ಡಿಸಿಪಿ ಕಾರಿಗೆ ಢಿಕ್ಕಿ ಹೊಡೆದ ಪ್ರಕರಣ: ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾಗೆ ಜಾಮೀನು

ಫೆಬ್ರವರಿ 22 ರಂದು ಈ ಘಟನೆ ನಡೆದಿದ್ದು, ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಅವರ ಬಳಿ ಚಾಲಕನಾಗಿ ನಿಯೋಜಿಸಲಾದ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಡಿಸಿಪಿ ಕಾರಿಗೆ ಢಿಕ್ಕಿ ಹೊಡೆದ ಪ್ರಕರಣ: ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾಗೆ ಜಾಮೀನು
ವಿಜಯ್ ಶೇಖರ್ ಶರ್ಮಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 13, 2022 | 2:46 PM

ದೆಹಲಿ: ಕಳೆದ ತಿಂಗಳು ಡಿಸಿಪಿ ಕಾರಿಗೆ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಪೇಟಿಎಂ (Paytm) ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಶರ್ಮಾ (Vijay Shekhar Sharma) ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಶರ್ಮಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಶರ್ಮಾ ವಿರುದ್ಧ ಐಪಿಸಿ ಸೆಕ್ಷನ್ 279 ( ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನ ಪ್ರಕಾರ, ಶರ್ಮಾ ಜಾಗ್ವಾರ್ ಲ್ಯಾಂಡ್ ರೋವರ್ (Jaguar Land Rover)ಅವರು ಓಡಿಸುತ್ತಿದ್ದರು ಎಂದು ಹೇಳಲಾಗಿದ್ದು, ಅರಬಿಂದೋ ಮಾರ್ಗದಲ್ಲಿರುವ ಮದರ್ ಇಂಟರ್‌ನ್ಯಾಶನಲ್ ಸ್ಕೂಲ್ ಹೊರಗೆ ಡಿಸಿಪಿ (ದಕ್ಷಿಣ ಜಿಲ್ಲೆ) ಅವರ ವಾಹನಕ್ಕೆ ಶರ್ಮಾ ಅವರ ವಾಹನ ಢಿಕ್ಕಿ ಹೊಡೆದಿದೆ.  ಫೆಬ್ರವರಿ 22 ರಂದು ಈ ಘಟನೆ ನಡೆದಿದ್ದು, ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಅವರ ಬಳಿ ಚಾಲಕನಾಗಿ ನಿಯೋಜಿಸಲಾದ ಕಾನ್‌ಸ್ಟೆಬಲ್ ದೀಪಕ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.  ಪೊಲೀಸರು ಶರ್ಮಾರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಖಚಿತಪಡಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಡಿಸಿಪಿ ಜೈಕರ್ ನಿರಾಕರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.  ಕಾನ್‌ಸ್ಟೆಬಲ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ಅವರನ್ನು ಡಿಸಿಪಿ (ಜೈಕರ್) ಅವರ ಚಾಲಕನಾಗಿ ತನ್ನನು ನಿಯೋಜಿಸಲಾಗಿದ್ದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಮ್ಮ ವಾಹನವನ್ನು ಪೆಟ್ರೋಲ್ ಪಂಪ್‌ಗೆ ಕೊಂಡೊಯ್ದಿದ್ದೆ ಎಂದಿದ್ದಾರೆ. ಕಾನ್ಸ್‌ಟೇಬಲ್ ಪ್ರದೀಪ್ ಎಂಬ ಆಪರೇಟರ್ ನನ್ನೊಂದಿಗಿದ್ದರು. ನಾವು ಮದರ್ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ತಲುಪಿದಾಗ ಅಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. ಜನರು ತಮ್ಮ ಮಕ್ಕಳನ್ನು (ಶಾಲೆಗೆ) ಬಿಡುತ್ತಿರುವುದನ್ನು ನಾನು ನೋಡಿದೆ. ಟ್ರಾಫಿಕ್ ಕ್ಲಿಯರ್ ಮಾಡಲು ಪ್ರದೀಪ್ ಅವರಲ್ಲಿ ಕೆಳಗಿಳಿಯಲು ಹೇಳಿ ನಾನು ವೇಗವನ್ನು ಕಡಿಮೆ ಮಾಡಿದೆ” ಎಂದು ಅವರು ಹೇಳಿದರು. ನಾನು ಕಾಯುತ್ತಿದ್ದಾಗ ಆ ಕಡೆಯಿಂದ ಕಾರೊಂದು ವೇಗವಾಗಿ ಬಂದು ನನ್ನ ವಾಹನಕ್ಕೆ ಗುದ್ದಿತು. ಹರ್ಯಾಣ ನೋಂದಣಿ ನಂಬರ್ ಪ್ಲೇಟ್ ಇದ್ದು, ಆ ವ್ಯಕ್ತಿ ಅಲ್ಲಿಂದ ವಾಹನವನ್ನು ಮತ್ತಷ್ಟು ರಭಸದಲ್ಲಿ ಚಾಲನೆ ಮಾಡಿ ತಪ್ಪಿಸಿಕೊಂಡಿದ್ದಾರ. ನಮ್ಮ ವಾಹನಕ್ಕೆ ಹಾನಿಯಾಗಿದೆ. ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಲು ಪ್ರದೀಪ್ ನನ್ನಲ್ಲಿ ಹೇಳಿದರು. ನಾವು ನಮ್ಮ ಡಿಸಿಪಿಗೆ ತಿಳಿಸಿದ್ದು ಅವರು ಕಾರಿನ ಬಗ್ಗೆ ಕೇಳಿದರು. ನಾವು ನಂಬರ್ ನೋಟ್ ಮಾಡಿದ್ದೇವೆ ಎಂದು ಹೇಳಿದ್ದೇವೆ ಮತ್ತು ನಂತರ ನಾವು ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಕುಮಾರ್ ಅವರು “ಚಾಲಕನನ್ನು ಗುರುತಿಸಬಹುದು” ಎಂದು ಹೇಳಿದ್ದಾರೆ.

ಸಾರಿಗೆ ಇಲಾಖೆಯ ಸಹಾಯದಿಂದ ಪೊಲೀಸರು ಕಾರನ್ನು ಪತ್ತೆಹಚ್ಚಿದರು ಮತ್ತು ಅದು ಗುರ್ಗಾಂವ್ ಮೂಲದ ಕಂಪನಿಯಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಪತ್ತೆ ಹಚ್ಚಿದ್ದಾರೆ.

ಗ್ರೇಟರ್ ಕೈಲಾಶ್-II ನಿವಾಸಿ ಶರ್ಮಾ ಅವರಿಗೆ ವಾಹನವನ್ನು ನೀಡಿರುವುದಾಗಿ ಕಂಪನಿಯು ಪೊಲೀಸರಿಗೆ ತಿಳಿಸಿದೆ. ಶರ್ಮಾ ಅವರನ್ನು ಮಾಳವೀಯ ನಗರ ಠಾಣೆಗೆ ಕರೆಸಲಾಯಿತು, ಅಲ್ಲಿ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಫೋನ್ ಕರೆಗಳು, ಪಠ್ಯ ಸಂದೇಶಗಳು ಮತ್ತು ಇಮೇಲ್‌ಗಳ ಮೂಲಕ ಶರ್ಮಾ ಅವರನ್ನು ಸಂಪರ್ಕಿಸಲು ಹಲವಾರು ಬಾರಿ ಪ್ರಯತ್ನಗಳು ವಿಫಲವಾಗಿವೆ. ಪೇಟಿಎಂ ವಕ್ತಾರರನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.  ಅಪಘಾತದ ಬಳಿಕ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಂಗಾಳ ಉಪಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಲಿದ್ದಾರೆ ಶತ್ರುಘ್ನ ಸಿನ್ಹಾ, ಬಾಬುಲ್ ಸುಪ್ರಿಯೋ