- Kannada News Photo gallery Cricket photos Harshal Patel becomes second bowler in IPL history to bowl two maidens in a match
Harshal Patel: ಭರ್ಜರಿ ಬೌಲಿಂಗ್ ಮೂಲಕ ದಾಖಲೆ ಬರೆದ ಹರ್ಷಲ್ ಪಟೇಲ್
IPL 2022 RCB: ಆರ್ಸಿಬಿ ಬೌಲರ್ಗಳ ಈ ದಾಖಲೆಯ ಮೇಡನ್ ಓವರ್ಗಳು ಮೂಡಿ ಬಂದಿರುವುದು ಕೆಕೆಆರ್ ವಿರುದ್ದ ಎಂಬುದು ಮತ್ತೊಂದು ವಿಶೇಷ.
Updated on: Mar 31, 2022 | 2:58 PM

ಐಪಿಎಲ್ನ 6ನೇ ಪಂದ್ಯದಲ್ಲಿ ಆರ್ಸಿಬಿ ವೇಗಿ ಹರ್ಷಲ್ ಪಟೇಲ್ ಭರ್ಜರಿ ದಾಖಲೆ ಬರೆದಿದ್ದಾರೆ. ಕೆಕೆಆರ್ ವಿರುದ್ದದ ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 11 ರನ್ ನೀಡಿ 2 ವಿಕೆಟ್ ಪಡೆದಿದ್ದರು.

ವಿಶೇಷ ಎಂದರೆ 12ನೇ ಓವರ್ನಲ್ಲಿ ಬೌಲಿಂಗ್ ಆರಂಭಿಸಿದ್ದ ಪಟೇಲ್ ಆ ಓವರ್ ಅನ್ನು ಮೇಡನ್ ಮಾಡಿದ್ದರು. ಅಲ್ಲದೆ 14ನೇ ಓವರ್ ಅನ್ನು ಕೂಡ ಮೇಡನ್ ಮಾಡಿದ್ದರು. ಅಂದರೆ ಮೊದಲೆರಡು ಓವರ್ಗಳನ್ನು ಮೇಡನ್ ಮಾಡುವ ಮೂಲಕ ಹರ್ಷಲ್ ಪಟೇಲ್ ವಿಶೇಷ ದಾಖಲೆ ಬರೆದರು.

ಈ ಮೂಲಕ ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮೇಡನ್ ಓವರ್ ಮಾಡಿದ 2ನೇ ಬೌಲರ್ ಎಂಬ ದಾಖಲೆ ನಿರ್ಮಿಸಿದರು. ಅದು ಕೂಡ ಆರ್ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಅಂದರೆ ಸಿರಾಜ್ 2020 ರಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮೇಡನ್ ಓವರ್ ಮಾಡುವ ಮೂಲಕ ಐಪಿಎಲ್ನಲ್ಲಿ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ ಕೂಡ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಆರ್ಸಿಬಿ ಬೌಲರ್ಗಳ ಈ ದಾಖಲೆಯ ಮೇಡನ್ ಓವರ್ಗಳು ಮೂಡಿ ಬಂದಿರುವುದು ಕೆಕೆಆರ್ ವಿರುದ್ದ ಎಂಬುದು ಮತ್ತೊಂದು ವಿಶೇಷ. 2020 ರಲ್ಲಿ ಸಿರಾಜ್ ಕೂಡ ಕೆಕೆಆರ್ ವಿರುದ್ದವೇ ಈ ದಾಖಲೆ ಬರೆದಿದ್ದರು. ಇದೀಗ ಹರ್ಷಲ್ ಪಟೇಲ್ ಕೂಡ ಕೆಕೆಆರ್ ವಿರುದ್ದವೇ ಈ ದಾಖಲೆ ನಿರ್ಮಿಸಿದ್ದಾರೆ.









