Updated on: Mar 31, 2022 | 2:41 PM
ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ವನಿಂದು ಹಸರಂಗ ಎಂದರೆ ತಪ್ಪಾಗಲಾರದರು. ಏಕೆಂದರೆ ಈ ಪಂದ್ಯದಲ್ಲಿ ಹಸರಂಗ ಭರ್ಜರಿ ಬೌಲಿಂಗ್ ಮಾಡಿದ್ದರು.
4 ಓವರ್ ಎಸೆದಿದ್ದ ಹಸರಂಗ ನೀಡಿದ್ದು ಕೇವಲ 20 ರನ್ ಮಾತ್ರ. ಹಾಗೆಯೇ 4 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದರು. ವಿಶೇಷ ಎಂದರೆ ಪ್ರತಿ ವಿಕೆಟ್ ಸಿಕ್ಕಾಗಲೂ ಹಸರಂಗ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ್ದರು.
ವಿಕೆಟ್ ಸಿಗುತ್ತಿದ್ದಂತೆ ಕೈ ಮೇಲೆತ್ತಿ ಬೆರಳುಗಳನ್ನು ತೋರಿಸುತ್ತಾ ಹಸರಂಗ ಸಂಭ್ರಮಿಸಿದ್ದರು. ಹಸರಂಗ ಹೀಗೆ ಸೆಲೆಬ್ರೇಟ್ ಮಾಡಲು ಕಾರಣ ಖ್ಯಾತ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್. ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್ ಗೋಲ್ ಹೊಡೆದ ಬಳಿಕ ಇದೇ ರೀತಿಯಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದರು.
ಹ್ಯಾಂಗ್ ಲೂಸ್ ಎಂದು ಕರೆಯುವ ಇದೇ ಸ್ಟೈಲ್ ಅನ್ನೇ ವನಿಂದು ಹಸರಂಗ ಕೂಡ ಮಾಡಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ವನಿಂದು ಹಸರಂಗ ಅವರ ಫೇವರೇಟ್ ಫುಟ್ಬಾಲ್ ಆಟಗಾರ ಕೂಡ ನೇಮರ್. ಹೀಗಾಗಿ ವಿಕೆಟ್ ಸಿಕ್ಕಾಗ ನೇಮರ್ ಅವರಂತೆ ಸಂಭ್ರಮಿಸಿದ್ದಾರೆ.
ಒಟ್ಟಿನಲ್ಲಿ ಇದೀಗ 4 ವಿಕೆಟ್ ಉರುಳಿಸುವ ಮೂಲಕ ವನಿಂದು ಹಸರಂಗ ಹೊಸ ಸ್ಟ್ರೈಲ್ ಸೆಲೆಬ್ರೇಷನ್ ಮಾಡಿ ವೈರಲ್ ಆಗಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಕೂಡ ಪಡೆದಿದ್ದಾರೆ.