UGC NET Exam 2022: ಜೂನ್ ಮೊದಲ ವಾರದಲ್ಲಿ 2022ರ ಯುಜಿಸಿ ನೆಟ್ ಪರೀಕ್ಷೆ; ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟ

ಮುಂದಿನ UGC-NET ಅನ್ನು ಜೂನ್ 2022ರ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲಾಗುವುದು. NTA ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

UGC NET Exam 2022: ಜೂನ್ ಮೊದಲ ವಾರದಲ್ಲಿ 2022ರ ಯುಜಿಸಿ ನೆಟ್ ಪರೀಕ್ಷೆ; ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 11, 2022 | 1:19 PM

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಿನ ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET)ಯನ್ನು ಈ ವರ್ಷದ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲಿದೆ ಎಂದು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಆದರೆ, UGC-NET ಪರೀಕ್ಷೆಯ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. NTA ನೆಟ್ ಪರೀಕ್ಷೆಯ ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.

“ಮುಂದಿನ UGC-NET ಅನ್ನು ಜೂನ್ 2022ರ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲಾಗುವುದು. NTA ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ನಿಖರವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು.” ಎಂದು ಜಗದೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

UGC-NET ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಆದರೆ, ಕೊವಿಡ್-9 ಸಾಂಕ್ರಾಮಿಕ ರೋಗದಿಂದಾಗಿ UGC ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಈಬಾರಿ ವರ್ಷಕ್ಕೆ 2 ಬಾರಿಯ ಬದಲು ವರ್ಷಕ್ಕೊಮ್ಮೆ ನೆಟ್ ಪರೀಕ್ಷೆ ನಡೆಸಲು ಯುಜಿಸಿ ನಿರ್ಧರಿಸಿದೆ. ಕಳೆದ ವರ್ಷ NTA ಯುಜಿಸಿ-ನೆಟ್ ಡಿಸೆಂಬರ್ 2020 ಮತ್ತು ಜೂನ್ 2021ರ 1ನೇ ಹಂತದ ಪರೀಕ್ಷೆಯನ್ನು ನವೆಂಬರ್ 20 ಮತ್ತು ಡಿಸೆಂಬರ್ 5ರ ನಡುವೆ ನಡೆಸಿತ್ತು. ಹಂತ IIರ ಪರೀಕ್ಷೆಯನ್ನು ಡಿಸೆಂಬರ್ 24ರಿಂದ ಡಿಸೆಂಬರ್ 27ರ ನಡುವೆ ನಡೆಸಿತ್ತು. ಹಂತ IIIನೇ ಪರೀಕ್ಷೆಯನ್ನು ಜನವರಿ 4 ಮತ್ತು 5ರಂದು ನಡೆಸಿತ್ತು.

ಭಾರತೀಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕ, ಜೂನಿಯರ್ ರಿಸರ್ಚ್ ಫೆಲೋಶಿಪ್ ಅಥವಾ ಎರಡರ ಅರ್ಹತೆಗಾಗಿ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅಥವಾ ಯುಜಿಸಿ ನೆಟ್ ಅನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪರವಾಗಿ ನಡೆಸಲಾಗುತ್ತದೆ.

ಇದನ್ನೂ ಓದಿ: UGC NET Results: ಯುಜಿಸಿ ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ

UGC Exams: ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲ ಆಫ್​ಲೈನ್ ಪರೀಕ್ಷೆಗಳನ್ನು ಮುಂದೂಡಿದ ಯುಜಿಸಿ

Published On - 1:18 pm, Mon, 11 April 22