Ayush Badoni: ಮಹಿಳೆಯ ತಲೆಗೆ ಬಡಿದ ಜೂ. ಎಬಿಡಿ ಬದೋನಿ ಸಿಡಿಸಿದ ಸಿಕ್ಸ್: ಮುಂದೇನಾಯಿತು ನೋಡಿ
LSG vs CSK, IPL 2022: ಲಖನೌ ಸೂಪರ್ ಜೇಂಟ್ಸ್ ಬ್ಯಾಟಿಂಗ್ ಇನ್ನಿಂಗ್ಸ್ನ 19ನೇ ಓವರ್ನ ಶಿವಂ ದುಬೆ ಬೌಲಿಂಗ್‌ನಲ್ಲಿ ಬ್ಯಾಟರ್ ಆಯುಷ್ ಬದೋನಿ ಸಿಡಿಸಿದ ಸಿಕ್ಸ್ ಪ್ರೇಕ್ಷರ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಮಹಿಳೆಯ ತಲೆಗೆ ಬಡಿಯಿತು. ನಂತರ ಏನಾಯಿತು ಎಂಬುದನ್ನು ನೀವೇ ನೋಡಿ.
ಐಪಿಎಲ್ 2022 ರಲ್ಲಿ (IPL 2022) ಗುರುವಾರ ನಡೆದ ಲಖನೌ ಸೂಪರ್ ಜೇಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (LSG vs CSK) ನಡುವಣ ಸೆಣೆಸಾಟ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಹೈ ಸ್ಕೋರ್ ಕದನವಾಗಿದ್ದರಿಂದ ಹೈವೋಲ್ಟೇಜ್ ಮ್ಯಾಚ್ ನಡೆಯಿತು. ಉಭಯ ತಂಡಗಳಿಂದ ರನ್ ಮಳೆಯೇ ಹರಿದುಬಂತು. ಕೊನೇ ಓವರ್ ವರೆಗೂ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ತಂಡ 6 ವಿಕೆಟ್ಗಳಿಂದ ಗೆದ್ದು ಬೀಗಿತು. ರವೀಂದ್ರ ಜಡೇಜಾ ಸಾರಥಿಯ ಸಿಎಸ್ಕೆಗೆ ಸತತ ಎರಡನೇ ಸೋಲಾಯಿತು. ಇದು ಐಪಿಎಲ್ ಇತಿಹಾಸದ 4ನೇ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆರಂಭಿಕ ಎರಡು ಪಂದ್ಯಗಳನ್ನು ಸೋತ ಕೆಟ್ಟ ದಾಖಲೆ ಬರೆಯಿತು. ಎಲ್ಎಸ್ಜಿ ಪರ ಅಂತಿಮ ಹಂತದಲ್ಲಿ ಅಬ್ಬರಿಸಿದ್ದು ಆಯುಷ್ ಬದೋನಿ (Ayush Badoni).
ಹೌದು, ಜೂನಿಯರ್ ಎಬಿಡಿ, ಮಿ. 360 ಡಿಗ್ರಿ ಎಂದೇ ಖ್ಯಾತಿ ಪಡೆದಿರುವ ಆಯುಷ್ ಬದೋನಿ ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಸ್ಫೊಟಕ ಬ್ಯಾಟಿಂಗ್ ನಡೆಸಿದರು. ಕೊನೆಯ ಎರಡು ಓವರ್‌ಗಳಿಗೆ 34 ರನ್ ಅಗತ್ಯವಿದ್ದಾಗ ಎವಿನ್ ಲೆವಿಸ್ ಹಾಗೂ ಬದೋನಿ 19ನೇ ಓವರ್‌ನಲ್ಲಿ ಶಿವಂ ದುಬೇ ಎಸೆತದಲ್ಲಿ ತಲಾ ಎರಡು ಸಿಕ್ಸರ್ ಹಾಗೂ ತಲಾ ಎರಡು ಬೌಂಡರಿಯೊಂದಿಗೆ ಒಟ್ಟು 25 ರನ್ ಕಲೆ ಹಾಕಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಕೊನೆಯ ಓವರ್‌ನಲ್ಲಿ 9 ರನ್ ಅಗತ್ಯವಿದ್ದಾಗ ಬದೋನಿ ಭರ್ಜರಿ ಸಿಕ್ಸರ್ ಲಖನೌ ಸೂಪರ್ ಜೇಂಟ್ಸ್ ತಂಡಕ್ಕೆ ಗೆಲುವು ತಂದಿಟ್ಟರು. ಇವರು ಕೇವಲ 9 ಎಸೆತಗಳಲ್ಲಿ 2 ಅಮೂಲ್ಯ ಸಿಕ್ಸರ್ ಸಿಡಿಸಿ ಅಜೇಯ 19 ರನ್ ಚಚ್ಚಿದರು.
ಇದರಲ್ಲಿ 19ನೇ ಓವರ್ನ ಶಿವಂ ದುಬೆ ಬೌಲಿಂಗ್‌ನಲ್ಲಿ ಬದೋನಿ ಸಿಡಿಸಿದ ಸಿಕ್ಸ್ ಪ್ರೇಕ್ಷರ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಮಹಿಳೆಯ ತಲೆಗೆ ಬಡಿಯಿತು. ಹೌದು, ದುಬೆ ಅವರ ಶಾರ್ಟ್ ಬಾಲ್ಗೆ ಕ್ರೀಸ್ನ ಡೀಪ್ ಇನ್ಸೈಡ್ನಲ್ಲಿ ಕೂತು ಡೀಪ್ ಸ್ಕ್ವೇರ್ ಲೆಗ್ ಮೂಲಕ ಆಯುಚ್ ಬದೋನಿ ಚೆಂಡನ್ನು ಸಿಕ್ಸರ್ಗೆ ಅಟ್ಟಿದರು. ಚೆಂಡು ನೇರವಾಗಿ ಪ್ರೇಕ್ಷಕ ಗ್ಯಾಲರಿಯಲ್ಲಿದ್ದ ಕೂತಿದ್ದ ಮಹಿಳೆಯ ತಲೆಗೆ ಬಂದು ಬಡಿಯಿತು. ನೋವು ತಾಳಲಾರಾದೆ ಆ ಮಹಿಳೆ ಒಂದು ಕ್ಷಣ ದಂಗಾಗಿ ಹೋದರು. ನಂತರ ಅವರು ಹುಷರಾಗಿದ್ದಾರೆಂಬ ಸಂದೇಶ ಬಂದಿದೆ.
This six from bidoni injured a lady in crowd #CSKvLSG pic.twitter.com/ppzRTvm3Lf
— timeSquare?? (@time__square) March 31, 2022
ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬದೋನಿ ಟಾರ್ಗೆಟ್ ಅನ್ನು ಯಶಸ್ವಿಯಾಗಿ ಚೇಸ್ ಮಾಡಲು ಟೀಮ್ ಮ್ಯಾನೇಜ್‌ಮೆಂಟ್ ರೂಪಿಸಿದ್ದ ಯೋಜನೆ ಏನೆಂಬುದನ್ನು ಬಹಿರಂಗಪಡಿಸಿದರು. “ಹಿರಿಯ ಆಲ್‌ರೌಂಡರ್ ಡ್ವೇನ್ ಬ್ರಾವೊ ಬೌಲಿಂಗ್‌ನಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಾರದೆಂಬ ಯೋಜನೆಯನ್ನು ಟೀಮ್ ಮ್ಯಾನೇಜ್‌ಮೆಂಟ್ ರೂಪಿಸಿತ್ತು. ಕೊನೆಯ ಎರಡು ಓವರ್‌ಗಳು ಬಾಕಿ ಇರುವಾಗ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಪಂದ್ಯವನ್ನು ಮುಗಿಸೋಣ ಎಂಬುದು ನಮ್ಮ ಪ್ಲಾನ್. ಅಂದುಕೊಂಡಂತೆ ನಮ್ಮ ಯೋಜನೆಯ ಪ್ರಕಾರವೇ ಪಂದ್ಯವನ್ನು ಮುಗಿಸಿದ್ದೇವೆ,” ಎಂದು ಹೇಳಿದ್ದಾರೆ.
ಇನ್ನು ಆಯುಷ್ ಬದೋನಿ ಬಗ್ಗೆ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, “ಆಯುಷ್ ಬದೋನಿ ಒಬ್ಬ ಬಲಿಷ್ಠವಾದ 360 ಡಿಗ್ರಿ ಪ್ಲೇಯರ್. ಅವರ ಕೆಲ ಬ್ಯಾಟಿಂಗ್ ವಿಡಿಯೋವನ್ನು ನಾನು ನೋಡಿದ್ದೆ. ಅದರಲ್ಲಿ ಕೆಲ ಅದ್ಭುತ ಹೊಡೆತಗಳಿವೆ. ಭಾರತಕ್ಕೆ ಈರೀತಿಯ ಆಟಗಾರ ಬೇಕು. ಇವರು ವೈಟ್ ಬಾಲ್ ಕ್ರಿಕೆಟ್ನ ಆಸ್ತಿ,” ಎಂದು ಹೇಳಿದ್ದಾರೆ.
IPL 2022 Point Table: ಆರೆಂಜ್ ಕ್ಯಾಪ್ ಆರ್ಸಿಬಿ ಬ್ಯಾಟರ್ ಕೈಯಲ್ಲಿ ಭದ್ರ: ಪಾಯಿಂಟ್ ಟೇಬಲ್ ಹೇಗಿದೆ?
KL Rahul: ಸಿಎಸ್ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ