ಇನ್ನೂ ಸ್ವೀಪರ್ ಆಗಿಯೇ ಕೆಲಸ ಮಾಡುತ್ತಿದ್ದಾರೆ ಪಂಜಾಬ್ ಮುಖ್ಯಮಂತ್ರಿಯನ್ನು ಸೋಲಿಸಿದ ಆಪ್ ಶಾಸಕನ ಅಮ್ಮ
ಪಕ್ಷದ ಚಿಹ್ನೆ ಪೊರಕೆಯಾಗಿರುವ ಎಎಪಿ ಅಭ್ಯರ್ಥಿಯಾಗಿ ತನ್ನ ಪುತ್ರನ ಗೆಲುವಿನಿಂದ ಸಂತೋಷಗೊಂಡಿರುವ ಕೌರ್, 'ಜಾಡು' (ಪೊರಕೆ)ನನ್ನ ಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.
ಬರ್ನಾಲಾ (ಪಂಜಾಬ್): ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ(Punjab Assembly elections 2022) ತಮ್ಮ ಮಗ ಗೆದ್ದ ನಂತರವೂ ಆಮ್ ಆದ್ಮಿ ಪಕ್ಷದ (Aam Admi Party) ಶಾಸಕ ಲಾಭ್ ಸಿಂಗ್ ಉಗೋಕೆ (Labh Singh Ugoke)ಅವರ ತಾಯಿ ಬಲದೇವ್ ಕೌರ್ ಅವರು ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ. ನಿರ್ಗಮಿತ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಭದೌರ್ ಕ್ಷೇತ್ರದಿಂದ 37,550 ಮತಗಳ ಅಂತರದಿಂದ ಸೋಲಿಸಿದ ಉಗೋಕೆ ಅವರು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. “ನಾವು ಯಾವಾಗಲೂ ಹಣ ಸಂಪಾದಿಸಲು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನನ್ನಮಗ ಶಾಸಕನಾಗಿದ್ದರೂ ನಾನು ಶಾಲೆಯಲ್ಲಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ” ಎಂದು ಕೌರ್ ಹೇಳಿದ್ದಾರೆ. ಪಕ್ಷದ ಚಿಹ್ನೆ ಪೊರಕೆಯಾಗಿರುವ ಎಎಪಿ ಅಭ್ಯರ್ಥಿಯಾಗಿ ತನ್ನ ಪುತ್ರನ ಗೆಲುವಿನಿಂದ ಸಂತೋಷಗೊಂಡಿರುವ ಕೌರ್, ‘ಜಾಡು’ (ಪೊರಕೆ)ನನ್ನ ಜೀವನದ ಪ್ರಮುಖ ಭಾಗವಾಗಿದೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದರೂ, ನನ್ನ ಮಗ ಗೆಲ್ಲುತ್ತಾನೆ ಎಂದು ನಾವು ವಿಶ್ವಾಸ ಹೊಂದಿದ್ದೆವು ಎಂದು ಅವರು ಹೇಳಿದರು. ಉಗೋಕೆ ಅದೇ ಶಾಲೆಯಲ್ಲಿ ಓದಿ ಅನೇಕ ಪ್ರಶಸ್ತಿಗಳನ್ನು ತಂದಿದ್ದಾರೆ ಎಂದು ಶಾಲೆಯ ಪ್ರಿನ್ಸಿಪಾಲ್ ಅಮೃತ್ ಪಾಲ್ ಕೌರ್ ಎಎನ್‌ಐಗೆ ತಿಳಿಸಿದ್ದಾರೆ. “ಲಾಭ್ ಸಿಂಗ್ ಅವರ ತಾಯಿ ಬಹಳ ಸಮಯದಿಂದ ಈ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಂಗ್ ಕೂಡ ಈ ಶಾಲೆಯಲ್ಲಿ ಓದಿದ್ದಾರೆ. ಅವರು ತಮ್ಮ ಗ್ರಾಮ ಮತ್ತು ಶಾಲೆಗೆ ಅನೇಕ ಪ್ರಶಸ್ತಿಗಳನ್ನು ತಂದಿದ್ದಾರೆ. ಅವರ ಅಮ್ಮ ಶಾಲೆಯಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂದು ಎಂದು ಅಮೃತ್ ಪಾಲ್ ಕೌರ್ ಹೇಳಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಸಿಂಗ್ ಅವರ ತಂದೆ ದರ್ಶನ್ ಸಿಂಗ್, ಕುಟುಂಬವು ಮೊದಲಿನಂತೆಯೇ ಬದುಕುತ್ತದೆ ಎಂದು ಹೇಳಿದರು. ತನ್ನ ಮಗ ಕುಟುಂಬದ ಬದಲು ಜನರ ಕಲ್ಯಾಣದತ್ತ ಗಮನ ಹರಿಸಬೇಕೆಂದು ಅವರು ಬಯಸಿದ್ದಾರೆ.
Punjab | Baldev Kaur, mother of AAP’s Labh Singh, who defeated Congress’ Charanjit S Channi from Bhadaur in Barnala, continues to work as a sweeper at a govt school in Ugoke village. She says,” ‘Jhadu’ is an important part of my life. I’ll continue to do my duty at the school.” pic.twitter.com/OuX5kIPLFr
— ANI (@ANI) March 13, 2022
“ಗ್ರಾಮದ ಜನರು ಅವರನ್ನು ಆಯ್ಕೆ ಮಾಡಿದ್ದಾರೆ. ಅವರು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ಮೊದಲಿನಂತೆಯೇ ನಾವು ಬದುಕುತ್ತೇವೆ” ಎಂದು ದರ್ಶನ್ ಸಿಂಗ್ ಹೇಳಿದರು. ಉಗೋಕೆ 2013 ರಲ್ಲಿ ಎಎಪಿಗೆ ಸೇರಿದರು ಮತ್ತು ಪಕ್ಷದ ಶ್ರೇಣಿಯಲ್ಲಿ ಬೇಗನೆ ಮೇಲಕ್ಕೆ ಏರಿದರು. ಅವರು 2017 ರಲ್ಲೂ ಭದೌರ್ ಕ್ಷೇತ್ರದಿಂದ ಎಎಪಿ ಟಿಕೆಟ್ ಕೇಳಿದ್ದರು ಆದರೆ ಪಕ್ಷವು ಬೇರೆಯದೇ ನಿರ್ಧಾರ ತೆಗೆದುಕೊಂಡಿತ್ತು. ನಮ್ಮ ಚಿರಪರಿಚಿತರಾದ ಈಗ ಎಂಎಲ್ ಆಗಿದ್ದಾರೆ ಎನ್ನುವುದನ್ನು ಈಗಲೂ ನಂಬಲಾಗುತ್ತಿಲ್ಲ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತಿದ್ದರು, ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಎಲ್ಎ ಆಗುತ್ತೇನೆ ಎಂದು ನಾವು ಅಂದುಕೊಂಡಿರಲಿಲ್ಲ.ನಮಗೆ ಖುಷಿಯಾಗಿದೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು. ಪಂಜಾಬ್ ಚುನಾವಣೆಯಲ್ಲಿ ಎಎಪಿ ಪ್ರಚಂಡ ವಿಜಯವನ್ನು ಗಳಿಸಿದ್ದು . 117 ಸದಸ್ಯ ಬಲದ ವಿಧಾನಸಭೆಯಲ್ಲಿ 92 ಅಸೆಂಬ್ಲಿ ಸ್ಥಾನಗಳನ್ನು ಗೆದ್ದಿತು. ಇಲ್ಲಿ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದೆ.
ಇದನ್ನೂ ಓದಿ: ಭಾರತದಲ್ಲಿ ಮಿಲಿಟರಿ ಸನ್ನದ್ಧತೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ; ಪ್ರಮುಖ ವಿಷಯಗಳ ಚರ್ಚೆ