IPL 2022 Point Table: ಆರೆಂಜ್ ಕ್ಯಾಪ್ ಆರ್​​ಸಿಬಿ ಬ್ಯಾಟರ್ ಕೈಯಲ್ಲಿ ಭದ್ರ: ಪಾಯಿಂಟ್ ಟೇಬಲ್​​ ಹೇಗಿದೆ?

IPL 2022 Point Table: ಆರೆಂಜ್ ಕ್ಯಾಪ್ ಆರ್​​ಸಿಬಿ ಬ್ಯಾಟರ್ ಕೈಯಲ್ಲಿ ಭದ್ರ: ಪಾಯಿಂಟ್ ಟೇಬಲ್​​ ಹೇಗಿದೆ?
IPL 2022 Point Table

IPL 2022 Orange Cap, Purple Cap: ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ ಹೇಗಿದೆ?, ಆರೆಂಜ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

TV9kannada Web Team

| Edited By: Vinay Bhat

Apr 01, 2022 | 10:35 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಆರಂಭವಾಗಿ ಒಂದು ವಾರ ಆಗುತ್ತಿದ್ದು ಟೂರ್ನಿ ರೋಚಕತೆ ಪಡೆಯುತ್ತಿದೆ. ದುರ್ಬಲ ಅಂದುಕೊಂಡಿದ್ದ ತಂಡವೆಲ್ಲ ಭರ್ಜರಿ ಪ್ರದರ್ಶನ ತೋರುತ್ತಿದ್ದರೆ, ಹಾಲಿ ಚಾಂಪಿಯನ್, ಮಾಜಿ ಚಾಂಪಿಯನ್ ಆಡಿದ ತಂಡಗಳು ಮೊದಲ ಪಂದ್ಯದಲ್ಲೇ ಸೋಲಿನ ರುಚಿ ಕಂಡಿದೆ. ಎರಡು ಹೊಸ ತಂಡಗಳಾದ ಲಖನೌ ಸೂಪರ್ ಜೇಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಟೀಮ್ ಕೂಡ ನಿರೀಕ್ಷೆಗೆ ತಕ್ಕ ಆಟವಾಡುತ್ತಿದೆ. ಲೀಗ್ ಪಂದ್ಯಗಳು ಮುಕ್ತಾಯಗೊಂಡ ಬಳಿಕ ಪಾಯಿಂಟ್ ಪಟ್ಟಿಯಲ್ಲಿರುವ ಮೊದಲ ನಾಲ್ಕು ತಂಡಗಳು ಟೂರ್ನಿಯ ಪ್ಲೇ-ಆಫ್‌ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ. ಅದರ ನಂತರ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಇರುತ್ತದೆ. ವಿಜೇತ ತಂಡವು ಪ್ರತಿ ಪಂದ್ಯದಲ್ಲಿ 2 ಅಂಕಗಳನ್ನು ಪಡೆಯುತ್ತದೆ. ಇದರ ಜೊತೆಗೆ ಅತಿ ಹೆಚ್ಚು ರನ್ ಕಲೆಹಾಕಿದವರಿಗೆ ಆರೆಂಜ್ ಕ್ಯಾಪ್, ಅತಿ ಹೆಚ್ಚು ವಿಕೆಟ್ ಕಿತ್ತವರು ಪರ್ಪಲ್ ಕ್ಯಾಪ್ ಧರಿಸುತ್ತಾರೆ. ಹಾಗಾದ್ರೆ ಐಪಿಎಲ್ 2022ರ ಪಾಯಿಂಟ್ ಟೇಬಲ್ (IPL 2022 Point Table) ಹೇಗಿದೆ?, ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬುದನ್ನು ನೋಡೋಣ.

ಪಾಯಿಂಟ್ ಟೇಬಲ್:

  • ಮೊದಲ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಭದ್ರವಾಗಿದೆ. ಇವರು ಆಡಿರುವ ಒಂದು ಪಂದ್ಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿ 2 ಅಂಕದೊಂದಿಗೆ ನಿವ್ವಳ ರನ್ ರೇಟ್ +3.050 ಹೊಂದಿ ಟಾಪ್ ಒನ್​ನಲ್ಲಿದೆ.
  • ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದೆಹಲಿಯ ನಿವ್ವಳ ರನ್ ರೇಟ್ +0.914 ಆಗಿದೆ.
  • ಮೂರನೇ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇದೆ. ಪಂಜಾಬ್ ನಿವ್ವಳ ರನ್ ರೇಟ್ +0.697 ಆಗಿದೆ.
  • ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್ ನಿವ್ವಳ ರನ್ ರೇಟ್ +0.286.
  • ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕಿಂಗ್ ಖಾನ್ ಒಡೆತನದ KKR ನೆಟ್ ರನ್ ರೇಟ್ +0.093 ಆಗಿದೆ.
  • ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಲೀಗ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಲಖನೌದ ನಿವ್ವಳ ರನ್ ರೇಟ್ -0.011.
  • ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಖನೌ ಗೆಲುವಿನ ಬಳಿಕ ಏಳನೆ ಸ್ಥಾನಕ್ಕೆ ಕುಸಿದಿದೆ. RCB ನಿವ್ವಳ ರನ್ ರೇಟ್ -0.046.
  • ಎಂಟನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಇದೆ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡಿರುವ CSK ನಿವ್ವಳ ರನ್ ರೇಟ್ -0.528.
  • ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಮುಂಬೈ ನಿವ್ವಳ ರನ್ ರೇಟ್ -0.914.
  • ಕೆನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಸದ್ಯಕ್ಕೆ ಲೀಗ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ನಿವ್ವಳ ರನ್ ರೇಟ್ – 3.050.

ಆರೆಂಜ್ ಕ್ಯಾಪ್:

ಮೊದಲ ಪಂದ್ಯದಲ್ಲಿ ಭರ್ಜರಿ 88 ರನ್‌ಗಳಿಸಿ ಮಿಂಚಿದ್ದ ಫಾಫ್ ಡು ಪ್ಲೆಸಿಸ್ ಎರಡನೇ ಪಂದ್ಯದಲ್ಲಿ 5 ರನ್‌ಗಳಿಗೆ ಔಟ್ ಆಗುವ ಮೂಲಕ ವಿಫಲರಾದರು. ಆದರೂ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಸದ್ಯ ಫಾಫ್ ಡುಪ್ಲೆಸಿಸ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಒಟ್ಟು 93 ರನ್ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಇಶಾನ್ ಕಿಶನ್ 81 ರನ್‌ಗಳಿಸಿದ್ದು ಮುಂದಿನ ಪಂದ್ಯದಲ್ಲಿ ಆರೆಂಜ್ ಕ್ಯಾಪ್ ಮೇಲೆ ಕಣ್ಣಿಟ್ಟಿದ್ದಾರೆ. ಮೂರನೇ ಸ್ಥಾನದಲ್ಲಿ ರಾಬಿನ್ ಉತ್ತಪ್ಪ (78 ರನ್), ನಾಲ್ಕನೇ ಸ್ಥಾನದಲ್ಲಿ ಆಯುಷ್ ಬದೋನಿ (73 ರನ್) ಮತ್ತು ಐದನೇ ಸ್ಥಾನದಲ್ಲಿ ದೀಪಕ್ ಹೂಡ (68 ರನ್) ಇದ್ದಾರೆ.

ಪರ್ಪಲ್ ಕ್ಯಾಪ್:

ಇನ್ನು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಲ್‌ರೌಂಡರ್ ವನಿಂದು ಹಸರಂಗ ಮುಂದಿದ್ದಾರೆ. ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಹಸರಂಗ ಎರಡನೇ ಪಂದ್ಯದಲ್ಲಿ 4 ವಿಕೆಟ್ ಕೀಳುವ ಮೂಲಕ ಆರ್‌ಸಿಬಿ ಮುನ್ನಡೆಗೆ ಕಾರಣವಾದರು. ಹೀಗಾಗಿ ಎರಡು ಪಂದ್ಯಗಳಲ್ಲಿ ಒಟ್ಟು 5 ವಿಕೆಟ್ ಪಡೆದಿರುವ ಹಸರಂಗ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ನಾಲ್ಕು ವಿಕೆಟ್ ಪಡೆದಿರುವ ಉಮೇಶ್ ಯಾದವ್, ಡ್ವೇನ್ ಬ್ರಾವೋ ಹಾಗೂ ಆಕಾಶ್ ದೀಪ್ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

KL Rahul: ಸಿಎಸ್​ಕೆಯನ್ನು ಬಗ್ಗು ಬಡಿದ ಬಳಿಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ

KKR vs PBKS, IPL 2022: ಐಪಿಎಲ್​​ನಲ್ಲಿಂದು ಕೋಲ್ಕತ್ತಾ- ಪಂಜಾಬ್ ಮುಖಾಮುಖಿ: ಅಯ್ಯರ್ ಪಡೆ ಮೇಲೆ ಎಲ್ಲರ ಕಣ್ಣು

Follow us on

Related Stories

Most Read Stories

Click on your DTH Provider to Add TV9 Kannada