Video: ಹಿಮವೀರರ ಜೋಶ್; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು
ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್ ಜಾಕೆಟ್ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದೆ.
ಹಿಮವೀರರು ಎಂದೇ ಕರೆಯಲ್ಪಡುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸರು, (ITBP), ಹಿಮಾಚ್ಛಾದಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರ ವಿವಿಧ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ತಾವಿದ್ದಲ್ಲಿ ಕರ್ತವ್ಯ ನಿಭಾಯಿಸುತ್ತ, ಅಲ್ಲಿಯೇ ಆಟ, ಮನರಂಜನೆಯಲ್ಲಿ ತೊಡಗಿಕೊಳ್ಳುತ್ತ, ಸ್ವಾತಂತ್ರ್ಯೋತ್ಸವ, ಆರ್ಮಿ ಡೇ ಇತರ ವಿಶೇಷ ದಿನಗಳನ್ನು ಖುಷಿಯಿಂದ ಆಚರಿಸುವ ಈ ಹಿಮವೀರರ ಇನ್ನೊಂದು ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತಣ್ಣನೆಯ, ಶ್ವೇತಬಣ್ಣದಿಂದ ಕಂಗೊಳಿಸುತ್ತಿರುವ ಹಿಮದಲ್ಲಿ, ಕೊರೆವ ಚಳಿಯಲ್ಲಿ 15-20 ಜನಯೋಧರು ಸೇರಿ ಕಬಡ್ಡಿ ಆಡಿದ್ದಾರೆ. ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆಯೂ ಹಂಚಿಕೊಂಡಿದೆ. ಹಾಗೇ ನೆಟ್ಟಿಗರೂ ತುಂಬ ಖುಷಿಯಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್ ಜಾಕೆಟ್ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದೆ. ಕೆಲವು ವಾರಗಳ ಹಿಮದೆ ಐಟಿಬಿಪಿ ಯೋಧರು ಹಿಮದಲ್ಲಿಯೇ ವಾಲಿಬಾಲ್ ಆಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಇವರು ಭಾರತ-ಚೀನಾ ಗಡಿಯಲ್ಲಿ, 15 ಸಾವಿರ ಅಡಿ ಎತ್ತರದಲ್ಲಿ -20 ಡಿಗ್ರಿ ಸೆಲ್ಸಿಯಸ್ ಚಳಿಯಲ್ಲಿ ವಾಲಿಬಾಲ್ ಆಡಿದ್ದರು. ಪ್ರಸ್ತುತ ಕಬಡ್ಡಿ ನೋಡಿದ ನೆಟ್ಟಿಗರು ಯೋಧರಿಗೊಂದು ಸಲಾಂ ಹೇಳಿದ್ದಾರೆ. ಅಂದಹಾಗೆ, ಇದೇ ಚಳಿಯಲ್ಲೇ ಅವರಿಗೆ ಕಠಿಣ ತರಬೇತಿಗಳನ್ನೂ ನೀಡಲಾಗುತ್ತದೆ. ಅವರ ಜೀವನವೇ ಈ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಶತ್ರುಗಳ ವಿರುದ್ಧ ದೇಶವನ್ನು ಕಾಪಾಡಲು ಅವರು ಸದಾ ಮೈಮೇಲೆ ಅಪಾಯ ಎಳೆದುಕೊಂಡೇ ಬದುಕುತ್ತಿರುತ್ತಾರೆ.
#WATCH ‘Himveers’ of Indo-Tibetan Border Police (ITBP) play Kabaddi in the snow in the high Himalayas in Himachal Pradesh pic.twitter.com/Ir146AhWTv
— ANI (@ANI) March 13, 2022
Published On - 4:09 pm, Sun, 13 March 22