ನಾಲ್ವರು ಅಂತರ ಜಿಲ್ಲಾ ಕುಖ್ಯಾತ ದುಬಾರಿ ಬೈಕ್ ಕಳ್ಳರ ಬಂಧನ; ಆರೋಪಿಗಳಿಂದ 30,50,000 ರೂ. ಲಕ್ಷ ಮೌಲ್ಯದ ಒಟ್ಟು 22 ಬೈಕ್ ಜಪ್ತಿ
ದೇವಸ್ಥಾನಕ್ಕೆ ಕನ್ನ ಹಾಕಿ ಲಕ್ಷಾಂತರರು ಮೌಲ್ಯದ ಚಿನ್ನಾಭರಣ ಮತ್ತು ಕಾಣಿಕೆ ಹಣ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನವಚಂಡಿಕಾ ದೇವಸ್ಥಾನದ ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.
ಶಿವಮೊಗ್ಗ: ನಾಲ್ವರು ಅಂತರ ಜಿಲ್ಲಾ ಕುಖ್ಯಾತ ದುಬಾರಿ ಬೈಕ್ (Bike) ಕಳ್ಳರ ಬಂಧನ ಮಾಡಲಾಗಿದೆ. ಹಾವೇರಿ ನಗರದ ಸುದೀಪ (19).. ಅಜಯ (20).. ಗುರುರಾಜ್ (25) ಭದ್ರಾವತಿಯ ಗಂಗಾಧರ್ (23) ನಾಲ್ವರು ಬಂಧಿತ ಬೈಕ್ ಕಳ್ಳರು. ಶಿವಮೊಗ್ಗ, ಹಾವೇರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿ ಬೈಕ್ ಕಳ್ಳತನ ಮಾಡಲಾಗುತ್ತಿತ್ತು. 18,0000 ರೂ ಮೌಲ್ಯದ 8 ಬುಲೇಟ್ ಬೈಕ್, 2,50,000 ರೂ ಮೌಲ್ಯದ 1 ಕೆಟಿಎಂ ಬೈಕ್, 2,50,000 ರೂ. ಮೌಲ್ಯದ 1 ಡ್ಯೂಕ್ ಬೈಕ್, 1,25,000 ರೂ. ಮೌಲ್ಯದ ಬಜಾಜ್ ಪಲ್ಸರ್ ಸುಮಾರು 5,00000 ರೂ. ಮೌಲ್ಯದ 09 ಸ್ಪಲೇಂಡರ್ ಪ್ಲಸ್ ಬೈಕ್, 75,000 ರೂ. ಮೌಲ್ಯದ 1 ಯಮಹಾ ಬೈಕ್ ಮತ್ತು ಸುಮಾರು 50,000 ರೂ. ಮೌಲ್ಯದ 1 ಸ್ಪಲೇಂಡರ್ ಪ್ರೋ ಬೈಕ್ ಜಪ್ತಿ ಮಾಡಲಾಗಿದೆ. ಆರೋಪಿತರಿಂದ ಈವರೆಗೆ ಒಟ್ಟು 30,50,000 ರೂ. ಲಕ್ಷ ಮೌಲ್ಯದ ಒಟ್ಟು 22 ಬೈಕ್ ಜಪ್ತಿ ಮಾಡಲಾಗಿದೆ. ಸಾಗರ ನಗರ ಪೊಲೀಸ್ ಠಾಣೆಯಲ್ಧಿ ಕೇಸ್ ದಾಖಲು ಮಾಡಲಾಗಿದೆ.
ಅಭಿಷೇಕ ಕೊಲೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ:
ಚಿಕ್ಕೋಡಿ: ಅಭಿಷೇಕ ಕೊಲೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಮೂವರು ಅಪ್ರಾಪ್ತರು ಸೇರಿದಂತೆ ಒಬ್ಬ ಯುವಕ ಸೆರೆಯಾಗಿದ್ದಾನೆ. ಅಮನ್ ಎಕ್ಸಂಬೆ (21)ದ ಯುವಕ ಸೆರೆಯಾಗಿದ್ದಾನೆ. ನಾಲ್ವರು ಆರೋಪಿಗಳು ನಿಪ್ಪಾಣಿ ಪಟ್ಟಣ ನಿವಾಸಿಗಳಾಗಿದ್ದಾರೆ. ಖಾಸಗೀ ಮಲ್ಟಿಪ್ಲೆಕ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿ. ಕಳೆದ ಎರಡ್ಮೂರು ತಿಂಗಳಿಂದ ಮಲ್ಟಿಪ್ಲೆಕ್ಸ್ ನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುವ ವೇಳೆ ನಿಪ್ಪಾಣಿ ಪಟ್ಟಣದ ಮಾನವಿ ಗಲ್ಲಿಯಲ್ಲಿ ಕೊಲೆ ನಡೆದಿತ್ತು. ಮೂರು ತಿಂಗಳ ಹಿಂದೆ ಕ್ರಿಕೆಟ್ ವಿಚಾರಕ್ಕೆ ಗಲಾಟೆ ಆಗಿತ್ತು. ಈ ವೇಳೆ ಅಭಿಷೇಕ್ ತಾಯಿಗೆ ನಿಂಧಿಸಲಾಗಿತ್ತು. ಈ ವಿಚಾರಕ್ಕೆ ಅಭಿ ಅವರನ್ನ ಹೊಡೆದಿದ್ದ. ಅದೇ ಸೇಡನ್ನ ಇಟ್ಟುಕೊಂಡು ಗಾಂಜಾ ಮತ್ತಲ್ಲಿ ಅಭಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ದೇವಸ್ಥಾನಕ್ಕೆ ಕನ್ನ ಹಾಕಿ ಲಕ್ಷಾಂತರರು ಮೌಲ್ಯದ ಚಿನ್ನಾಭರಣ ಕಳ್ಳತನ:
ಕಾರವಾರ: ದೇವಸ್ಥಾನಕ್ಕೆ ಕನ್ನ ಹಾಕಿ ಲಕ್ಷಾಂತರರು ಮೌಲ್ಯದ ಚಿನ್ನಾಭರಣ ಮತ್ತು ಕಾಣಿಕೆ ಹಣ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನವಚಂಡಿಕಾ ದೇವಸ್ಥಾನದ ಹಿಂಬದಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ದೇವಿಯ ಬಂಗಾರದ ಹಾರ, ಮಾಂಗಲ್ಯ ಸರ, ಬೆಳ್ಳಿಯ ಬಾಗಿಲ ಕವಚ, ಕಾಣಿಕೆ ಹುಂಡಿಯ ಹಣ ಸೇರಿದಂತೆ ಲಕ್ಷಾಂತರ ರೂ. ಕಳ್ಳತನವಾಗಿದೆ. ಸ್ಥಳಕ್ಕೆ ತಹಸೀಲ್ದಾರ ಎನ್.ಎಫ್. ನರೋನ್ ಹಾಗೂ ಪೊಲೀಸರ ಬೇಟಿ ನೀಡಿ ಪರಿಶೀಲನೆ ಮಾಡಿದ್ದು, ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕತಣ ದಾಖಲಾಗಿದೆ.
ಇದನ್ನೂ ಓದಿ: