UGC NET Results: ಯುಜಿಸಿ ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
80ಕ್ಕೂ ಹೆಚ್ಚು ವಿಷಯಗಳಿಗೆ UGC NET ಪರೀಕ್ಷೆಯನ್ನು ನಡೆಸಲಾಗಿತ್ತು. ಭಾರತದ 239 ನಗರಗಳಲ್ಲಿ 837 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 12 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (NTA) ಇಂದು 2020ನೇ ಸಾಲಿನ ಡಿಸೆಂಬರ್ ಮತ್ತು 2021ನೇ ಸಾಲಿನ ಜೂನ್ ಅವಧಿಯ ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 2020ರ ಡಿಸೆಂಬರ್ ಮತ್ತು 2021ರ ಜೂನ್ ತಿಂಗಳಲ್ಲಿ ಯುಜಿಸಿ ಎನ್ಇಟಿ (ನೆಟ್) ಪರೀಕ್ಷೆಯನ್ನು 2021ರ ನವೆಂಬರ್ 20 ಮತ್ತು 2022ರ ಜನವರಿ 5ರ ನಡುವೆ ನಡೆಸಲಾಗಿತ್ತು. 80ಕ್ಕೂ ಹೆಚ್ಚು ವಿಷಯಗಳಿಗೆ UGC NET ಪರೀಕ್ಷೆಯನ್ನು ನಡೆಸಲಾಗಿತ್ತು. ಭಾರತದ 239 ನಗರಗಳಲ್ಲಿ 837 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಸುಮಾರು 12 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.
UGC NET ಡಿಸೆಂಬರ್ 2020, ಜೂನ್ 2021 ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ?:
ಹಂತ 1: UGC NET ನ ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ.
ಹಂತ 2: ಆ ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಲು ಲಿಂಕ್ ಕ್ಲಿಕ್ ಮಾಡಿ.
ಹಂತ 3: ಅದು ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸುತ್ತದೆ.
ಹಂತ 4: ಆ ಪುಟದಲ್ಲಿ ನಿಮ್ಮ ರೋಲ್ ನಂಬರ್ ಮತ್ತು ಇತರ ವಿವರಗಳನ್ನು ನಮೂದಿಸಿ.
ಹಂತ 5: ಆಗ ನಿಮ್ಮ UGC NET ಫಲಿತಾಂಶಗಳನ್ನು ಪರದೆಯ ಮೇಲೆ ಪ್ರಕಟವಾಗುತ್ತದೆ.
ಹಂತ 6: ಮುಂದಿನ ಅನುಕೂಲಕ್ಕಾಗಿ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಯುಜಿಸಿ ಹೇಳಿದ್ದರೂ ನಿಖರವಾದ ದಿನಾಂಕ ಮತ್ತು ಸಮಯವನ್ನು ಇನ್ನೂ ಬಿಡುಗಡೆ ಮಾಡಿರಲಿಲ್ಲ. ಪ್ರಮುಖ ನವೀಕರಣಗಳಿಗಾಗಿ ಅಭ್ಯರ್ಥಿಗಳು UGC NETನ ಅಧಿಕೃತ ವೆಬ್‌ಸೈಟ್ ugcnet.nta.nic.inಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: UGC Exams: ಮೇ ತಿಂಗಳಲ್ಲಿ ನಡೆಯಬೇಕಿದ್ದ ಎಲ್ಲ ಆಫ್ಲೈನ್ ಪರೀಕ್ಷೆಗಳನ್ನು ಮುಂದೂಡಿದ ಯುಜಿಸಿ
UGC NET 2021: ಯುಜಿಸಿ ನೆಟ್ ಪರೀಕ್ಷೆಯ 2ನೇ ಹಂತದ ವೇಳಾಪಟ್ಟಿ ಬಿಡುಗಡೆ; ಪರೀಕ್ಷೆ, ದಿನಾಂಕದ ಮಾಹಿತಿ ಇಲ್ಲಿದೆ
Published On - 1:54 pm, Sat, 19 February 22