AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pat Cummins: ಮೊದಲ ಪಂದ್ಯದಲ್ಲೇ ಕಮಿನ್ಸ್​ ಸ್ಫೋಟಕ ಆಟ: ಕೇವಲ 14 ಎಸೆತಗಳಲ್ಲಿ ಅರ್ಧಶತಕದ ದಾಖಲೆ

MI vs KKR, IPL 2022: ಐಪಿಎಲ್ 2022ರ ಮೊದಲ ಪಂದ್ಯವಾಡಿದ ಪ್ಯಾಟ್ ಕಮಿನ್ಸ್ ಮುಂಬೈ ಇಂಡಿಯನ್ಸ್ ಬೌಲರ್​​ಗಳ ಬೆಂಡೆತ್ತಿ ಸ್ಫೋಟಕ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು. 5 ವಿಕೆಟ್​​ಗಳ ಭರ್ಜರಿ ಜಯದೊಂದಿಗೆ ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Pat Cummins: ಮೊದಲ ಪಂದ್ಯದಲ್ಲೇ ಕಮಿನ್ಸ್​ ಸ್ಫೋಟಕ ಆಟ: ಕೇವಲ 14 ಎಸೆತಗಳಲ್ಲಿ ಅರ್ಧಶತಕದ ದಾಖಲೆ
Pat Cummins MI vs KKR
TV9 Web
| Updated By: Vinay Bhat|

Updated on: Apr 07, 2022 | 7:45 AM

Share

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣಲ್ಲಿ ನಡೆದ ಐಪಿಎಲ್ 2022ರ (IPL 2022) 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್​ (MI vs KKR) ತಂಡ 5 ವಿಕೆಟ್​​ಗಳ ಅಮೋಘ ಗೆಲುವು ಕಂಡಿದೆ. ಈ ಸೀಸನ್​ನ ಮೊದಲ ಪಂದ್ಯವಾಡಿದ ಪ್ಯಾಟ್ ಕಮಿನ್ಸ್ (Pat Cummins) ಎಮ್​ಐ ಬೌಲರ್​​ಗಳ ಬೆಂಡೆತ್ತಿ ಸ್ಫೋಟಕ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದಿಟ್ಟರು. 5 ವಿಕೆಟ್​​ಗಳ ಭರ್ಜರಿ ಜಯದೊಂದಿಗೆ ಶ್ರೇಯಸ್ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು 6 ಅಂಕದೊಂದಿಗೆ ಟಾಪ್​​ನಲ್ಲಿದೆ. ಇತ್ತ ಹ್ಯಾಟ್ರಿಕ್ ಸೋಲಿನಿಂದಾಗಿ ರೋಹಿತ್ ಪಡೆ 9ನೇ ಸ್ಥಾನದಲ್ಲಿದೆ. ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗದಲ್ಲಿ ಮತ್ತೆ ಕಳಪೆ ಪ್ರದರ್ಶನ ತೋರಿದ ಮುಂಬೈ ಈ ಸೀಸನ್​ ಅನ್ನು ಕೆಟ್ಟದಾಗಿ ಆರಂಭಿಸಿದೆ.

ಟಾಸ್ ಗೆದ್ದ ಕೆಕೆಆರ್ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆದರೆ, ಮುಂಬೈ ಈ ಬಾರಿಕೂಡ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಇಶಾನ್ ಕಿಶನ್ ಜೊತೆ ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮೊದಲು ವಿಕೆಟ್ ಒಪ್ಪಿಸಿದರು. ಉಮೇಶ್ ಯಾದವ್ ಹಾಕಿದ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ಮಾತ್ರ ಗಳಿಸಲು ಅವರಿಗೆ ಸಾಧ್ಯವಾಯಿತು. ಉಮೇಶ್‌ ಯಾದವ್ ಹಾಕಿದ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಶಾರ್ಟ್‌ ಎಸೆತವನ್ನು ಪುಲ್ ಮಾಡಲು ಪ್ರಯತ್ನಿಸಿದ ರೋಹಿತ್ ಅವರ ಬ್ಯಾಟಿನ ಅಂಚಿಗೆ ಸೋಕಿದ ಚೆಂಡು ಫೈನ್ ಲೆಗ್‌ನತ್ತ ಚಿಮ್ಮಿತು. ವಿಕೆಟ್ ಕೀಪರ್ ಸ್ಯಾಮ್ ಬಿಲಿಂಗ್ಸ್ ಸುಲಭ ಕ್ಯಾಚ್ ಪಡೆದರು. ನಂತರ ಇಶಾನ್ ಮತ್ತು ಡಿವಾಲ್ಡ್ ಬ್ರೆವಿಸ್ ನಿಧಾನಕ್ಕೆ ರನ್ ಗತಿ ಏರಿಸಲು ಹೊರಟರಾದರೂ ಸಂಪೂರ್ಣ ಯಶಸ್ಸು ಸಿಗಲಿಲ್ಲ.

ವರುಣ್ ಎಸೆತದಲ್ಲಿ ಮಿಂಚಿನ ಸ್ಟಂಪಿಂಗ್ ಮಾಡಿದ ಬಿಲಿಂಗ್ಸ್, ಬ್ರೆವಿಸ್‌(29) ಅವರನ್ನು ವಾಪಸ್ ಕಳುಹಿಸಿದರು. ಇದರ ಬೆನ್ನಲ್ಲೇ 21 ಎಸೆತಗಳಲ್ಲಿ 14 ರನ್ ಗಳಿಸಿ ಕಿಶನ್ ಕೂಡ ಪೆವಿಲಿಯನ್ ಸೇರಿಕೊಂಡರು.ಈ ಸಂದರ್ಭ ತಂಡಕ್ಕೆ ಸೂರ್ಯಕುಮಾರ್ ಯಾದವ್ ಆಸರೆಯಾದರು. ಇವರಿಗೆ ತಿಲಕ್ ವರ್ಮಾ ಉತ್ತಮ ಬೆಂಬಲ ಲಭಿಸಿತು. ಇಬ್ಬರೂ 83 ರನ್‌ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಯಾದವ್ 36 ಎಸೆತಗಳಲ್ಲಿ 52 ಹಾಘೂ ತಿಲಕ್ ಅಜೇಯ 38 ರನ್ ಸಿಡಿಸಿದರು. ಕೊನೇ ಹಂತದಲ್ಲಿ ಕೀರನ್ ಪೊಲಾರ್ಡ್ (22*, 5 ಎಸೆತ) ಬೌಂಡರಿ ಭರ್ಜರಿ ಸಿಕ್ಸರ್‌ಗಳ ಮೂಲಕ ಮಿಂಚಿದರು. ಅಂತಿಮವಾಗಿ ಮುಂಬೈ 20 ಓವರ್​​ಗೆ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.

ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ 16 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ ಚಚ್ಚಿತು. ಕೆಕೆಆರ್ ಇನಿಂಗ್ಸ್‌ನಲ್ಲಿ ವೆಂಕಟೇಶ್‌ ಐಯ್ಯರ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅಬ್ಬರದ ಆಟವಾಡಿದರು. ಐಯ್ಯರ್‌ 41 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 50 ರನ್‌ ಚಚ್ಚಿದರು. ಕಮಿನ್ಸ್‌ ಕೇವಲ 15 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ ನೆರವಿನಿಂದ 56 ರನ್‌ ಚಚ್ಚಿದರು. ಇವರಿಬ್ಬರ ಮುಂದೆ ಮುಂಬೈ ಬೌಲಿಂಗ್‌ ಪೂರ್ಣ ಸೊರಗಿತು. ಶ್ರೇಯಸ್ ಪಡೆ 5 ವಿಕೆಟ್​ಗಳ ಅಮೋಘ ಗೆಲುವು ಕಂಡಿತು.

ಕಮಿನ್ಸ್ ದಾಖಲೆಯ ಅರ್ಧಶತಕ:

ಮುಂಬೈ ವಿರುದ್ಧ ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಅಬ್ಬರಿಸಿದ ಪ್ಯಾಟ್‌ ಕಮಿನ್ಸ್, ಐಪಿಎಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿ ಕೆ.ಎಲ್. ರಾಹುಲ್‌ ದಾಖಲೆಯನ್ನು ಸರಿಗಟ್ಟಿದ್ದಾರೆ. 14 ಬಾಲ್‌ಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ ನೆರವಿನಿಂದ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಈ ಹಿಂದೆ 2018ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕನ್ನಡಿಗ ಕೆ.ಎಲ್. ರಾಹುಲ್‌, 14 ಬಾಲ್‌ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದೀಗ ಪ್ಯಾಟ್‌ ಕಮ್ಮಿನ್ಸ್‌, 14 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿ ಕೆ.ಎಲ್. ರಾಹುಲ್‌ ದಾಖಲೆ ಸಮಗೊಳಿಸಿದರು.

Andre Russell: ಒಂದೇ ತಂಡದಲ್ಲಿ ಆಂಡ್ರೆ ರಸೆಲ್, ಕೀರನ್ ಪೊಲಾರ್ಡ್​

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ