AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Cases: ಭಾರತದಲ್ಲಿ ಮತ್ತೆ ಕೊವಿಡ್ ಭೀತಿ ಹೆಚ್ಚಳ; ದೆಹಲಿ, ಗುರುಗ್ರಾಮ, ನೊಯ್ಡಾ, ಮುಂಬೈನಲ್ಲಿ ಕೊರೊನಾ ಕೇಸ್ ಹೆಚ್ಚಳ

ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್‌ ಬಿಎ.4 ಹಾಗೂ ಬಿಎ.5 ಎಂಬ 2 ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

Covid-19 Cases: ಭಾರತದಲ್ಲಿ ಮತ್ತೆ ಕೊವಿಡ್ ಭೀತಿ ಹೆಚ್ಚಳ; ದೆಹಲಿ, ಗುರುಗ್ರಾಮ, ನೊಯ್ಡಾ, ಮುಂಬೈನಲ್ಲಿ ಕೊರೊನಾ ಕೇಸ್ ಹೆಚ್ಚಳ
ಕೊವಿಡ್-19
TV9 Web
| Edited By: |

Updated on: Apr 14, 2022 | 4:57 PM

Share

ನವದೆಹಲಿ: ಭಾರತದಲ್ಲಿ ಇಂದು 1,007 ಹೊಸ ಕೊರೊನಾವೈರಸ್ ಸೋಂಕುಗಳು (New Covid-19 Cases) ಪತ್ತೆಯಾಗಿದೆ. ದೈನಂದಿನ ಕೊವಿಡ್ ಪಾಸಿಟಿವ್ ದರವು ಶೇ. 0.23ರಷ್ಟಿದೆ. COVID-19 ಪ್ರಕರಣಗಳ ಹೆಚ್ಚಳವು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ 4 ಪ್ರಮುಖ ನಗರಗಳಲ್ಲಿ ಹೆಚ್ಚಾಗಿದೆ. ಬುಧವಾರ ದೆಹಲಿಯಲ್ಲಿ 299 ಹೊಸ COVID-19 ಪ್ರಕರಣಗಳು ದಾಖಲಾಗಿವೆ. ಎರಡು ದಿನಗಳ ಹಿಂದೆ ದಾಖಲಾದ ದೈನಂದಿನ ಎಣಿಕೆಗಿಂತ ಇದು ಶೇ. 118ರಷ್ಟು ಜಿಗಿತವಾಗಿದೆ.

ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಒಂದು ವಾರದಲ್ಲಿ ಶೇ. 0.5ರಿಂದ 2.70ಕ್ಕೆ ಜಿಗಿದಿದೆ. ಬುಧವಾರದಂದು ರಾಷ್ಟ್ರ ರಾಜಧಾನಿಯಲ್ಲಿ 18,66,881 ಕೊವಿಡ್ ಕೇಸುಗಳು ಪತ್ತೆಯಾಗಿತ್ತು. ಹಾಗೇ ಸಾವಿನ ಸಂಖ್ಯೆ 26,158ಕ್ಕೆ ಏರಿತ್ತು. ಇದರ ನಡುವೆ ದೆಹಲಿಯ ನೆರೆಯ ನೋಯ್ಡಾ ಮತ್ತು ಗುರುಗ್ರಾಮದಲ್ಲಿ ಕೂಡ ದೈನಂದಿನ COVID-19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿದೆ. ಗುರುಗ್ರಾಮದಲ್ಲಿ ಸುಮಾರು 40 ದಿನಗಳ ನಂತರ 128 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ನೋಯ್ಡಾದಲ್ಲಿ ಒಂದು ವಾರದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ.

ಗುರುಗ್ರಾಮದಲ್ಲಿ ಮಾರ್ಚ್ 4ರಂದು ಕೊನೆಯ ಬಾರಿಗೆ COVID-19 ಪ್ರಕರಣಗಳು 100ರ ಗಡಿ ದಾಟಿದ್ದು, 115 ಪ್ರಕರಣಗಳು ದಾಖಲಾಗಿವೆ. ಇದರ ನಂತರ ಕೊವಿಡ್ ಕೇಸುಗಳು 100ಕ್ಕಿಂತ ಕಡಿಮೆಯಾಗಿದೆ. ಹರಿಯಾಣವು ಫೆಬ್ರವರಿ 16ರಂದು ಎಲ್ಲಾ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದೆ.

ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಾದ್ಯಂತ ಇರುವ ಎಲ್ಲಾ ಶಾಲೆಗಳು ಯಾವುದೇ ಮಗುವಿಗೆ ಕೆಮ್ಮು, ನೆಗಡಿ, ಜ್ವರ, ಅತಿಸಾರ ಅಥವಾ ಕೋವಿಡ್-19 ನ ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಚಿಕಿತ್ಸೆಗಾಗಿ ತಕ್ಷಣವೇ ಆರೋಗ್ಯ ಇಲಾಖೆಗೆ ತಿಳಿಸಲು ಸೂಚಿಸಲಾಗಿದೆ. ಸೋಮವಾರ 13 ಮಕ್ಕಳು ಮತ್ತು ಮೂವರು ಶಿಕ್ಷಕರಿಗೆ ಸೋಂಕು ತಗುಲಿರುವ ಒಂದು ಶಾಲೆಯು ಮುಂದಿನ ವಾರದವರೆಗೆ ಆನ್‌ಲೈನ್​ನಲ್ಲಿ ಪಾಠ ಮಾಡಲಿದೆ. ಈಗ COVID-19 ಪಾಸಿಟಿವ್ ಪತ್ತೆಯಾಗಿರುವ 10 ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಸೇರಿದವರು ಎಂದು ತಿಳಿದುಬಂದಿದ್ದರೂ ಇತರ ಶಾಲೆಗಳ ವಿವರಗಳು ಖಚಿತವಾಗಿಲ್ಲ.

ಇದಲ್ಲದೇ ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ ಒಮಿಕ್ರೋನ್‌ ಬಿಎ.4 ಹಾಗೂ ಬಿಎ.5 ಎಂಬ 2 ಹೊಸ ರೂಪಾಂತರಿಗಳು ಪತ್ತೆಯಾಗಿವೆ. ಇವು ಹೆಚ್ಚು ಅಪಾಯಕಾರಿ ಅಥವಾ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಕೊವಿಡ್​ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರಕ್ಕಾಗಿ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್​

ಕೊವಿಡ್-19 ಹೋಗಿಲ್ಲ, ರೂಪಗಳನ್ನು ಬದಲಾಯಿಸುತ್ತಾ ಮತ್ತೆ ಬರುತ್ತಿದೆ: ಪ್ರಧಾನಿ ಮೋದಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?