ಕೊವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರಕ್ಕಾಗಿ ಸಮಯ ನಿಗದಿಪಡಿಸಿದ ಸುಪ್ರೀಂ ಕೋರ್ಟ್
ಮಾರ್ಚ್ 20ರ ಮೊದಲು ಸಂಭವಿಸಿದ ಸಾವುಗಳಿಗೆ ಕ್ಲೇಮ್‌ಗಳನ್ನು 60 ದಿನಗಳಲ್ಲಿ ಸಲ್ಲಿಸಬೇಕು. ಆದರೆ, ಮಾರ್ಚ್ 20ರ ನಂತರದ ಸಾವುಗಳಿಗೆ ಎಕ್ಸ್ ಗ್ರೇಷಿಯಾವನ್ನು ಸಲ್ಲಿಸಲು 90 ದಿನಗಳ ಸಮಯವನ್ನು ನೀಡಲಾಗಿದೆ.
ನವದೆಹಲಿ: ಕೊವಿಡ್ನಿಂದ (COVID-19) ಸಾವನ್ನಪ್ಪಿರುವವರ ಕುಟುಂಬಸ್ಥರು ಪರಿಹಾರಕ್ಕಾಗಿ ಕ್ಲೇಮ್ ಮಾಡಲು ಸುಪ್ರೀಂ ಕೋರ್ಟ್ (Supreme Court) ಸಮಯವನ್ನು ನಿಗದಿಪಡಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮಾರ್ಚ್ 20ರ ಮೊದಲು ಸಂಭವಿಸಿದ ಕೊವಿಡ್ ಸಾವುಗಳಿಗೆ ಕ್ಲೇಮ್‌ಗಳನ್ನು 60 ದಿನಗಳಲ್ಲಿ ಸಲ್ಲಿಸಬೇಕು. ಆದರೆ, ಮಾರ್ಚ್ 20ರ ನಂತರದ ಸಾವುಗಳಿಗೆ ಎಕ್ಸ್ ಗ್ರೇಷಿಯಾವನ್ನು ಸಲ್ಲಿಸಲು 90 ದಿನಗಳ ಸಮಯವನ್ನು ನೀಡಲಾಗಿದೆ. ಕ್ಲೇಮ್‌ಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಕ್ಲೇಮ್‌ನ ಸ್ವೀಕೃತಿಯ ದಿನಾಂಕದಿಂದ 30 ದಿನಗಳ ಅವಧಿಯೊಳಗೆ ಪರಿಹಾರದ ಪಾವತಿಯನ್ನು ಮಾಡಲು ಹಿಂದಿನ ಆದೇಶವನ್ನು ಜಾರಿಗೊಳಿಸುವುದನ್ನು ಮುಂದುವರಿಸಲಾಗುತ್ತದೆ.
ಆದರೆ, ಯಾವುದೇ ಹಕ್ಕುದಾರರು ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಹಕ್ಕುದಾರರು ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು. ಅದನ್ನು ಪರಿಗಣಿಸುವ ಪ್ಯಾನೆಲ್ ಮೂಲಕ ಕ್ಲೇಮ್ ಮಾಡಲು ನ್ಯಾಯಾಲಯವು ನಿರ್ದೇಶಿಸಿದೆ. ಪ್ರಕರಣದ ಆಧಾರದ ಮೇಲೆ, ಮತ್ತು ನಿರ್ದಿಷ್ಟ ಹಕ್ಕುದಾರರು ನಿಗದಿತ ಸಮಯದೊಳಗೆ ಹಕ್ಕು ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬುದು ಸಮಿತಿಯ ಗಮನಕ್ಕೆ ಬಂದರೆ ಅರ್ಹತೆಯ ಆಧಾರದಲ್ಲಿ ಆ ಪ್ರಕರಣವನ್ನು ಪರಿಗಣಿಸಬಹುದು ಎಂದು ಸರ್ಕಾರ ಹೇಳಿದೆ.
ಇದಲ್ಲದೆ, ನಕಲಿ ಕ್ಲೇಮ್‌ಗಳ ಅಪಾಯವನ್ನು ಕಡಿಮೆ ಮಾಡುವ ಸಲುವಾಗಿ ಕ್ಲೇಮ್ ಅರ್ಜಿಗಳ ಶೇ.5ರಷ್ಟು ಪರಿಶೀಲನೆಯನ್ನು ಮೊದಲ ನಿದರ್ಶನದಲ್ಲಿ ಮಾಡಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ. ಯಾರಾದರೂ ನಕಲಿ ಕ್ಲೈಮ್ ಮಾಡಿರುವುದು ಕಂಡುಬಂದರೆ DM ಆಕ್ಟ್, 2005ರ ಸೆಕ್ಷನ್ 52ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ಶಿಕ್ಷೆಗೆ ಗುರಿಯಾಗುತ್ತಾರೆ.
861 ಹೊಸ ಪ್ರಕರಣಗಳೊಂದಿಗೆ ಭಾರತದ ಕೋವಿಡ್-19 ಸಂಖ್ಯೆ 4,30,36,132ಕ್ಕೆ ಏರಿದೆ. ಆದರೆ, ಕೊವಿಡ್ ರೋಗದ ಸಾವಿನ ಸಂಖ್ಯೆ 5,21,691ಕ್ಕೆ ಏರಿದೆ. 6 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಆದರೆ, ಕೊವಿಡ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 11,058ಕ್ಕೆ ಇಳಿದಿದೆ. ಸಕ್ರಿಯ ಪ್ರಕರಣಗಳು ಒಟ್ಟು ಕ್ಯಾಸೆಲೋಡ್‌ನ ಶೇ. 0.03ರಷ್ಟಿದ್ದರೆ ರಾಷ್ಟ್ರೀಯ ಚೇತರಿಕೆ ದರವು ಶೇ. 98.76ರಷ್ಟಿದೆ.
ಇದನ್ನೂ ಓದಿ: ಕೊವಿಡ್ 19 ಲಸಿಕೆ 2ನೇ ಡೋಸ್ ಪಡೆದು 9 ತಿಂಗಳು ಕಳೆದವರೆಲ್ಲ 3ನೇ ಡೋಸ್ಗೆ ಸಿದ್ಧರಾಗಿ; ಈ ವಿಚಾರಗಳು ನಿಮ್ಮ ಗಮನದಲ್ಲಿರಲಿ
ಏಪ್ರಿಲ್ 10 ರಿಂದ ಎಲ್ಲಾ ವಯಸ್ಕರಿಗೆ ಕೊವಿಡ್ ಬೂಸ್ಟರ್ ಡೋಸ್: ಆರೋಗ್ಯ ಸಚಿವಾಲಯ
Published On - 2:44 pm, Mon, 11 April 22