IPL 2022: ಐಪಿಎಲ್​ನ ಮೊದಲ ವಾರದಲ್ಲಿ ನಿರ್ಮಾಣವಾದ ದಾಖಲೆಗಳಿವು..!

IPL 2022: ಐಪಿಎಲ್​ನ ಮೊದಲ ವಾರದಲ್ಲಿ ನಿರ್ಮಾಣವಾದ ದಾಖಲೆಗಳಿವು..!
IPL 2022

IPL 2022: ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ಐಪಿಎಲ್​ನಲ್ಲಿ ಸತತವಾಗಿ ಎರಡು ಮೇಡನ್‌ ಓವರ್​ಗಳನ್ನು ಎಸೆಯುವ ಮೂಲಕ ದಾಖಲೆ ಬರೆದಿದ್ದಾರೆ. ವಿಶೇಷ ಎಂದರೆ 2020 ರಲ್ಲಿ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು.

TV9kannada Web Team

| Edited By: Zahir PY

Apr 02, 2022 | 4:56 PM

ಐಪಿಎಲ್ ಸೀಸನ್ 15 (IPL 2022) ಶುರುವಾಗಿ ವಾರ ಕಳೆದಿವೆ. ಮೊದಲ ವಾರದಲ್ಲೇ ಎಲ್ಲಾ 10 ತಂಡಗಳು ಮೊದಲ ಪಂದ್ಯವನ್ನಾಡಿದೆ. ಅದರಂತೆ ಐದು ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ರೆ, ಇನ್ನುಳಿದ ತಂಡಗಳು ಸೋಲಿನೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಿದೆ. ಈಗಾಗಲೇ ಪರ್ಪಲ್​ ಕ್ಯಾಪ್, ಆರೆಂಜ್ ಕ್ಯಾಪ್​ಗಾಗಿ ಪೈಪೋಟಿಗಳು ಕಂಡು ಬರಲಾರಂಭಿಸಿದೆ. ಸದ್ಯ 8 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಬಳಿ ಪರ್ಪಲ್ ಕ್ಯಾಪ್ ಇದ್ದರೆ, ಆರೆಂಜ್ ಕ್ಯಾಪ್ ಆಂಡ್ರೆ ರಸೆಲ್ ಬಳಿ ಇದೆ. ಇನ್ನು ಮೊದಲ ವಾರದಲ್ಲೇ ಹಲವು ದಾಖಲೆಗಳು ಕೂಡ ನಿರ್ಮಾಣವಾಗಿದೆ. ಅದರಲ್ಲೂ ಕೆಲವು ಐಪಿಎಲ್​ನ ಸರ್ವಶ್ರೇಷ್ಠ ದಾಖಲೆಗಳು ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನ ಮೊದಲ ವಾರದಲ್ಲಿ ನಿರ್ಮಾಣವಾಗಿರುವ ದಾಖಲೆಗಳು ಯಾವುವು ಎಂದು ನೋಡುವುದಾದರೆ…

1- ಐಪಿಎಲ್​ನಲ್ಲಿ 200 ಪಂದ್ಯಗಳನ್ನಾಡಿ ನಾಯಕನಾದ ಮೊದಲ ಆಟಗಾರ ಎಂಬ ದಾಖಲೆಯನ್ನು ರವೀಂದ್ರ ಜಡೇಜಾ ನಿರ್ಮಿಸಿದ್ದಾರೆ. ಅಲ್ಲದೆ ಮೂಲಕ ಅತೀ ಹೆಚ್ಚು ಪಂದ್ಯವಾಡಿ ಆ ಬಳಿಕ ಐಪಿಎಲ್​ನಲ್ಲಿ ನಾಯಕತ್ವ ವಹಿಸಿದ ದಾಖಲೆ ಕೂಡ ಜಡೇಜಾ ಪಾಲಾಗಿದೆ.

2- ಕೆಕೆಆರ್​ ವಿರುದ್ದ ಅರ್ಧಶತಕ ಬಾರಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಅರ್ಧಶತಕ ಬಾರಿಸಿದ ಮೂರನೇ ಅತಿ ಹಿರಿಯ ಬ್ಯಾಟರ್ (40 ವರ್ಷ, 262 ದಿನಗಳು) ಎಂಬ ದಾಖಲೆ ಬರೆದಿದ್ದಾರೆ.

3- ಕೆಕೆಆರ್ ತಂಡವು ವಾಂಖೆಡೆ ಸ್ಟೇಡಿಯಂನಲ್ಲಿ 2ನೇ ಗೆಲುವು ದಾಖಲಿಸುವ ಮೂಲಕ ಗಮನ ಸೆಳೆದಿದೆ. ವಿಶೇಷ ಎಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಕೆಕೆಆರ್ 12 ಪಂದ್ಯಗಳನ್ನು ಆಡಿದ್ದು, ಗೆದ್ದಿದ್ದು ಕೇವಲ 2 ಬಾರಿ ಮಾತ್ರ.

4- ಮುಂಬೈ ಇಂಡಿಯನ್ಸ್​ 10ನೇ ಬಾರಿ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಸೋತು ಹೀನಾಯ ದಾಖಲೆ ಬರೆದಿದೆ.

5- ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್​ ವಿರುದ್ದದ ಪಂದ್ಯದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯುವ ಮೂಲಕ ದಾಖಲೆ ಬರೆದಿದೆ. ಇದು ಐಪಿಎಲ್​ನಲ್ಲಿ 2ನೇ ಬಾರಿಗೆ ನಡೆದಿದೆ. 2011 ರಲ್ಲಿ ಕೆಕೆಆರ್ ಸಿಎಸ್​ಕೆ ವಿರುದ್ದ ಇಬ್ಬರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿದಿತ್ತು.

6- ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ 94 ಇನ್ನಿಂಗ್ಸ್‌ಗಳಲ್ಲಿ 3000 IPL ರನ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ವೇಗವಾಗಿ ಮೂರು ಸಾವಿರ ರನ್ ಪೂರೈಸಿದ ದಾಖಲೆಯ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಅವರೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ. ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಕ್ರಮವಾಗಿ 75 ಮತ್ತು 80 ಇನ್ನಿಂಗ್ಸ್ 3 ಸಾವಿರ ರನ್ ಪೂರೈಸಿದ್ದರು.

7-RCB ತಂಡವು 21 ನೇ ಬಾರಿಗೆ 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್​ಗಳಿಸುವ ಮೂಲಕ ದಾಖಲೆ ಬರೆದಿದೆ. ಪಂಜಾಬ್ ವಿರುದ್ದ 205 ರನ್ ಬಾರಿಸುವ ಮೂಲಕ ಆರ್​ಸಿಬಿ ಈ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಈ ದಾಖಲೆ 20 ಬಾರಿ 200+ ರನ್​ ಬಾರಿಸಿದ CSK ಹೆಸರಿನಲ್ಲಿತ್ತು.

8- ಪಂಜಾಬ್ ಕಿಂಗ್ಸ್ 2ನೇ ಬಾರಿ 206 ರನ್‌ಗಳನ್ನು ಚೇಸ್ ಮಾಡುವ ಮೂಲಕ ದಾಖಲೆ ಬರೆದಿದೆ.

9- ಪಂಜಾಬ್ ಕಿಂಗ್ಸ್​ ಮತ್ತು RCB ನಡುವಣ ಪಂದ್ಯದಲ್ಲಿ ಒಟ್ಟು 45 ಎಕ್ಸ್‌ಟ್ರಾ ರನ್​ಗಳನ್ನು ನೀಡಲಾಗಿತ್ತು. ಇದು ಐಪಿಎಲ್​ ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ಮೂಡಿಬಂದ ಅತ್ಯಧಿಕ ಎಕ್ಸ್​ಟ್ರಾ ರನ್. ಈ ಮೂಲಕ ಆರ್​ಸಿಬಿ-ಪಂಜಾಬ್ ಕಿಂಗ್ಸ್ ಬೌಲರ್​ಗಳು ಕಳಪೆ ದಾಖಲೆ ಬರೆದಿದ್ದಾರೆ.

10 – ಆಯುಷ್ ಬದೋನಿ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಒಂಬತ್ತನೇ ಭಾರತೀಯ ಆಟಗಾರ ಎನಿಸಿಕೊಂಡರು.

11 – ಮ್ಯಾಥ್ಯೂ ವೇಡ್ 11 ವರ್ಷಗಳ ನಂತರ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ವೇಡ್ ಕೊನೆಯ ಬಾರಿಗೆ 2011 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಈ ಮೂಲಕ ದೀರ್ಘಾವಧಿ ಬಳಿಕ ಐಪಿಎಲ್​ನಲ್ಲಿ ಮತ್ತೆ ಕಾಣಿಸಿಕೊಂಡ ಆಟಗಾರ ಎಂಬ ದಾಖಲೆಯನ್ನು ವೇಡ್ ಬರೆದಿದ್ದಾರೆ.

12 – ರಾಜಸ್ಥಾನ್ ರಾಯಲ್ಸ್ ಪರ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಸಂಜು ಸ್ಯಾಮ್ಸನ್ ನಿರ್ಮಿಸಿದ್ದಾರೆ. ಆರ್‌ಆರ್‌ ಪರ ಸ್ಯಾಮ್ಸನ್ ಅತಿ ಹೆಚ್ಚು ಸಿಕ್ಸರ್‌ಗಳನ್ನು (110) ಸಿಡಿಸುವ ಶೇನ್ ವ್ಯಾಟ್ಸನ್ ಅವರ 109 ಸಿಕ್ಸರ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

13- ಆರ್​ಸಿಬಿ ವೇಗಿ ಹರ್ಷಲ್ ಪಟೇಲ್ ಐಪಿಎಲ್​ನಲ್ಲಿ ಸತತವಾಗಿ ಎರಡು ಮೇಡನ್‌ ಓವರ್​ಗಳನ್ನು ಎಸೆಯುವ ಮೂಲಕ ದಾಖಲೆ ಬರೆದಿದ್ದಾರೆ. ವಿಶೇಷ ಎಂದರೆ 2020 ರಲ್ಲಿ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಇದೀಗ ಹರ್ಷಲ್ ಪಟೇಲ್ ಸಿರಾಜ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

14- 171 ವಿಕೆಟ್‌ಗಳೊಂದಿಗೆ ಡ್ವೇನ್ ಬ್ರಾವೋ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಮೂಲಕ ಲಸಿತ್ ಮಾಲಿಂಗ (170) ಹೆಸರಿನಲ್ಲಿದ್ದ ಸರ್ವಶ್ರೇಷ್ಠ ದಾಖಲೆಯನ್ನು ಅಳಿಸಿಹಾಕಿದರು.

15- ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್​ನಲ್ಲಿ 7000 ಸಾವಿರ ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಬರೆದರು.

16– ಉಮೇಶ್ ಯಾದವ್ 10 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಐಪಿಎಲ್​ನಲ್ಲಿ ಅತೀ ಹೆಚ್ಚು ಬಾರಿ ಮ್ಯಾನ್​ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ವೇಗಿ ಎಂಬ ದಾಖಲೆ ಬರೆದರು.

17- ಪಂಜಾಬ್ ಕಿಂಗ್ಸ್​ ವಿರುದ್ದ 4 ವಿಕೆಟ್ ಪಡೆಯುವ ಮೂಲಕ ಐಪಿಎಲ್​ನಲ್ಲಿ ಒಂದೇ ತಂಡದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನೂ ಕೂಡ ಉಮೇಶ್ ಯಾದವ್ ಬರೆದಿದ್ದಾರೆ. ಉಮೇಶ್ ಯಾದವ್ ಪಂಜಾಬ್ ಕಿಂಗ್ಸ್ ವಿರುದ್ದ ಒಟ್ಟು 33 ವಿಕೆಟ್ ಪಡೆದಿದ್ದಾರೆ. ಈ ಹಿಂದೆ ಈ ದಾಖಲೆ ಸಿಎಸ್​ಕೆ ವಿರುದ್ದ 31 ವಿಕೆಟ್ ಪಡೆದಿದ್ದ ಲಸಿತ್ ಮಾಲಿಂಗ್ ಹೆಸರಿನಲ್ಲಿತ್ತು.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

Follow us on

Related Stories

Most Read Stories

Click on your DTH Provider to Add TV9 Kannada