IPL 2022: KKR ತಂಡದ ಸ್ಟಾರ್ ಆಟಗಾರ ಅನ್ಫಿಟ್: ಹೊಸ ಚಿಂತೆ ಶುರು..!
IPL 2022: ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ.
ಐಪಿಎಲ್ನ ಮೊದಲ ಪಂದ್ಯದಲ್ಲಿ ಸಿಎಸ್ಕೆ ವಿರುದ್ದ ಭರ್ಜರಿ ಜಯ ಸಾಧಿಸಿದ್ದ ಕೆಕೆಆರ್ 2ನೇ ಪಂದ್ಯದಲ್ಲಿ ಸೋಲನುಭವಿಸಿತು. ಆರ್ಸಿಬಿ ವಿರುದ್ದ ನಡೆದ ಈ ಪಂದ್ಯದಲ್ಲಿ ಕೆಕೆಆರ್ ಉತ್ತಮ ಹೋರಾಟ ನಡೆಸಿದರೂ ಅಂತಿಮ ಓವರ್‌ನಲ್ಲಿ ಸೋಲೊಪ್ಪಿಕೊಂಡಿತು. ಆದರೆ ಈ ಸೋಲಿನ ಬೆನ್ನಲ್ಲೇ ಇದೀಗ ಕೆಕೆಆರ್ ತಂಡದ ಸ್ಟಾರ್ ಆಟಗಾರ ಗಾಯಗೊಂಡಿರುವುದು ಬಹಿರಂಗವಾಗಿದೆ. ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಸಂಪೂರ್ಣ ಫಿಟ್ ಆಗಿಲ್ಲ ಎಂದು ಕೋಚ್ ಬ್ರೆಂಡನ್ ಮೆಕಲಂ ತಿಳಿಸಿದ್ದಾರೆ. ರಸೆಲ್ ಭುಜದ ನೋವಿನಿಂದ ಬಳಲುತ್ತಿದ್ದು, ಇದುವೇ ಹೊಸ ಚಿಂತೆಗೆ ಕಾರಣವಾಗಿದೆ ಎಂದಿದ್ದಾರೆ.
ಆರ್ಸಿಬಿ ವಿರುದ್ದದ 12ನೇ ಓವರ್‌ನಲ್ಲಿ ರಸೆಲ್ ಬೌಂಡರಿ ಲೈನ್ನಲ್ಲಿ ಡೈವ್ ಮಾಡಿದರು. ಈ ವೇಳೆ ಭುಜಕ್ಕೆ ಪೆಟ್ಟಾಗಿದ್ದು, ಇದರಿಂದ ಬೌಲಿಂಗ್ ಮಾಡಲು ತೊಂದರೆಯಾಯಿತು. ಇದರಿಂದ ಅಂತಿಮ ಓವರ್ಗಳ ವೇಳೆ ಪರಿಣಾಮಕಾರಿಯಾಗಿ ಬೌಲ್ ಮಾಡಲು ರಸೆಲ್ಗೆ ಸಾಧ್ಯವಾಗಿರಲಿಲ್ಲ. ಎಂದು ಬ್ರೆಂಡನ್ ಮೆಕಲಂ ತಿಳಿಸಿದ್ದಾರೆ.
ಹೀಗಾಗಿ ಮುಂದಿನ ಪಂದ್ಯದಲ್ಲಿ ರಸೆಲ್ ಬೌಲ್ ಮಾಡುವುದು ಕೂಡ ಅನುಮಾನ ಎನ್ನಲಾಗಿದೆ. ಒಂದು ವೇಳೆ ರಸೆಲ್ ಮುಂದಿನ ಪಂದ್ಯಗಳಿಂದ ಹೊರಗುಳಿದರೆ ಕೆಕೆಆರ್ ತಂಡಕ್ಕೆ ಹಿನ್ನಡೆಯಾಗಲಿದೆ. ಏಕೆಂದರೆ ಕೆಕೆಆರ್ ತಂಡದ ಗೇಮ್ ಚೇಂಜರ್ ಎನಿಸಿಕೊಂಡಿರುವ ರಸೆಲ್ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು. ಹೀಗಾಗಿ ಅವರು ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವುದು ಕೆಕೆಆರ್ಗೆ ಸವಾಲಾಗಲಿದೆ. ಇದೇ ಕಾರಣದಿಂದಾಗಿ ಇದೀಗ ಕೆಕೆಆರ್ ತಂಡವು ಆಂಡ್ರೆ ರಸೆಲ್ ಮುಂದಿನ ಪಂದ್ಯದ ವೇಳೆಗೆ ಫಿಟ್ ಆಗಲಿ ಎಂದು ಬಯಸುತ್ತಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಸ್ಯಾಮ್ ಬಿಲ್ಲಿಂಗ್ಸ್, ಅನುಕುಲ್ ರಾಯ್, ರಸಿಖ್ ಸಲಾಮ್, ಅಭಿಜಿತ್ ಸಿಂಗ್ , ರಮೇಶ್ ಕುಮಾರ್, ಅಶೋಕ್ ಶರ್ಮಾ, ಟಿಮ್ ಸೌಥಿ, ಆರೋನ್ ಫಿಂಚ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಬಿ ಇಂದ್ರಜಿತ್, ಚಾಮಿಕಾ ಕರುಣಾರತ್ನೆ.
ಇದನ್ನೂ ಓದಿ: Harshal Patel: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಹರ್ಷಲ್ ಪಟೇಲ್
ಇದನ್ನೂ ಓದಿ: IPL 2022: ವನಿಂದು ಹಸರಂಗ ವಿಭಿನ್ನ ಸಂಭ್ರಮಕ್ಕೆ ಇದುವೇ ಕಾರಣ..!
Published On - 7:45 pm, Thu, 31 March 22