Andre Russell: ಒಂದೇ ತಂಡದಲ್ಲಿ ಆಂಡ್ರೆ ರಸೆಲ್, ಕೀರನ್ ಪೊಲಾರ್ಡ್​

CPL 2022: ವಿಶೇಷ ಎಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ನಾಯಕ ಕೀರನ್ ಪೊಲಾರ್ಡ್, ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಅವರನ್ನು ಉಳಿಸಿಕೊಂಡಿದೆ.

Andre Russell: ಒಂದೇ ತಂಡದಲ್ಲಿ ಆಂಡ್ರೆ ರಸೆಲ್, ಕೀರನ್ ಪೊಲಾರ್ಡ್​
andre russell and kieron pollard
Follow us
TV9 Web
| Updated By: ಝಾಹಿರ್ ಯೂಸುಫ್

Updated on: Apr 06, 2022 | 7:26 PM

ಒಂದೆಡೆ ಐಪಿಎಲ್ (IPL 2022) ಸೀಸನ್ 15 ರಂಗೇರುತ್ತಿದ್ದರೆ ಮತ್ತೊಂದೆಡೆ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2022) ಸಿದ್ದತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಆರು ಫ್ರಾಂಚೈಸಿಗಳು ಗರಿಷ್ಠ ಏಳು ಆಟಗಾರರನ್ನು ಒಳಗೊಂಡಿರುವ ಡ್ರಾಫ್ಟ್ ಹಾಗೂ ಹೊಸ ಆಯ್ಕೆಯ ಆಟಗಾರರನ್ನು ಘೋಷಿಸಿದೆ. ಆಗಸ್ಟ್ 30 ರಿಂದ ಶುರುವಾಗಲಿರುವ ಸಿಪಿಎಲ್​ 2022 ಗಾಗಿ ಎರಡು ಡ್ರಾಫ್ಟ್ ವಿಂಡೋಗಳನ್ನು ಫ್ರಾಂಚೈಸಿಗಳಿಗೆ ನೀಡಲಾಗಿತ್ತು. ಮೊದಲ ವಿಂಡೋದಲ್ಲಿ, ಪ್ರತಿ ಫ್ರಾಂಚೈಸಿಯು ಐದು ಕೆರಿಬಿಯನ್ ಆಟಗಾರರನ್ನು ಗರಿಷ್ಠ ಸಂಬಳದ ಸ್ಥಾನಗಳ ಮೂಲಕ ಉಳಿಸಿಕೊಳ್ಳಬಹುದು. ಇನ್ನು ಎರಡನೇ ವಿಂಡೋದಲ್ಲಿ ಇನ್ನೂ ಇಬ್ಬರು ಸ್ಥಳೀಯ ಆಟಗಾರರನ್ನು ಸಹಿ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಇದೀಗ 6 ತಂಡಗಳು ಡ್ರಾಫ್ಟ್ ಪ್ರಕ್ರಿಯೆಯನ್ನು ಮುಗಿಸಿದೆ.

ವಿಶೇಷ ಎಂದರೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ಟ್ರಿನ್‌ಬಾಗೊ ನೈಟ್ ರೈಡರ್ಸ್ (TKR) ನಾಯಕ ಕೀರನ್ ಪೊಲಾರ್ಡ್, ಸ್ಟಾರ್ ಸ್ಪಿನ್ನರ್ ಸುನಿಲ್ ನರೈನ್ ಅವರನ್ನು ಉಳಿಸಿಕೊಂಡಿದೆ. ಜೊತೆಗೆ ಪವರ್​ ಹಿಟ್ಟರ್​ಗಳಾದ ಆಂಡ್ರೆ ರಸೆಲ್ ಮತ್ತು ನಿಕೋಲಸ್ ಪೂರನ್‌ರನ್ನು ಹೊಸದಾಗಿ ಸಹಿ ಮಾಡಿಕೊಂಡಿದೆ. ಇನ್ನು ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಜಮೈಕಾ ತಲ್ಲವಾಸ್ ಹೊರತುಪಡಿಸಿ, ಉಳಿದ ಎಲ್ಲಾ ಫ್ರಾಂಚೈಸಿಗಳು ತಮ್ಮ ಸಂಪೂರ್ಣ ಡ್ರಾಫ್ಟ್ ​ ಕೋಟಾವನ್ನು ಬಳಸಿಕೊಂಡಿವೆ. ಹಾಗಿದ್ರೆ ಯಾವ ತಂಡದಲ್ಲಿ ಯಾರೆಲ್ಲಾ ಡ್ರಾಫ್ಟ್ ಆಗಿದ್ದಾರೆ ನೋಡೋಣ

ಡ್ರಾಫ್ಟ್ ಆಗಿರುವ ಆಟಗಾರರು:

ಟ್ರಿನ್‌ಬಾಗೊ ನೈಟ್ ರೈಡರ್ಸ್: ಕೀರನ್ ಪೊಲಾರ್ಡ್, ಆಂಡ್ರೆ ರಸೆಲ್, ಸುನಿಲ್ ನರೈನ್, ನಿಕೋಲಸ್ ಪೂರನ್, ಅಕಿಲ್ ಹೋಸೇನ್, ಜೇಡನ್ ಸೀಲ್ಸ್, ಟಿಯಾನ್ ವೆಬ್‌ಸ್ಟರ್

ಸೇಂಟ್ ಲೂಸಿಯಾ ಕಿಂಗ್ಸ್: ರೋಸ್ಟನ್ ಚೇಸ್, ಜಾನ್ಸನ್ ಚಾರ್ಲ್ಸ್, ಕೆಸ್ರಿಕ್ ವಿಲಿಯಮ್ಸ್, ಅಲ್ಜಾರಿ ಜೋಸೆಫ್, ಮಾರ್ಕ್ ಡೆಯಲ್, ಜೆವರ್ ರಾಯಲ್

ಜಮೈಕಾ ತಲ್ಲವಾಸ್: ರೋವ್ಮನ್ ಪೊವೆಲ್, ಫ್ಯಾಬಿಯನ್ ಅಲೆನ್, ಬ್ರಾಂಡನ್ ಕಿಂಗ್, ಕೆನ್ನಾರ್ ಲೆವಿಸ್, ಶಮರ್ ಬ್ರೂಕ್ಸ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್: ಡಿಜೆ ಬ್ರಾವೋ, ಡ್ಯಾರೆನ್ ಬ್ರಾವೋ, ಎವಿನ್ ಲೆವಿಸ್, ಆಂಡ್ರೆ ಫ್ಲೆಚರ್, ಶೆರ್ಫಾನ್ ರುದರ್ಫೋರ್ಡ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್

ಬಾರ್ಬಡೋಸ್ ರಾಯಲ್ಸ್: ಜೇಸನ್ ಹೋಲ್ಡರ್, ಒಬೆಡ್ ಮೆಕಾಯ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್ ಜೂನಿಯರ್, ಡೆವೊನ್ ಥಾಮಸ್, ಒಶಾನೆ ಥಾಮಸ್, ನಯೀಮ್ ಯಂಗ್

ಗಯಾನಾ ಅಮೆಜಾನ್ ವಾರಿಯರ್ಸ್: ಶಿಮ್ರಾನ್ ಹೆಟ್ಮೆಯರ್, ಓಡಿಯನ್ ಸ್ಮಿತ್, ರೊಮಾರಿಯೋ ಶೆಫರ್ಡ್, ಚಂದ್ರಪಾಲ್ ಹೇಮರಾಜ್, ಕೀಮೋ ಪಾಲ್, ಗುಡಾಕೇಶ್ ಮೋಟಿ

ಇದನ್ನೂ ಓದಿ: IPL 2022: ಐಪಿಎಲ್​ನ ಮೊದಲ ವಾರದಲ್ಲಿ ನಿರ್ಮಾಣವಾದ ದಾಖಲೆಗಳಿವು..!

ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್