KKR vs PBKS, IPL 2022: ಐಪಿಎಲ್​​ನಲ್ಲಿಂದು ಕೋಲ್ಕತ್ತಾ- ಪಂಜಾಬ್ ಮುಖಾಮುಖಿ: ಅಯ್ಯರ್ ಪಡೆ ಮೇಲೆ ಎಲ್ಲರ ಕಣ್ಣು

Kolkata Knight Riders vs Punjab Kings: ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಮುಖಾಮುಖಿ ಆಗುತ್ತಿದೆ. ಪಂಜಾಬ್ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 200ಕ್ಕೂ ಅಧಿಕ ರನ್​ಗಳನ್ನು ಚೇಸ್ ಮಾಡಿ ಗೆದ್ದು ಬೀಗಿದ್ದು ವಿಶ್ವಾಸದಲ್ಲಿದೆ.

KKR vs PBKS, IPL 2022: ಐಪಿಎಲ್​​ನಲ್ಲಿಂದು ಕೋಲ್ಕತ್ತಾ- ಪಂಜಾಬ್ ಮುಖಾಮುಖಿ: ಅಯ್ಯರ್ ಪಡೆ ಮೇಲೆ ಎಲ್ಲರ ಕಣ್ಣು
KKR vs PBKS IPL 2022
Follow us
TV9 Web
| Updated By: Vinay Bhat

Updated on: Apr 01, 2022 | 8:23 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಇಂದಿನ ಎಂಟನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ (KKR vs PBKS) ಮುಖಾಮುಖಿ ಆಗುತ್ತಿದೆ. ಪಂಜಾಬ್ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 200ಕ್ಕೂ ಅಧಿಕ ರನ್​ಗಳನ್ನು ಚೇಸ್ ಮಾಡಿ ಗೆದ್ದು ಬೀಗಿದ್ದು ವಿಶ್ವಾಸದಲ್ಲಿದೆ. ಇತ್ತ ಕೆಕೆಆರ್ ತಂಡ ಆರ್​​ಸಿಬಿ (RCB) ವಿರುದ್ಧ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ತೋರಿ ಸೋಲುಂಡಿತ್ತು. ಹೀಗಾಗಿ ಅಯ್ಯರ್ ಪಡೆಯ ಮೇಲೆ ಎಲ್ಲರ ಕಣ್ಣಿದ್ದು ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದು ನೋಡಬೇಕಿದೆ. ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ಪಂಜಾಬ್ ತಂಡದಲ್ಲಿ ಹೆಚ್ಚಿನ ಆಟಗಾರರು ಉತ್ತಮ ಫಾರ್ಮ್​ನಲ್ಲಿದ್ದು, ಬ್ಯಾಟಿಂಗ್​ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಹಾಗೆಯೇ ಕೊಲ್ಕತ್ತಾ ತಂಡದ ಪರವಾಗಿ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಪಂಜಾಬ್‌ ತಂಡದ ಬ್ಯಾಟಿಂಗ್‌ ಬಲಿಷ್ಠವಾಗಿದೆ. ಆದರೆ ಬೌಲಿಂಗ್‌ ವಿಭಾಗ ತೀರಾ ದುರ್ಬಲವಾಗಿ ಗೋಚರಿಸಿದೆ. ಇದಕ್ಕೆ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯವೇ ಸಾಕ್ಷಿ. ಡುಪ್ಲೆಸಿಸ್‌ ಪಡೆ ಬರೀ ಎರಡೇ ವಿಕೆಟಿಗೆ 205 ರನ್‌ ಪೇರಿಸಿತ್ತು. ಒಡಿಯನ್‌ ಸ್ಮಿತ್‌, ಹರ್‌ಪ್ರೀತ್‌ ಬ್ರಾರ್‌, ಆರ್ಷದೀಪ್‌ ಸಿಂಗ್‌, ಸಂದೀಪ್‌ ಶರ್ಮ ಕ್ಲಿಕ್‌ ಆಗಿರಲಿಲ್ಲ. ನಿಯಂತ್ರಣ ಸಾಧಿಸಿದ್ದು ರಾಹುಲ್‌ ಚಹರ್‌ ಮಾತ್ರ. ಗೆಲುವಿನ ನಡುವೆಯೂ ಪಂಜಾಬ್‌ ಪಾಲಿಗೆ ಇದೊಂದು ಚಿಂತೆಯ ಸಂಗತಿಯಾಗಿಯೇ ಉಳಿದಿದೆ. ಆದರೆ ದಕ್ಷಿಣ ಆಫ್ರಿಕಾದ ಘಾತಕ ವೇಗಿ ಕಗಿಸೊ ರಬಾಡ ಆಗಮನ ತಂಡಕ್ಕೆ ನೆಮ್ಮದಿ ನೀಡುತ್ತಾ ಎಂಬುದು ನೋಡಬೇಕಿದೆ. ಪಂಜಾಬ್ ಪರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮೂರೇ ವಿದೇಶಿ ಆಟಗಾರರನ್ನು ಕಣಕ್ಕಿಳಿಸಿತ್ತು. ಈಗ ರಬಾಡ ಅವರಿಗಾಗಿ ಆರ್ಷದೀಪ್‌ ಸಿಂಗ್‌ ಹೊರಗುಳಿಯಬಹುದು. ಅಗರ್ವಾಲ್‌, ಧವನ್‌, ರಾಜಪಕ್ಸ, ಲಿವಿಂಗ್‌ಸ್ಟೋನ್‌, ಶಾರೂಖ್‌ ಖಾನ್‌, ಒಡಿಯನ್‌ ಸ್ಮಿತ್‌ ಅವರೆಲ್ಲ ದೈತ್ಯ ಬ್ಯಾಟರ್‌ಗಳಾಗಿದ್ದಾರೆ.

ಇತ್ತ ಬೆಂಗಳೂರು ಎದುರಿನ ಪಂದ್ಯದಲ್ಲಿ ಕೋಲ್ಕತ್ತ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದರೆ, ಬೌಲಿಂಗ್‌ನಲ್ಲಿ ಯಥಾಪ್ರಕಾರ ಉತ್ತಮ ಸಾಧನೆ ತೋರಿತ್ತು. ಅದರಲ್ಲಿಯೂ ಉಮೇಶ್ ಯಾದವ್ ತಮ್ಮ ಉತ್ತಮ ಲಯವನ್ನು ಮುಂದುವರಿಸಿದ್ದರು. ಟಿಮ್ ಸೌಥಿ, ಸುನೀಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಉತ್ತಮ ಲಯದಲ್ಲಿದ್ದರೆ, ಅದರಿಂದಾಗಿ ಆರ್‌ಸಿಬಿಯು ಬಹಳ ಕಷ್ಟಪಟ್ಟು ಜಯ ಸಾಧಿಸಿತ್ತು. ರಹಾನೆ, ಶ್ರೇಯಸ್, ವೆಂಕಟೇಶ್ ಅಯ್ಯರ್ ಮತ್ತು ಆಯಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ತಮ್ಮ ಲಯಕ್ಕೆ ಮರಳಿದರೆ, ಮಯಂಕ್ ಬಳಗದ ಬೌಲಿಂಗ್‌ ಪಡೆಗೆ ಕಠಿಣ ಸವಾಲು ಎದುರಾಗಲಿದೆ.

ಮುಖಾಮುಖಿ:

ಕೊಲ್ಕತ್ತಾ ಮತ್ತು ಪಂಜಾಬ್ ತಂಡಗಳು ಐಪಿಎಲ್​ ನಲ್ಲಿ ಈವರೆಗೆ ಒಟ್ಟು 29 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 19 ಪಂದ್ಯ ಕೊಲ್ಕತ್ತಾ ಗೆದ್ದರೆ, 10 ಪಂದ್ಯವನ್ನು ಪಂಜಾಬ್ ತಂಡ ಗೆದ್ದಿದೆ. ಅಂಕಿಅಂಶದ ಪ್ರಕಾರ ಕೊಲ್ಕತ್ತಾ ಬಲಿಷ್ಠವಾಗಿ ಕಂಡುಬಂದರೂ, ಪಂಜಾಬ್ ಈ ಬಾರಿ  ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದೆ.

ಪಿಚ್ ಹೇಗಿದೆ?:

ವಾಂಖೆಡೆ ಸ್ಟೇಡಿಯಂ ಹೈಸ್ಕೋರಿಂಗ್ ತಾಣ ಎಂಬುದರಲ್ಲಿ ಅನುಮಾನವಿಲ್ಲ. ಈ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ಅನುಕೂಲವನ್ನು ನೀಡಲಿದೆ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲಗಳು ಸಿಗಲಿದೆ. ಚೇಸಿಂಗ್ ಮಾಡುವ ತಂಡ ಗೆಲ್ಲುವ ಸಾಧ್ಯತೆ ಅಧಿಕ.

ಸಂಭಾವ್ಯ ಪ್ಲೇಯಿಂಗ್ XI:

ಕೆಕೆಆರ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಶೆಲ್ಡನ್ ಜಾಕ್ಸನ್ (ವಿಕೆ), ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್ಸ್ಟೋನ್, ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಾರುಖ್ ಖಾನ್, ಓಡಿಯನ್ ಸ್ಮಿತ್, ರಾಜ್ ಬಾವಾ, ಹರ್ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್, ಕಗಿಸೊ ರಬಾಡ.

LSG vs CSK, IPL 2022: ಹಿಂದೆಂದೂ ಹೀಗೆ ಆಗಿಲ್ಲ: ಐಪಿಎಲ್ ಇತಿಹಾಸದಲ್ಲೇ ಸಿಎಸ್​​ಕೆಗೆ ಭಾರೀ ಮುಖಭಂಗ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು