KL Rahul: ಸಿಎಸ್​ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ

IPL 2022, LSG vs CSK: ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್​ಕೆ ತಂಡ  ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ.

KL Rahul: ಸಿಎಸ್​ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
KL Rahul post-match presentation
Follow us
TV9 Web
| Updated By: Vinay Bhat

Updated on: Apr 01, 2022 | 10:02 AM

ಹೊಸ ನಾಯಕ, ಹೊಸ ತಂಡದೊಂದಿಗೆ ಐಪಿಎಲ್ 2022ಕ್ಕೆ (IPL 2022) ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಸೋತ ಕೆಎಲ್ ರಾಹುಲ್ (KL Rahul) ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ತನ್ನ ದ್ವಿತೀಯ ಪಂದ್ಯದಲ್ಲಿ ಊಹಿಸಲಾಗದ ರೀತಿ ಕಮ್​ಬ್ಯಾಕ್ ಮಾಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಎಲ್​ಎಸ್​​ಜಿ (LSG vs CSK) 6 ವಿಕೆಟ್​​ಗಳಿಂದ ಗೆಲುವು ಸಾಧಿಸಿತು. ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ (55*ರನ್, 23 ಎಸೆತ, 6 ಬೌಂಡರಿ, 3 ಸಿಕ್ಸರ್) ಅಂತಿಮ ಹಂತದಲ್ಲಿ ತೋರಿದ ಅದ್ಭುತ ನಿರ್ವಹಣೆ ಹಾಗೂ ಯುವ ಬ್ಯಾಟರ್ ಆಯುಷ್ ಬಡೋನಿ (19*ರನ್, 9 ಎಸೆತ, 2 ಸಿಕ್ಸರ್) ತೋರಿದ ಅಮೋಘ ಪ್ರದರ್ಶನದಿಂದಾಗಿ ರಾಹುಲ್ ಪಡೆ ಗೆಲುವಿನ ಹಳಿಗೇರಿದರೆ, ಸಿಎಸ್​ಕೆ ತಂಡ  ಭಾರೀ ಮುಖಭಂಗ ಅನುಭವಿಸಿತು. ಪಂದ್ಯ ಮುಗಿದ ಬಳಿಕ ಲಖನೌ ನಾಯಕ ಕೆಎಲ್ ರಾಹುಲ್ ಮಾತನಾಡಿದ್ದು, ಏನು ಹೇಳಿದರು ಎಂಬುದನ್ನು ಕೇಳಿ.

“ರವಿ ಬಿಷ್ಟೋಯಿ ಇಂದು ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರದ್ದು ಉದಾರವಾದ ಹೃದಯ. ಅವರೊಬ್ಬ ಫೈಟರ್. ಕಳೆದ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ಅವರು ವೆಟ್​​ ಬಾಲ್ ಇದ್ದರೂ ಕಮ್​ಬ್ಯಾಕ್ ಮಾಡಿದ್ದು ರೋಚಕವಾಗಿತ್ತು. ನಿಜಕ್ಕೂ ಇದು ಖುಷಿ ತಂದಿದೆ. ಅವರು ಇನ್ನಷ್ಟು ಬೆಳೆಯಬೇಕು, ಕಲಿಯಬೇಕು, ಅದನ್ನು ನೋಡಲು ಕಾತುರನಾಗಿದ್ದೇನೆ. ಆಯಿಷ್ ಬದೋನಿ ಒಬ್ಬ ಬಲಿಷ್ಠವಾದ 360 ಡಿಗ್ರಿ ಪ್ಲೇಯರ್. ಅವರ ಕೆಲ ಬ್ಯಾಟಿಂಗ್ ವಿಡಿಯೋವನ್ನು ನಾನು ನೋಡಿದ್ದೆ. ಅದರಲ್ಲಿ ಕೆಲ ಅದ್ಭುತ ಹೊಡೆತಗಳಿವೆ. ಭಾರತಕ್ಕೆ ಈರೀತಿಯ ಆಟಗಾರ ಬೇಕು. ಇವರು ವೈಟ್ ಬಾಲ್ ಕ್ರಿಕೆಟ್​ನ ಆಸ್ತಿ. ಕ್ವಿಂಟನ್ ಡಿಕಾಕ್ ಕೂಡ ಉತ್ತಮ ಬ್ಯಾಟಿಂಗ್ ಮಾಡಿದರು. ಎವಿನ್ ಲೆವಿಸ್ ನೆಟ್​ನಲ್ಲಿ ಸಾಕಷ್ಟು ಬ್ಯಾಟಿಂಗ್ ಅಭ್ಯಾಸ ಮಾಡಿದ್ದರು. ಅವರ ಟೈಮಿಂಗ್ ಅದ್ಭುತವಾಗಿತ್ತು. ಈ ಗೆಲುವು ಖುಷಿ ನೀಡಿದೆ,” ಎಂದು ಹೇಳಿದ್ದಾರೆ.

ಇನ್ನು ಸೋತ ತಂಡದ ನಾಯಕ ರವೀಂದ್ರ ಜಡೇಜಾ ಮಾತನಾಡಿ, “ನಾವು ಉತ್ತಮ ಆರಂಭ ಪಡೆದುಕೊಂಡೆವು. ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅಮೋಘ ಪ್ರದರ್ಶನ ನೀಡಿದರು. ಆದರೆ, ನಮ್ಮ ಫೀಲ್ಡಿಂಗ್ ಚೆನ್ನಾಗಿರಲಿಲ್ಲ. ಒಂದು ಕ್ಯಾಚ್ ಒಂದು ಪಂದ್ಯವನ್ನು ಗೆಲ್ಲಬಹುದು. ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಇಲ್ಲಿ ಸಾಕಷ್ಟು ಡ್ಯೂ ಇದ್ದವು. ಕೈಯಲ್ಲಿ ಚೆಂಡು ನಿಲ್ಲುತ್ತಿರಲಿಲ್ಲ. ಮುಂದೆ ನಾವು ಚೆಂಡಿಯಾದ ಚೆಂಡಿನಲ್ಲಿ ಅಭ್ಯಾಸ ನಡೆಸಬೇಕಿದೆ. ಟಾಪ್ ಸಿಕ್ಸ್​ನಲ್ಲಿ ನಮ್ಮ ಬ್ಯಾಟಿಂಗ್ ಅತ್ಯುತ್ತಮವಾಗಿತ್ತು. ಮಧ್ಯಮ ಓವರ್​ನಲ್ಲಿ ಕೂಡ. ಬ್ಯಾಟ್​ಗೆ ವಿಕೆಟ್ ಚೆನ್ನಾಗಿ ಬರುತ್ತಿತ್ತು. ನಮ್ಮ ಯೋಜನೆಯನ್ನು ಇನ್ನಷ್ಟು ಉತ್ತಮವಾಗಿ ಜಾರಿಗೆ ತರಬೇಕಿತ್ತು,” ಎಂದು ಹೇಳಿದ್ದಾರೆ.

ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಕ್ವಿಂಟನ್ ಡಿಕಾಕ್ ಕೂಡ ಗೆಲುವಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, “ಇದನ್ನು ಊಹಿಸಲು ಆಗುತ್ತಿಲ್ಲ. ಅಂತಿಮ ಹಂತದಲ್ಲಿ ಈರೀತಿ ಗೆಲುವು ಸಾಧಿಸಿರುವುದು ಖುಷಿ ನೀಡುತ್ತದೆ. ಎಲ್ಲರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 210 ರನ್ ಗುರಿ ಮುಟ್ಟುವ ವಿಶ್ವಾಸ ನಮ್ಮಲ್ಲಿತ್ತು. ಎರಡು-ಮೂರು ಓವರ್ ಆದ ಬಳಿಕ ಚೆಂಡು ವಿಕೆಟ್​ಗೆ ಚೆನ್ನಾಗಿ ಬರುತ್ತಿದೆ ಎಂಬುದು ಅರಿವಾಯಿತು. ಎವಿನ್ ಲೆವಿಸ್ ಮತ್ತು ಆಯುಷ್ ಬದೋನಿ ಅದ್ಭುತ ಬ್ಯಾಟಿಂಗ್ ನಿರ್ವಹಿಸಿದರು,” ಎಂದು ಹೇಳಿದ್ದಾರೆ.

ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ರಾಬಿನ್ ಉತ್ತಪ್ಪ (50 ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 210 ರನ್ ಪೇರಿಸಿತು. ಬಳಿಕ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಎಲ್‌ಎಸ್‌ಜಿ, ನಾಯಕ ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ ಉತ್ತಮ ಆರಂಭ ಒದಗಿಸಿತು. ಕೊನೇ ಹಂತದಲ್ಲಿ ಲೆವಿಸ್ ಮತ್ತು ಬದೋನಿ ಅಬ್ಬರಿದ ಫಲವಾಗಿ ಎಲ್‌ಎಸ್‌ಜಿ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 211 ರನ್‌ಗಳಿಸಿ ಗೆಲುವು ಕಂಡಿತು.

KKR vs PBKS, IPL 2022: ಐಪಿಎಲ್​​ನಲ್ಲಿಂದು ಕೋಲ್ಕತ್ತಾ- ಪಂಜಾಬ್ ಮುಖಾಮುಖಿ: ಅಯ್ಯರ್ ಪಡೆ ಮೇಲೆ ಎಲ್ಲರ ಕಣ್ಣು

LSG vs CSK, IPL 2022: ಹಿಂದೆಂದೂ ಹೀಗೆ ಆಗಿಲ್ಲ: ಐಪಿಎಲ್ ಇತಿಹಾಸದಲ್ಲೇ ಸಿಎಸ್​​ಕೆಗೆ ಭಾರೀ ಮುಖಭಂಗ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ