೃದುಧೋರಣೆ ಆಶ್ಚರ್ಯ ಹುಟ್ಟಿಸುತ್ತದೆ!
ರಾಜ್ ಠಾಕ್ರೆ ಮತ್ತು ಶ್ರೀರಾಮಸೇನೆಯವರು ಅಜಾನ್ ನಿಂದ ತೊಂದರೆಯಾಗುತ್ತಿದೆ ಅಂತ ಹೇಳುತ್ತಿದ್ದಾರೆ ಹಿಂದೂ ಸಂಘಟನೆಗಳು, ಮಠಾಧೀಶರು ಈ ಪದ್ಥತಿಯನ್ನು ತೆಗೆದುಹಾಕಬೇಕು ಅಂತ ಹೇಳುತ್ತಿದ್ದಾರೆ, ಇದು ಹಾಗೆ ಮಾಡಲು ಬರೋದಿಲ್ಲ, ಎಂದು ಈಶ್ವರಪ್ಪ ಹೇಳಿದರು.
ಕಾರವಾರ: ಶಿವಮೊಗ್ಗನಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಾದಾಗ ಮತ್ತು ನಂತರದ ದಿನಗಳಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರು ನೀಡಿದ ಹೇಳಿಕೆಗಳು ಮತ್ತು ಈಗ ಹಲಾಲ್ ಕಟ್ ಮಾಂಸ ಹಾಗೂ ಮಸೀದಿಯಲ್ಲಿ ಮುಸಲ್ಮಾನರು ಧ್ವನಿವರ್ಧಕಗಳ (loudspeakers) ಮೂಲಕ ನಿಡುವ ಅಜಾನ್ (Azaan) ಬಗ್ಗೆ ಅವರು ನೀಡುತ್ತಿರುವ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಅವರ ಧೋರಣೆಯಲ್ಲಿ ಆಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಹಲಾಲ್ ಕಟ್ ಮಾಂಸ ವಿರೋಧಿಸಿ ಹಿಂದೂ ಸಂಘಟನೆಗಳು ರಾಜ್ಯದಾದ್ಯಂತ ಅಭಿಯಾನ ನಡೆಸುತ್ತಿವೆ. ಈಶ್ವರಪ್ಪನವರಿಗೆ ಈ ಬಗ್ಗೆ ಕೇಳಿದಾಗ, ಬಹಳ ಸ್ಪಷ್ಟವಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸುಖಾಸುಮ್ಮನೆ ಸೃಷ್ಟಿಸಿರುವ ವಿವಾದ ಇದು. ನನಗೆ ಮುಸಲ್ಮಾನರು ತಮ್ಮ ಬಳಿ ಮಾಂಸ ಖರೀದಿಸಿ ಅಂತ ಯಾವತ್ತೂ ಹೇಳಿಲ್ಲ, ಅವರ ಪದ್ಧತಿಯನ್ನು ಅವರು ಅನುಸರಿಸುತ್ತಾರೆ, ನಾನು ಕೂಡ ಅವರಿಗೆ ನಮ್ಮ ಪದ್ಧತಿ ಪಾಲಿಸಿ ಯಾವತ್ತೂ ಹೇಳಿಲ್ಲ ಎಂದಿದ್ದರು.
ಕಾರವಾರನಲ್ಲಿ ಸೋಮವಾರದಂದು ಮಾಧ್ಯಮದವರೊಂದಿಗೆ ಮಾತಾಡಿದ ಸಚಿವರು ಅಜಾನ್ ಬಗ್ಗೆ ಕೇಳಿದ ಪ್ರಶ್ನೆಗೆ ಬಹಳ ಮೃದು ಧೋರಣೆಯಲ್ಲಿ ಮತ್ತು ಪದಗಳನ್ನು ಬಹಳ ಜಗರೂಕತೆಯಿಂದ ಬಳಸಿ ಮಾತಾಡಿದರು. ರಾಜ್ ಠಾಕ್ರೆ ಮತ್ತು ಶ್ರೀರಾಮಸೇನೆಯವರು ಅಜಾನ್ ನಿಂದ ತೊಂದರೆಯಾಗುತ್ತಿದೆ ಅಂತ ಹೇಳುತ್ತಿದ್ದಾರೆ ಹಿಂದೂ ಸಂಘಟನೆಗಳು, ಮಠಾಧೀಶರು ಈ ಪದ್ಥತಿಯನ್ನು ತೆಗೆದುಹಾಕಬೇಕು ಅಂತ ಹೇಳುತ್ತಿದ್ದಾರೆ, ಇದು ಹಾಗೆ ಮಾಡಲು ಬರೋದಿಲ್ಲ, ಎಂದು ಈಶ್ವರಪ್ಪ ಹೇಳಿದರು.
ಅದರೆ, ವಿಷಯವನ್ನು ಮುಸಲ್ಮಾನ ಧಾರ್ಮಿಕ ಮುಖಂಡರ ಜೊತೆ ಚರ್ಚಿಸಬೇಕಾಗುತ್ತದೆ. ಬೆಳಗಿನ ಜಾವ ಧ್ವನಿವರ್ಧಕಗಳ ಮೂಲಕ ಅಜಾನ್ ನೀಡಿದರೆ ಅವರ ಮಕ್ಕಳೂ ಸೇರಿದಂತೆ ಎಲ್ಲಾ ಓದುವ ಮಕ್ಕಳಿಗೆ ತೊಂದರೆಯಾಗುತ್ತದೆ. ವಯಸ್ಸಾದವರಿಗೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗುತ್ತಿದೆ ಅಂತ ಅವರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಈಶ್ವರಪ್ಪ ಹೇಳಿದರು.
ಇದು ಸಮುದಾಯಗಳ ನಡುವಿನ ಪೈಪೋಟಿ ಅಲ್ಲ, ಅವರು ಅಜಾನ್ ಕೂಗುತ್ತಾರೆ ಅಂತ ಹಿಂದೂಗಳು ಮಸೀದಿಗಳ ಮುಂದೆ ಜೋರಾಗಿ ಹನುಮಾನ ಚಾಲೀಸ್ ಕೇಳಿಸುವುದು ಸರಿ ಕಾಣೋದಿಲ್ಲ. ಅಜಾನ್ ಬಗ್ಗೆ ತನ್ನ ವಿರೋಧ ಇಲ್ಲ, ಅದರೆ ವಿದ್ಯಾರ್ಥಿಗಳಿಗೆ ಅದರಿಂದ ತೊಂದರೆಯಾಗುತ್ತಿದ್ದರೆ ಅದನ್ನು ಮಸೀದಿಯೊಳಗೆ ನಡೆಸುವಂಥ ಪ್ರಯತ್ನವಾಗಬೇಕು. ದೇವಾಸ್ಥಾನ ಮತ್ತು ಚರ್ಚುಗಳಲ್ಲೂ ಅವರ ಆಚರಣೆಗಳು ಅವರವರ ಆವರಣಗಳಿಗೆ ಸೀಮಿತವಾಗಿರಬೇಕು ಎಂದು ಹೇಳಿದ ಈಶ್ವರಪ್ಪ ಮುಸ್ಲಿಂ ಧಾರ್ಮಿಕ ಮುಖಂಡರು ಈ ಕುರಿತು ಯೋಚನೆ ಮಾಡಬೇಕು ಅಂತ ಹೇಳಿದರು.
ಇದನ್ನೂ ಓದಿ: KS Eshwarappa: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್