KS Eshwarappa: ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್
Shivamogga special court: ಸಮುದಾಯಗಳ ನಡುವೆ ದ್ವೇಷ ಹರಡುವುದನ್ನು ಉತ್ತೇಜಿಸಿರುವ ಮತ್ತು ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಹಾಲಿ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ಕೋರ್ಟ್ ಸೂಚಿಸಿದೆ.
ಶಿವಮೊಗ್ಗ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (Karnataka Rural Development and Panchayat Raj Minister KS Eshwarappa) ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಇಲ್ಲಿನ ವಿಶೇಷ ನ್ಯಾಯಾಲಯವು ದೊಡ್ಡಪೇಟೆ ಪೊಲೀಸರಿಗೆ ಆದೇಶಿಸಿದೆ. ಸಮುದಾಯಗಳ ನಡುವೆ ದ್ವೇಷ ಹರಡುವುದನ್ನು ಉತ್ತೇಜಿಸಿರುವ ಮತ್ತು ದೇಶದ್ರೋಹದ ಪ್ರಕರಣ (sedition charges) ದಾಖಲಿಸುವಂತೆ ಹಾಲಿ ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ಕೋರ್ಟ್ ಸೂಚಿಸಿದೆ. ಶಿವಮೊಗ್ಗದ ನಿವಾಸಿ ರಿಯಾಜ್ ಅಹಮದ್ ಅವರಿ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್, ದೂರಿನ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಮಾರ್ಚ್30ರಂದು ಆದೇಶ ನೀಡಿದೆ (Shivamogga special court).
ಬೆಂಗಳೂರು ವರದಿ: ಬಿಜೆಪಿ ಮುಖಂಡರಿಂದ ಪ್ರಚೋದನಕಾರಿ ಹೇಳಿಕೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ಕಾರವು ಸ್ವಯಂಪ್ರೇರಿತ ಕ್ರಮ ಕೋರಿ ಬಿಜೆಪಿ ನಾಯಕರ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ. ಮೊಹಮ್ಮದ್ ಖಲೀಲುಲ್ಲಾ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿಯ ತುರ್ತು ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ನಿಗದಿತ ಕ್ರಮದಲ್ಲೇ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಪ್ರತಿಕ್ರಿಯಿಸಿದೆ. ಬಿಜೆಪಿ ನಾಯಕರ ಹೇಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡಿದೆ. ಸುಪ್ರೀಂ ಕೋರ್ಟ್ ಇಂತಹವರ ವಿರುದ್ದ ಕ್ರಮಕ್ಕೆ ಸೂಚಿಸಿದೆ. ಹೀಗಾಗಿ ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ದೂರುದಾರರು ಮೊದಲು ಶಿವಮೊಗ್ಗದ ದೊಡ್ಡಪೇಟೆ ಪೊಲೀಸರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಯಾವುದೇ ಪ್ರತಿಕ್ರಿಯೆ ವ್ಯಪಡಿಸಿದೆ ಹೋದಾಗ, ಕೋರ್ಟ್ ಮೊರೆ ಹೋಗಿದ್ದಾರೆ. ಹಿಂದೂ ಕಾರ್ಯಕರ್ತ ಹರ್ಷ ಅವರ ಹತ್ಯೆಯ ಬಳಿಕ, ಮಾರ್ಚ್ 20ರಂದು ಪೊಲೀಸರು ತನಿಖೆ ಕೈಗೆತ್ತಿಕೊಳ್ಳುವುದಕ್ಕೂ ಮೊದಲು ಈಶ್ವರಪ್ಪ ಹಾಗೂ ಮತ್ತೊಬ್ಬ ಬಿಜೆಪಿ ನಾಯಕ ಚನ್ನಬಸಪ್ಪ ಅವರು ಸಾರ್ವಜನಿಕವಾಗಿ ರಾಜಕೀಯ ಮತ್ತು ಧಾರ್ಮಿಕ ವಿಷಯಗಳ ಹಿನ್ನೆಲೆಯಲ್ಲಿ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನು ಓದಿ: Ayush Badoni: ಮಹಿಳೆಯ ತಲೆಗೆ ಬಡಿದ ಜೂ. ಎಬಿಡಿ ಬದೋನಿ ಸಿಡಿಸಿದ ಸಿಕ್ಸ್: ಮುಂದೇನಾಯಿತು ನೋಡಿ
ಇದನ್ನು ಓದಿ: ಸಮಂತಾಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟಿದ್ದ ಖ್ಯಾತ ಕೊರಿಯೋಗ್ರಾಫರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
Published On - 1:10 pm, Fri, 1 April 22